SPS 2023: My AI ಗೆ ಸಂಬಂಧಿಸಿದಂತೆ ಮುಂದೇನು

ಜಗತ್ತಿನಾದ್ಯಂತದ Snapchatter ಗಳಿಗೆ My AI ಅನ್ನು ತರುತ್ತಿದ್ದೇವೆ
Snapchat+ ಸಬ್‌ಸ್ಕ್ರೈಬರ್‌ಗಳು ನಮ್ಮ AI-ಸಂಚಾಲಿತ ಚಾಟ್‌ಬಾಟ್ ಆದ My AI ಅನ್ನು ಇಷ್ಟಪಡುತ್ತಿದ್ದಾರೆ, ಸಿನಿಮಾ, ಕ್ರೀಡೆ, ಸಾಕುಪ್ರಾಣಿಗಳು ಹಾಗೂ ತಮ್ಮ ಸುತ್ತಲಿನ ಜಗತ್ತಿನ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಪ್ರತಿ ದಿನ ಸುಮಾರು 2 ಮಿಲಿಯನ್ ಚಾಟ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇಂದು ಜಗತ್ತಿನಾದ್ಯಂತ Snapchatter ಗಳಿಗೆ My AI ಅನ್ನು ಬಿಡುಗಡೆ ಮಾಡುವುದನ್ನು ನಾವು ಪ್ರಕಟಿಸಿದ್ದು, ಇದು ಹೊಚ್ಚಹೊಸ ವೈಶಿಷ್ಟ್ಯಗಳಿಂದ ಕೂಡಿದೆ:
1. My AI ವೈಯಕ್ತಿಕಗೊಳಿಸಿ: ನಿಮ್ಮ AI ಸಾವಿರಾರು ವಿಶಿಷ್ಟ Bitmoji ವೈವಿಧ್ಯಗಳಲ್ಲಿ ಒಂದರೊಂದಿಗೆ ಬರುತ್ತದೆ ಮತ್ತು ಅದನ್ನು ನಿಜಕ್ಕೂ ನಿಮ್ಮ ಸ್ವಂತದ್ದನ್ನಾಗಿಸಲು ಸುಲಭವಾಗಿ ಕಸ್ಟಮೈಸ್ ಮಾಡಬಹುದು. ನಿಮ್ಮ AI ಗಾಗಿ ಕಸ್ಟಮ್ Bitmoji ಅನ್ನು ವಿನ್ಯಾಸಗೊಳಿಸಿ, ಅದಕ್ಕೊಂದು ಹೆಸರು ಕೊಡಿ ಮತ್ತು ಚಾಟಿಂಗ್ ಆರಂಭಿಸಿ. 
2. My AI ಅನ್ನು ಸ್ನೇಹಿತರೊಂದಿಗಿನ ಸಂಭಾಷಣೆಗಳಿಗೆ ತನ್ನಿ: ಸ್ನೇಹಿತರೊಂದಿಗಿನ ನಿಮ್ಮ ಯಾವುದೇ ಸಂಭಾಷಣೆಗಳಿಗೆ My AI ಅನ್ನು ತರುವುದು ಸುಲಭ. ಕೇವಲ My AI ಅನ್ನು @ ಪ್ರಸ್ತಾಪಿಸಿ ಮತ್ತು ಗುಂಪಿನ ಪರವಾಗಿ ಒಂದು ಪ್ರಶ್ನೆಯನ್ನು ಕೇಳಿ. AI ಯಾವಾಗ ಚಾಟ್‌ಗೆ ಪ್ರವೇಶಿಸಿದೆ ಎಂಬುದು ಸ್ಪಷ್ಟವಿರುತ್ತದೆ ಮತ್ತು ಅದರ ಹೆಸರಿನ ಪಕ್ಕದಲ್ಲಿ ಒಂದು ಮಿನುಗುವಿಕೆಯನ್ನು ಒಳಗೊಂಡಿರುತ್ತದೆ. 
