SPS 2022: New AR Shopping Capabilities for Brands
We are continuing to evolve AR shopping by launching a suite of new offerings making AR creation simple, fast, and cost-effective for businesses. And, we’re offering consumers new places to shop using AR, both on and off Snapchat.

Snap ನಲ್ಲಿ, ವರ್ಧಿತ ವಾಸ್ತವದ ಮೂಲಕ ಶಾಪಿಂಗ್ ಅನುಭವವನ್ನು ವೈಯಕ್ತಿಕ, ಪ್ರವೇಶಾರ್ಹ ಮತ್ತು ವಿನೋದಮಯವಾಗುವಂತೆ ಮರುರೂಪಿಸುತ್ತಿದ್ದೇವೆ. ಕಳೆದ ವರ್ಷದ ಜನವರಿಯಿಂದ ಈವರೆಗೆ, ವಿಶ್ವಾದ್ಯಂತದ ಬ್ರ್ಯಾಂಡ್‌ಗಳು ಮತ್ತು ರಿಟೇಲರ್‌ಗಳಿಂದ ಉತ್ಪನ್ನಗಳನ್ನು ಪ್ರಯತ್ನಿಸುತ್ತ ಮತ್ತು ವಿಷುವಲೈಸ್ ಮಾಡುತ್ತ - 250 ಮಿಲಿಯನ್‌ಗೂ ಹೆಚ್ಚು Snapchatter ಗಳು AR ಶಾಪಿಂಗ್ ಲೆನ್ಸ್‌ಗಳೊಂದಿಗೆ 5 ಬಿಲಿಯನ್‌ಗೂ ಹೆಚ್ಚು ಬಾರಿ ತೊಡಗಿಕೊಂಡಿದ್ದಾರೆ. ಶಾಪಿಂಗ್ ಕ್ಷಣಗಳನ್ನು ಹಂಚಿಕೊಳ್ಳಲು Snapchat ಅನ್ನು ಅವರು #1 ವೇದಿಕೆ ಎಂದು ಶ್ರೇಯಾಂಕ ನೀಡಿದ್ದಾರೆ.
ನಮ್ಮ ಬ್ರ್ಯಾಂಡ್ ಪಾಲುದಾರರು ತಮ್ಮ ಪ್ರೇಕ್ಷಕರೊಂದಿಗೆ ತೊಡಗಿಕೊಳ್ಳಲು ಮತ್ತು ಎಲ್ಲ ಗಾತ್ರದ ವ್ಯವಹಾರಗಳನ್ನು ಪರಿವರ್ತಿಸಲು Snap ನ ಕ್ಯಾಮೆರಾ ಸಾಮರ್ಥ್ಯಗಳನ್ನು ಬಳಸುತ್ತಿದ್ದಾರೆ. ಉದಾಹರಣೆಗೆ, ನಮ್ಮ ನೈಜ ಗಾತ್ರದ ಕನ್ನಡಕದ ಲೆನ್ಸ್ ತಂತ್ರಜ್ಞಾನವನ್ನು ಬಳಸಿಕೊಂಡ Zenni Optical ನ AR ಲೆನ್ಸ್‌ಗಳು, ಅನ್ನು 60 ಮಿಲಿಯನ್‌ಗೂ ಹೆಚ್ಚು ಬಾರಿ Snapchatter ಗಳು ಪ್ರಯತ್ನಿಸಿದ್ದಾರೆ ಮತ್ತು ಲೆನ್ಸ್‌ಗಳಿಲ್ಲದೆ ಚಲಾಯಿಸಿದ ಜಾಹೀರಾತುಗಳ ವೆಚ್ಚದ ಹೋಲಿಕೆಯಲ್ಲಿ 42% ಹೆಚ್ಚು ಆದಾಯವನ್ನು ತಂದುಕೊಟ್ಟಿವೆ.
