ಏಪ್ರಿಲ್ 19, 2023
ಏಪ್ರಿಲ್ 19, 2023

SPS 2023: ನಿಮ್ಮ ಸ್ನೇಹವನ್ನು ವರ್ಧಿಸಲು ಹೊಸ Snapchat ವೈಶಿಷ್ಟ್ಯಗಳು

ನಿಮಗೆ ಅತ್ಯಂತ ಮುಖ್ಯವಾಗಿರುವ ಜನರೊಂದಿಗೆ ಸಂಪರ್ಕಿತರಾಗಿರುವುದಕ್ಕೆ ನಿಮಗೆ ಸಹಾಯ ಮಾಡಲು
Snapchat ನಲ್ಲಿ ಸಂಪರ್ಕದಲ್ಲಿರಲು, ನಿಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು ನಿಮ್ಮ ವಿಶಿಷ್ಟ ಸ್ನೇಹವನ್ನು ಸಂಭ್ರಮಿಸಲು ಹಲವಾರು ವಿಧಾನಗಳಿವೆ. ಇಂದು, ನಿಮಗೆ ಅತ್ಯಂತ ಮುಖ್ಯವಾಗಿರುವ ಜನರೊಂದಿಗೆ — ಅಂದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ನಿಮಗೆ ಸಹಾಯ ಮಾಡುವ ಅಪ್‌ಡೇಟ್‌ಗಳನ್ನು ನಾವು ಹಂಚಿಕೊಂಡಿದ್ದೇವೆ. 
ಕರೆ ಮಾಡುವಿಕೆ
ಪ್ರತಿ ತಿಂಗಳು, 100 ಮಿಲಿಯನ್‌ಗೂ ಅಧಿಕ Snapchatter ಗಳು ಧ್ವನಿ ಮತ್ತು ವೀಡಿಯೊ ಕರೆಯ ಮೂಲಕ ಸಂಪರ್ಕದಲ್ಲಿರುತ್ತಾರೆ.1ಈಗ ನೀವು ಕರೆಗಳೊಂದಿಗೆ ನಿಮ್ಮ ಸ್ನೇಹಿತರಿಗೆ ಅಕ್ಷರಶಃ ಇನ್ನಷ್ಟು ಹತ್ತಿರವಾಗಬಹುದು... ಚೌಕಟ್ಟಿನಿಂದ ಹೊರಬಂದು ಒಂದೇ ಫ್ರೇಮ್‌ನಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲು ನಿಮಗೆ ಅವಕಾಶ ಕಲ್ಪಿಸುವ ಹೊಸ ಕಾಲಿಂಗ್‌ ಲೆನ್ಸ್‌ನೊಂದಿಗೆ ಮತ್ತು ಶೀಘ್ರದಲ್ಲೇ ವರ್ಚುವಲ್ ಆಗಿ ನೀವು ಮುಖಾಮುಖಿಯಾಗಿರುವಾಗ ಆಟಗಳನ್ನೂ ಆಡಬಹುದು ಮತ್ತು ಒಗಟುಗಳನ್ನು ಬಿಡಿಸಬಹುದು.
ಕಥೆಗಳು
2013 ರಿಂದ, ಕಥೆಗಳ ಮೂಲಕ ನೀವು ನಿಮ್ಮ ಬದುಕನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೀರಿ, ಮತ್ತೀಗ ನೀವು ಏನಾಗಿದ್ದೀರಿ ಎನ್ನುವುದನ್ನು ತೋರಿಸಲು ಎರಡು ಹೊಸ ವಿಧಾನಗಳಿವೆ. ಮೊದಲನೆಯದು 'ಆಫ್ಟರ್ ಡಾರ್ಕ್‌' ಎನ್ನುವ ಕಥೆಯ ಹೊಸ ವಿಧ. ಮುಂದಿನ ಸಲ ನೀವು ತಡರಾತ್ರಿಯಲ್ಲಿ ಅಧ್ಯಯನ ಮಾಡುವಾಗ ಅಥವಾ ಹೊರಗೆ ಸುತ್ತಾಡುತ್ತಿರುವಾಗ ಆಫ್ಟರ್ ಡಾರ್ಕ್ ಸ್ಟೋರಿಗೆ ಸೇರಿಸಿ. ಮಾರನೆಯ ದಿನ ಬೆಳಗ್ಗೆ, ರಾತ್ರಿಯ ವಿವರ ನೀಡಲು ಕಥೆ ತೆರೆದುಕೊಳ್ಳುವುದನ್ನು ನೋಡಿ. ಎರಡನೆಯದು ಕಮ್ಯುನಿಟಿಗಳು, ಇದು ಸಹಪಾಠಿಗಳೊಂದಿಗೆ ನಿಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುವ ವೈಶಿಷ್ಟ್ಯವಾಗಿದೆ. ತಿಂಗಳುದ್ದಕ್ಕೂ, ಕಮ್ಯುನಿಟಿಗಳನ್ನು ಹೆಚ್ಚುವರಿ ಶಾಲೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. 
Snap ಗಳು ಮತ್ತು ಚಾಟ್‌ಗಳು ಡೀಫಾಲ್ಟ್ ಆಗಿ ಅಳಿಸಲ್ಪಡುವಂತೆ ವಿನ್ಯಾಸಗೊಳಿಸಲಾಗಿದ್ದರೂ, ಕೆಲವು Snap ಗಳು ಉಳಿಸದೆ ಇರಲು ಅತ್ಯುತ್ತಮವಾಗಿವೆ. ವಾಸ್ತವದಲ್ಲಿ, Snapchat ನೆನಪುಗಳಿಂದ ರಚಿಸಿದ ಫ್ಲ್ಯಾಶ್‌ಬ್ಯಾಕ್‌ಗಳನ್ನು ಪ್ರತಿದಿನ ಒಂದು ಬಿಲಿಯನ್‌ಗೂ ಹೆಚ್ಚು ಸಲ ವೀಕ್ಷಿಸಲಾಗುತ್ತಿದೆ, ಮತ್ತೀಗ ಈ ಹಿಂದಿನ ದಿನಗಳ ಮೆಲುಕನ್ನು ನಾವು ಸ್ನೇಹಿತರೊಂದಿಗಿನ ನಿಮ್ಮ ಸಂಭಾಷಣೆಯಲ್ಲೇ ಪ್ರದರ್ಶಿಸಲಿದ್ದೇವೆ, ಹಾಗಾಗಿ ನೀವು ಜೊತೆಯಾಗಿ ಉಳಿಸಿದ ನಿಮ್ಮ ಮೆಚ್ಚಿನ Snap ಗಳಿಂದ ತಯಾರಿಸಿದ ಕ್ಷಣಗಳನ್ನು ನೀವು ಮೆಲುಕು ಹಾಕಬಹುದು. *
Snap ಮ್ಯಾಪ್
Snap ಮ್ಯಾಪ್ ಕುರಿತು ಹೇಳುವುದಾದರೆ, ನಾವು ಹೊಸ ಸ್ಥಳ ಹಂಚಿಕೊಳ್ಳುವಿಕೆ ಆಯ್ಕೆಯನ್ನು ಸೇರಿಸುತ್ತಿದ್ದು, ಪ್ರಯಾಣಿಸುತ್ತಿರುವಾಗಲೇ ಪರಸ್ಪರ ಸಂಪರ್ಕಿಸುವುದನ್ನು ಇನ್ನಷ್ಟು ಸುಲಭವಾಗಿಸುತ್ತಿದ್ದೇವೆ. ಜೊತೆಗೆ, 3D ಯಲ್ಲಿ ನಿಲ್ಲಿಸಲಾದ ಹೊಸ ಲ್ಯಾಂಡ್‌ಮಾರ್ಕ್‌ಗಳಿಗಾಗಿ ಹುಡುಕಿ, ಹಾಗೂ ಸ್ನೇಹಿತರು ಮತ್ತು ವಿಶಾಲ Snapchat ಸಮುದಾಯದಲ್ಲಿ ನಿನ್ನೆ ರಾತ್ರಿ ಚರ್ಚೆಯ ವಸ್ತುವಾಗಿದ್ದ ಸ್ಥಳಗಳ ಮೇಲೆ ಹೊಸ ಟ್ಯಾಗ್‌ಗಳನ್ನು ಕಂಡುಕೊಳ್ಳಿ. 
Snap ಮ್ಯಾಪ್ ಮತ್ತು ಅದರಾಚೆಗೆ, 1.7 ಬಿಲಿಯನ್ Snapchatter ಗಳು ತಮ್ಮ Bitmoji ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. * ಈ ವರ್ಷ, ನಾವು ಶಾಪಿಂಗ್ ಮಾಡಬಹುದಾದ ಫ್ಯಾಶನ್ ಅನ್ನು ಸೇರಿಸಿದ್ದೇವೆ ಹಾಗಾಗಿ ನಿಮ್ಮ Bitmoji ಕೇವಲ ನಿಮ್ಮಂತೆ ಕಾಣಿಸುವುದಷ್ಟೇ ಅಲ್ಲ, ನಿಮ್ಮ ರೀತಿಯಲ್ಲೇ ಉಡುಪನ್ನೂ ಧರಿಸಬಹುದು. ಶೀಘ್ರದಲ್ಲಿ, ಆಯ್ಕೆ ಮಾಡಲು ನಾವು ಇನ್ನಷ್ಟು ಸ್ಟೈಲ್‌ಗಳನ್ನು ಹೊಂದಲಿದ್ದೇವೆ ಮತ್ತು ಇನ್ನಷ್ಟು ಅಭಿವ್ಯಕ್ತವಾದ ಮತ್ತು ವೈಯಕ್ತಿಕವಾದ ಅಪ್‌ಡೇಟ್ ಮಾಡಿದ ಅವತಾರ್ ಸ್ಟೈಲ್‌ನೊಂದಿಗೆ ಹೊಸ ಆಯಾಮದಲ್ಲಿ ಅವೆಲ್ಲವೂ ರೂಪ ತಳೆಯಲಿವೆ. 
ಜನಸಮೂಹದಿಂದ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವುದಕ್ಕೆ Bitmoji ಫ್ಯಾಶನ್‌ ಒಂದೇ ಮಾರ್ಗವಲ್ಲ. ಇಂದು, Snapchat+ ಮೂಲಕ ಲಭ್ಯವಿರುವ ಅನನ್ಯ ವೈಶಿಷ್ಟ್ಯಗಳ ಮೂಲಕ 3 ಮಿಲಿಯನ್‌ಗೂ ಅಧಿಕ Snapchatter ಗಳು ತಮ್ಮ ತಮ್ಮ Snapchat ಅನ್ನು ಕಸ್ಟಮೈಸ್ ಮಾಡುತ್ತಿದ್ದಾರೆ, ಮತ್ತು ಶೀಘ್ರದಲ್ಲಿ ಅಪ್‌ಗ್ರೇಡ್ ಮಾಡಲು ಬಯಸುವ Verizon ಗ್ರಾಹಕರು ತಮ್ಮ +play ವೇದಿಕೆ ಮೂಲಕ ಸಬ್‌ಸ್ಕ್ರಿಪ್ಶನ್ ಖರೀದಿಸಬಹುದು.4
Happy Snapping!
1Snap Inc. internal data April - May 2022
2Snap Inc. internal data February 14 - March 13, 2023
3Snap Inc. internal data July 16, 2014 - February 21, 2023
4Snap Inc. internal data as of Mar 31, 2023