3. Snapchat ಶಿಫಾರಸುಗಳು: My AI, Snap ಮ್ಯಾಪ್‌ನಿಂದ ಸ್ಥಳ ಶಿಫಾರಸುಗಳನ್ನು ಹುಡುಕುತ್ತದೆ ಮತ್ತು ಸಂಬಂಧಿತ ಲೆನ್ಸ್‌ಗಳನ್ನು ಶಿಫಾರಸು ಮಾಡುತ್ತದೆ. ಉದಾಹರಣೆಗೆ, ನಿಮ್ಮ ಕುಟುಂಬಕ್ಕಾಗಿ ವಾರಾಂತ್ಯದ ಚಟುವಟಿಕೆಗಳನ್ನು ಶಿಫಾರಸು ಮಾಡುವಂತೆ ಅಥವಾ ಒಬ್ಬ ಸ್ನೇಹಿತನಿಗೆ ಜನ್ಮದಿನದ ಶುಭಾಶಯ ಕೋರಲು ಸೂಕ್ತ ಲೆನ್ಸ್‌ಗಳ ಶಿಫಾರಸುಗಳನ್ನು ನೀಡುವಂತೆ ನೀವು My AI ಅನ್ನು ಕೇಳಬಹುದು.
4. My AI ಜೊತೆಗೆ Snap ಗಳನ್ನು ಹಂಚಿಕೊಳ್ಳಿ: ನಮ್ಮ ಸಮುದಾಯ My AI ಗೆ Snap ಗಳನ್ನು ಕಳುಹಿಸಬಹುದು ಮತ್ತು ಚಾಟ್ ಪ್ರತ್ಯುತ್ತರವನ್ನು ಸ್ವೀಕರಿಸಬಹುದು.
5. ಅದು ನಿಮಗೆ ಮರಳಿ Snap ಮಾಡುವುದನ್ನು ನೋಡಿ: Snapchat ನಲ್ಲಿ ಪ್ರತಿ ಸೆಕೆಂಡ್‌ಗೆ ಸರಾಸರಿ 55,000 Snap ಗಳು ಸೃಷ್ಟಿಯಾಗುವುದರೊಂದಿಗೆ, Snapping, ನಮ್ಮ ಸಮುದಾಯವು ಪರಸ್ಪರ ಸಂಪರ್ಕದಲ್ಲಿರಲು ಬಳಸುವ ಸಹಜ ಮಾರ್ಗವಾಗಿದೆ. ಶೀಘ್ರದಲ್ಲಿ Snapchat ಸಬ್‌ಸ್ಕ್ರೈಬರ್‌ಗಳು My AI ಗೆ Snap ಕಳುಹಿಸಲು ಮತ್ತು ವಿಶಿಷ್ಟ ಜನರೇಟಿವ್ Snap ಅನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ, ಇದು ದೃಶ್ಯಾತ್ಮಕ ಸಂಭಾಷಣೆಯನ್ನು ನಿರಂತರವಾಗಿ ಇರಿಸುತ್ತದೆ!
My AI ಪರಿಪೂರ್ಣತೆಗಿಂತ ಬಹಳ ದೂರದಲ್ಲಿದೆ, ಆದರೆ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಉದಾಹರಣೆಗೆ, 99.5% My AI ಪ್ರತಿಕ್ರಿಯೆಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಿಗೆ ಅನುಸರಣೆ ಹೊಂದಿವೆ ಹಾಗೂ ಬಿಡುಗಡೆ ಮಾಡಿದಂದಿನಿಂದ, ಈ ಕೆಳಗಿನವುಗಳ ಮೂಲಕ ಸುಧಾರಣೆ ಮಾಡಲು ನಾವು ಕೆಲಸ ಮಾಡಿದ್ದೇವೆ:
  • ಅನುಚಿತ ಅಥವಾ ಹಾನಿಕಾರಕವಾಗಬಹುದಾದ ಪ್ರತಿಕ್ರಿಯೆಗಳ ವಿರುದ್ಧ ರಕ್ಷಣೆ ನೀಡಲು ಸಹಾಯ ಮಾಡುವ ಸಲುವಾಗಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಿಗೆ ಬದ್ಧವಾಗಿರಲು My AI ಅನ್ನು ಪ್ರೊಗ್ರಾಮ್ ಮಾಡಿದ್ದೇವೆ.