ಇಂದು, ಹೊಸ ಕೊಡುಗೆಗಳ ಸೂಟ್ ಅನ್ನು ಬಿಡುಗಡೆ ಮಾಡುವ ಮೂಲಕ ನಾವು AR ಶಾಪಿಂಗ್ ವಿಕಸನವನ್ನು ಮುಂದುವರಿಸುತ್ತಿದ್ದೇವೆ, ಈ ಮೂಲಕ AR ಸೃಷ್ಟಿಸುವಿಕೆಯನ್ನು ಸರಳ, ತ್ವರಿತ ಮತ್ತು ವ್ಯವಹಾರಗಳಿಗೆ ಅಗ್ಗದ ವೆಚ್ಚದ್ದನ್ನಾಗಿ ಮಾಡುತ್ತಿದ್ದೇವೆ. ಮತ್ತು, AR ಬಳಸಿಕೊಂಡು Snapchat ನಲ್ಲಿ ಮತ್ತು ಹೊರಗೆ ಎರಡೂ ಕಡೆ ಶಾಪ್ ಮಾಡಲು ಗ್ರಾಹಕರಿಗೆ ನಾವು ಹೊಸ ಸ್ಥಳಗಳನ್ನು ಒದಗಿಸುತ್ತಿದ್ದೇವೆ.
ಹೊಸ AR ಸೃಷ್ಟಿಸುವಿಕೆಯ ಸೂಟ್
Snap ನ 3D ಸ್ವತ್ತು ನಿರ್ವಾಹಕ ಒಂದು ವೆಬ್ ಕಂಟೆಂಟ್ ಮ್ಯಾನೇಜ್‌ಮೆಂಟ್ ವೇದಿಕೆಯಾಗಿದ್ದು, ವ್ಯವಹಾರಗಳ ಶಾಪಿಂಗ್ ಉತ್ಪನ್ನ ಕ್ಯಾಟಲಾಗ್‌ನಲ್ಲಿನ ಯಾವುದೇ ಉತ್ಪನ್ನಕ್ಕಾಗಿ - 3D ಮಾಡೆಲ್‌ಗಳನ್ನು ವಿನಂತಿಸಲು, ಅನುಮೋದಿಸಲು ಮತ್ತು ಆಪ್ಟಿಮೈಸ್ ಮಾಡಲು ಸುಲಭವಾಗಿಸುತ್ತದೆ. ಮತ್ತು ಸ್ವತ್ತು ಹಂಚಿಕೊಳ್ಳುವ ಸಾಮರ್ಥ್ಯಗಳೊಂದಿಗೆ, ರಿಟೇಲರ್‌ಗಳು ಮತ್ತು ಬ್ರ್ಯಾಂಡ್‌ಗಳು ಈಗಾಗಲೇ Snap ನ ಸ್ವತ್ತು ನಿರ್ವಹಣೆ ಸಿಸ್ಟಂನಲ್ಲಿ ಇರುವ ಪ್ರಸಿದ್ಧ ಬ್ರ್ಯಾಂಡ್‌ಗಳಿಂದ ಅನುಮೋದಿತ 3D ಮಾಡೆಲ್‌ಗಳನ್ನು ಬಳಸಿಕೊಳ್ಳಬಹುದು.
ಪಾಲುದಾರರು ನಮ್ಮ ಹೊಸ AR ಚಿತ್ರ ಪ್ರಕ್ರಿಯೆಗೊಳಿಸುವಿಕೆ ತಂತ್ರಜ್ಞಾನವನ್ನು ಕೂಡ ಬಳಸಿಕೊಳ್ಳಬಹುದು. Forma ದಿಂದ ಅಭಿವೃದ್ಧಿಪಡಿಸಲಾಗಿರುವ, ಈ ಸಾಮರ್ಥ್ಯವು ತಮ್ಮ ಇ-ಕಾಮರ್ಸ್ ವೆಬ್‌ಸೈಟ್‌ಗಳಿಗಾಗಿ ಅವರು ಉತ್ಪಾದಿಸಿರುವ ಪ್ರಸ್ತುತ ಇರುವ ಉತ್ಪನ್ನ ಫೋಟೋಗ್ರಫಿಯನ್ನು ಸನ್ನೆಯಾಗಿ ಬಳಸಿಕೊಳ್ಳಲು ಮತ್ತು Snapchat AR ಟ್ರೈ-ಆನ್ ಲೆನ್ಸ್ ಅನುಭವಕ್ಕಾಗಿ ಅವುಗಳನ್ನು ತಕ್ಷಣಕ್ಕೆ AR-ಸಜ್ಜಾಗಿರುವ ಸ್ವತ್ತುಗಳಾಗಿ ಪರಿವರ್ತಿಸಲು ವ್ಯವಹಾರಗಳಿಗೆ ಅವಕಾಶ ಕಲ್ಪಿಸುತ್ತದೆ. ಈ ತಂತ್ರಜ್ಞಾನದ ಮೂಲಕ, ಶಾಪರ್‌ಗಳು ತಮ್ಮ ಮನೆಯಲ್ಲೇ ಆರಾಮವಾಗಿ ಕುಳಿತುಕೊಂಡು, ಕೇವಲ ಪೂರ್ಣ ದೇಹದ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಇನ್ನೂ ಹೆಚ್ಚು ಉಡುಪುಗಳನ್ನು ಇನ್ನಷ್ಟು ಸುಲಭವಾಗಿ ಪ್ರಯತ್ನಿಸಬಹುದು.
ಹಂತ 1: ಪಾಲುದಾರರು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಸ್ತುತ ಮಾರಾಟ ಮಾಡುತ್ತಿರುವ ಉತ್ಪನ್ನ SKU ಗಳಿಗಾಗಿ ಪ್ರಸ್ತುತ ಇರುವ ಉತ್ಪನ್ನ ಫೋಟೋಗ್ರಫಿಯನ್ನು ಅಪ್‌ಲೋಡ್ ಮಾಡುತ್ತಾರೆ.
ಹಂತ 2: ರಿಟೇಲರ್ ಅವರ ಫೋಟೋವನ್ನು AR ಚಿತ್ರ ಸ್ವತ್ತಾಗಿ ಪರಿವರ್ತಿಸುವ ಡೀಪ್-ಲರ್ನಿಂಗ್ ಮಾಡ್ಯೂಲ್‌ನೊಂದಿಗೆ ಉತ್ಪನ್ನದ ಫೋಟೋವನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
ಹಂತ 3: ನಂತರ ವ್ಯವಹಾರಗಳು ಸರಳ ವೆಬ್ ಇಂಟರ್‌ಫೇಸ್‌ನಲ್ಲಿ ಹೊಸ ಟೆಂಪ್ಲೇಟ್‌ಗಳನ್ನು ಬಳಸಿಕೊಂಡು ಟ್ರೈ-ಆನ್ ಲೆನ್ಸ್‌ಗಳನ್ನು ಸೃಷ್ಟಿಸಲು AR ಚಿತ್ರ ಸ್ವತ್ತುಗಳೊಂದಿಗೆ SKU ಗಳನ್ನು ಆಯ್ಕೆ ಮಾಡಬಹುದು.
ಬ್ರ್ಯಾಂಡ್‌ಗಳು ತಮ್ಮ ಸ್ವತ್ತುಗಳನ್ನು ಆಮದು ಮಾಡಲು ಮತ್ತು ಯಾವುದೇ AR ಅಭಿವೃದ್ಧಿಪಡಿಸುವ ಕೌಶಲ್ಯವಿಲ್ಲದೆ, ಕೆಲವೇ ನಿಮಿಷಗಳಲ್ಲಿ ಕ್ಯಾಟಲಾಗ್-ಶಾಪಿಂಗ್ ಲೆನ್ಸ್‌ಗಳನ್ನು ವೇಗವಾಗಿ ಮತ್ತು ಉಚಿತವಾಗಿ ಸೃಷ್ಟಿಸುವುದಕ್ಕೂ ಸಹ ಲೆನ್ಸ್ ವೆಬ್ ಬಿಲ್ಡರ್‌ನಲ್ಲಿನ Snap ನ ಹೊಸ AR ಶಾಪಿಂಗ್ ಟೆಂಪ್ಲೇಟ್ ಅವಕಾಶ ಕಲ್ಪಿಸುತ್ತದೆ. ಆಯ್ದ ಪಾಲುದಾರರಿಗೆ ಇಂದು ಬೀಟಾ ರೂಪದಲ್ಲಿ ಲಭ್ಯವಿದ್ದು, ತಮ್ಮ AR-ಸಜ್ಜಾಗಿರುವ ಸ್ವತ್ತುಗಳನ್ನು ಬಳಸಿಕೊಂಡು ವರ್ಚುವಲ್ ಟ್ರೈ-ಆನ್ ಮತ್ತು ವಿಷುವಲೈಜೇಷನ್ ಅನುಭವಗಳನ್ನು ನಿರ್ಮಿಸುವುದಕ್ಕೆ ವಸ್ತ್ರೋದ್ಯಮ, ಕನ್ನಡಕ ಮತ್ತು ಪಾದರಕ್ಷೆ ಬ್ರ್ಯಾಂಡ್‌ಗಳು ಸೌಂದರ್ಯ ಸಾಧನಗಳ ವ್ಯಾಪಾರಿಗಳೊಂದಿಗೆ ಕೈಜೋಡಿಸಬಹುದು. ನಾವು ಪೀಠೋಪಕರಣ ಮತ್ತು ಹ್ಯಾಂಡ್‌ಬ್ಯಾಗ್‌ಗಳಂತಹ ವರ್ಗಗಳಿಗಾಗಿ ಮೇಲ್ಮೈ ವಸ್ತುಗಳಿಗೂ ಕೂಡ ನಾವು ವಿಸ್ತರಣೆ ಮಾಡುತ್ತಿದ್ದು, ಇಲ್ಲಿ ನಮ್ಮ ಹೊಸ ಟೆಂಪ್ಲೇಟ್ ಯಾವುದೇ 3D ಮಾಡೆಲ್ ಅನ್ನು ನೆಲ ಅಥವಾ ಟೇಬಲ್ ಮೇಲೆ ಇರಿಸುವುದಕ್ಕೆ ಅವಕಾಶ ಕಲ್ಪಿಸುತ್ತದೆ, ಈ ಮೂಲಕ Snapchatter ಗಳು ಐಟಂಗಳನ್ನು ಇನ್ನಷ್ಟು ವಿವರವಾಗಿ ಹುಡುಕಲು ಅಥವಾ ಅದು ತಮ್ಮ ಸ್ಥಳದಲ್ಲಿ ಹೇಗೆ ಫಿಟ್ ಆಗುತ್ತದೆ ಎಂದು ನೋಡಲು ಅವಕಾಶ ಕಲ್ಪಿಸುತ್ತದೆ.
ವೈಯಕ್ತಿಕಗೊಳಿಸಿದ, ತಲ್ಲೀನಗೊಳಿಸುವ ಶಾಪಿಂಗ್ ಅವಕಾಶಗಳನ್ನು ಶಾಪರ್‌ಗಳಿಗೆ ಒದಗಿಸುವ ಮೂಲಕ - ಈ ಮೂರು ಹೊಸ ತಂತ್ರಜ್ಞಾನಗಳು ಎಲ್ಲ ಗಾತ್ರದ ವ್ಯವಹಾರಗಳು ತ್ವರಿತವಾಗಿ ಮತ್ತು ಸುಲಭವಾಗಿ AR ಶಾಪಿಂಗ್ ಅನುಭವವನ್ನು ಸೃಷ್ಟಿಸಲು ಅವಕಾಶ ಕಲ್ಪಿಸುತ್ತವೆ.
ಉಡುಪು ಧರಿಸಿ
ಶಾಪಿಂಗ್‌ಗಾಗಿ AR ಬಳಸುವುದನ್ನು Snapchatter ಗಳು ಇಷ್ಟಪಡುತ್ತಾರೆ, ಹಾಗಾಗಿ ನಾವು ಉಡುಪು ಧರಿಸಿ ಎನ್ನುವ ಹೊಸ, ಸಮರ್ಪಿತ ತಾಣವನ್ನು Snapchat ನಲ್ಲಿ ಪರಿಚಯಿಸುತ್ತಿದ್ದೇವೆ. ಉಡುಪು ಧರಿಸಿ, AR ಫ್ಯಾಶನ್‌ನ ಅತ್ಯುತ್ತಮವಾದುದನ್ನು ಮತ್ತು ಕ್ರಿಯೇಟರ್‌ಗಳು, ರಿಟೇಲರ್‌ಗಳು ಮತ್ತು ಫ್ಯಾಶನ್ ಬ್ರ್ಯಾಂಡ್‌ಗಳಿಂದ ಟ್ರೈ-ಆನ್ ಅನುಭವಗಳನ್ನು ಒಂದೇ ಸ್ಥಳದಲ್ಲಿ ಜೊತೆಯಾಗಿ ಒದಗಿಸುತ್ತದೆ.
ಲೆನ್ಸ್ ಎಕ್ಸ್‌ಪ್ಲೋರರ್‌ನಲ್ಲಿ ಲಭ್ಯವಿರುವ ಮತ್ತು ಶೀಘ್ರ AR ಬಾರ್‌ನಲ್ಲಿ ಕ್ಯಾಮೆರಾದಿಂದ ಕೇವಲ ಒಂದು ಟ್ಯಾಪ್ ದೂರದಲ್ಲಿ ಸಿಗಲಿರುವ, ಉಡುಪು ಧರಿಸಿ, ವಿಶ್ವಾದ್ಯಂತಹ ಹೊಸ ಲುಕ್‌ಗಳನ್ನು ಬ್ರೌಸ್ ಮಾಡಲು, ಹುಡುಕಲು ಮತ್ತು ಹಂಚಿಕೊಳ್ಳಲು ನಮ್ಮ ಸಮುದಾಯವನ್ನು ಆಹ್ವಾನಿಸುತ್ತದೆ. ತಮ್ಮ ಪ್ರೊಫೈಲ್‌ನೊಳಗೆ ಹೊಸ ಶಾಪಿಂಗ್ ವಿಭಾಗಕ್ಕೆ ನ್ಯಾವಿಗೇಟ್ ಮಾಡುವ ಮೂಲಕ ತಾವು ಇಷ್ಟಪಡುವ ಉಡುಪುಗಳು ಮತ್ತು ಪರಿಕರಗಳಿಗೆ Snapchatter ಗಳು ಸುಲಭವಾಗಿ ಹಿಂತಿರುಗಬಹುದು, ಇಲ್ಲಿ ಅವರು ಮೆಚ್ಚಿನದಾಗಿಸಿದ, ಇತ್ತೀಚೆಗೆ ನೋಡಿದ ಮತ್ತು ಅವರ ಕಾರ್ಟ್‌ಗೆ ಸೇರಿಸಿದ ಉತ್ಪನ್ನಗಳನ್ನು ಕಾಣಬಹುದು. ಒಂದು ವೇಳೆ ಅವರ ಬ್ರ್ಯಾಂಡ್ ಪ್ರೊಫೈಲ್‌ನಲ್ಲಿ ಲಭ್ಯವಿದ್ದರೆ ಯಾವುದೇ ಬ್ರ್ಯಾಂಡ್‌ಗಳ ಲೆನ್ಸ್‌ಗಳನ್ನು ಉಡುಪು ಧರಿಸಿಗೆ ಪರಿಗಣಿಸಬಹುದು.
AR ಶಾಪಿಂಗ್‌ಗಾಗಿ ಕ್ಯಾಮೆರಾ ಕಿಟ್
ಅಂತಿಮವಾಗಿ, ವ್ಯವಹಾರಗಳು Snap ಕ್ಯಾಮೆರಾ ಮತ್ತು AR ಟ್ರೈ-ಆನ್‌ಗಳನ್ನು ತಮ್ಮ ಸ್ವಂತ ಅಪ್ಲಿಕೇಶನ್‌ಗಳಿಗೆ ತರಲು AR ಶಾಪಿಂಗ್‌ಗಾಗಿ ