Snapchat+ 2 ಮಿಲಿಯನ್ ಸಬ್‌ಸ್ಕ್ರೈಬರ್‌ಗಳ ಗಡಿಯನ್ನು ದಾಟಿದೆ
ಅನನ್ಯ, ಪ್ರಾಯೋಗಿಕ ಮತ್ತು ಬಿಡುಗಡೆಗೆ ಮುಂಚಿನ ವೈಶಿಷ್ಟ್ಯಗಳಿಗೆ ಪ್ರವೇಶ ಒದಗಿಸುವ ನಮ್ಮ ಸಬ್‌ಸ್ಕ್ರಿಪ್ಶನ್ ಶ್ರೇಣಿಯ Snapchat+ ಅನ್ನು 2 ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್‌ಗಳು ಬಳಸುತ್ತಿದ್ದಾರೆ.
Snapchat+ ಸಬ್‌ಸ್ಕ್ರೈಬರ್‌ಗಳು ತಮ್ಮ ಸ್ನೇಹಿತರು ಮತ್ತು ಮೆಚ್ಚಿನ ಕ್ರಿಯೇಟರ್‌ಗಳೊಂದಿಗಿನ ಸಂವಹನವನ್ನು ವರ್ಧಿಸುವ ಹಾಗೂ ತಮ್ಮ ಆ್ಯಪ್‌ನ ನೋಟ ಮತ್ತು ಅನುಭವವನ್ನು ಕಸ್ಟಮೈಸ್ ಮಾಡುವ ವೈಶಿಷ್ಟ್ಯಗಳನ್ನು ಇಷ್ಟಪಡುತ್ತಿದ್ದಾರೆ. ಮೆಚ್ಚಿನವುಗಳಲ್ಲಿ ಇವು ಸೇರಿವೆ ಆದ್ಯತೆಯ ಕಥೆ ಪ್ರತ್ಯುತ್ತರಗಳು – ಇದು ನಿಮ್ಮ ಮೆಚ್ಚಿನ Snap ಸ್ಟಾರ್‌ನ ಇನ್‌ಬಾಕ್ಸ್‌ನಲ್ಲಿ ನಿಮ್ಮ DM ಗಳನ್ನು ಮೇಲ್ಗಡೆ ಇರಿಸುತ್ತದೆ, ಮತ್ತು, ಎಂದೆಂದಿಗೂ ನೆಚ್ಚಿನ ಸ್ನೇಹಿತರನ್ನು ಪಿನ್ ಮಾಡಿ – ಇದು ನಿಮ್ಮ #1 ಸ್ನೇಹಿತರೊಂದಿಗಿನ ಸಂಭಾಷಣೆಯನ್ನು ನಿಮ್ಮ ಚಾಟ್ ಟ್ಯಾಬ್‌ನ ಮೇಲ್ಭಾಗದಲ್ಲಿ ಉಳಿಸುತ್ತದೆ, ಜೊತೆಗೆ ವಿಶಿಷ್ಟ ಆ್ಯಪ್ ಐಕಾನ್‌ಗಳೊಂದಿಗೆ ನಿಮ್ಮ ಮುಖಪುಟ ಸ್ಕ್ರೀನ್ ಅನ್ನು ವೈಯಕ್ತಿಕಗೊಳಿಸಲು ಬೆಳೆಯುತ್ತಿರುವ ವೈವಿಧ್ಯಮಯ ವಿನೋದದ ಆಯ್ಕೆಗಳಿವೆ.
Snapchat+ ಯಾವಾಗಲೂ ವಿಕಸನವಾಗುತ್ತಿರುತ್ತದೆ. ಸಬ್‌ಸ್ಕ್ರೈಬರ್‌ಗಳು ಪ್ರಸ್ತುತ ಹನ್ನೆರಡಕ್ಕಿಂತ ಹೆಚ್ಚು ಅನನ್ಯ ವೈಶಿಷ್ಟ್ಯಗಳಿಗೆ ಪ್ರವೇಶ ಹೊಂದಿದ್ದಾರೆ ಮತ್ತು ಆಗಾಗ ಹೊಸ ವೈಶಿಷ್ಟ್ಯ ಬಿಡುಗಡೆಗಳನ್ನು ಪಡೆಯುತ್ತಾರೆ.
ಉದಾಹರಣೆಗೆ, ನಾವು ಇತ್ತೀಚೆಗೆ ಕಸ್ಟಮೈಸ್ ಮಾಡಬಹುದಾದ ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ಸೇರಿಸಿದ್ದೇವೆ, ಇದು ಹತ್ತು ಅನಿಮೇಟೆಡ್ ಕ್ಯಾಪ್ಚರ್ ಬಟನ್‌ಗಳಲ್ಲಿ ಒಂದರೊಂದಿಗೆ ನೀವು ಶೂಟ್ ಮಾಡುವ ವಿಧಾನವನ್ನು ವೈಯಕ್ತಿಕಗೊಳಿಸಲು ನಿಮಗೆ ಅವಕಾಶ ನೀಡುತ್ತದೆ. ಈಗ, ಒಂದು Snap ಸೆರೆಹಿಡಿಯಲು ಅದೇ ಹಳೆಯ ವೃತ್ತವನ್ನು ಟ್ಯಾಪ್ ಮಾಡುವ ಬದಲಾಗಿ, ನರ್ತಿಸುವ ಹೃದಯ, ಗಾಳಿಗುಳ್ಳೆ, ಫಿಜೆಟ್ ಸ್ಪಿನ್ನರ್ ಅಥವಾ ಬೆಂಕಿಯ ಜ್ವಾಲೆಗೆ ರೂಪಾಂತರಿಸಲ್ಪಟ್ಟಿರುವ ಕ್ಯಾಪ್ಚರ್ ಬಟನ್‌ಗೆ "ಹಲೋ" ಹೇಳಿ.
ಚಾಟ್ ವಾಲ್‌ಪೇಪರ್‌ಗಳೊಂದಿಗೆ ಸಬ್‌ಸ್ಕ್ರೈಬರ್‌ಗಳು ಸ್ನೇಹಿತರೊಂದಿಗಿನ ಸಂಭಾಷಣೆಗಾಗಿ ವೇದಿಕೆಯನ್ನೂ ಸಿದ್ಧಪಡಿಸಬಹುದು. ಈ ವೈಶಿಷ್ಟ್ಯದೊಂದಿಗೆ, ಯಾವುದೇ ಚಾಟ್‌ಗೆ ಹಿನ್ನೆಲೆಯಾಗಿ ನಮ್ಮ ಪೂರ್ವ-ನಿರ್ಮಿತ ವಾಲ್‌ಪೇಪರ್‌ಗಳಲ್ಲಿ ಒಂದನ್ನು ಅಥವಾ ಕ್ಯಾಮೆರಾ ರೋಲ್‌ನಿಂದ ಮೆಚ್ಚಿನ ಶಾಟ್ ಅನ್ನು ಬಳಸಿ.
ನಮ್ಮ ಮುಂದಿನ ಪ್ರಕಟಣೆಗಾಗಿ ನಿರೀಕ್ಷಿಸಿ.
ಸಬ್‌ಸ್ಕ್ರೈಬ್ ಮಾಡಲು, ನಿಮ್ಮ ಪ್ರೊಫೈಲ್‌ಗೆ ಹೋಗಿ ಮತ್ತು Snapchat+ ಮೇಲೆ ಟ್ಯಾಪ್ ಮಾಡಿ. Happy Snapping!