  • ಒಬ್ಬ Snapchatter ಜನ್ಮದಿನಾಂಕ ಬಳಸಿಕೊಂಡು ಹೊಸ ವಯೋ ಸಂಕೇತವನ್ನು ಅನುಷ್ಠಾನಗೊಳಿಸಿದ್ದೇವೆ, ಇದರಿಂದಾಗಿ ಚಾಟ್‌ಬಾಟ್ ನಿರಂತರವಾಗಿ ಅವರ ವಯಸ್ಸನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.
  • ಹೆಚ್ಚುವರಿ ಮಾಡರೇಷನ್ ತಂತ್ರಜ್ಞಾನವನ್ನು ಸೇರಿಸಿದ್ದೇವೆ, ಇದು ಸಂಭಾವ್ಯತಃ ಹಾನಿಕಾರಕ ಕಂಟೆಂಟ್‌ನ ತೀವ್ರತೆಯ ಮೌಲ್ಯಮಾಪನ ಮಾಡಲು ಹಾಗೂ ಒಂದು ವೇಳೆ Snapchatter ಗಳು ಸೇವೆಯನ್ನು ದುರ್ಬಳಕೆ ಮಾಡಿದರೆ My AI ಗೆ ಅವರ ಪ್ರವೇಶವನ್ನು ನಿರ್ಬಂಧಿಸಲು ನಮಗೆ ಅವಕಾಶ ಕಲ್ಪಿಸುತ್ತದೆ.
  • My AI ಅನ್ನು ನಮ್ಮ ಆ್ಯಪ್‌ನಲ್ಲಿನ ಪೋಷಕರ ಟೂಲ್ಸ್‌ ಆದ, ಕೌಟುಂಬಿಕ ಕೇಂದ್ರಕ್ಕೆ ಅಳವಡಿಸಲು ಸಜ್ಜಾಗುತ್ತಿದ್ದೇವೆ, ಇದು ತಮ್ಮ ಹದಿಹರೆಯದ ಮಕ್ಕಳು My AI ಜೊತೆ ಚಾಟ್ ಮಾಡುತ್ತಿದ್ದಾರೆಯೇ ಮತ್ತು ಎಷ್ಟು ಬಾರಿ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಲು ಪೋಷಕರಿಗೆ ಅವಕಾಶ ಕಲ್ಪಿಸುತ್ತದೆ.
AI ಅನ್ನು ಇನ್ನಷ್ಟು ಸುರಕ್ಷಿತ, ವಿನೋದಮಯ ಮತ್ತು ಉಪಯುಕ್ತ ಅನುಭವವನ್ನಾಗಿಸಲು ಈ ಆರಂಭಿಕ ಕಲಿಕೆಗಳನ್ನು ಬಳಸುವುದನ್ನು ನಾವು ಮುಂದುವರಿಸಲಿದ್ದೇವೆ ಮತ್ತು ನಿಮ್ಮ ವಿಚಾರಗಳನ್ನು ಆಲಿಸಲು ನಾವು ಕಾತುರರಾಗಿದ್ದೇವೆ. ನಮ್ಮ ತಂಡಕ್ಕೆ ವಿವರವಾದ ಪ್ರತಿಕ್ರಿಯೆಯನ್ನು ಒದಗಿಸಲು ಯಾವುದೇ My AI ಪ್ರತಿಕ್ರಿಯೆಯ ಮೇಲೆ ನೀವು ಒತ್ತಿ ಹಿಡಿಯಬಹುದು. 
Happy Snapping!
ಮರಳಿ ಸುದ್ಧಿಗೆ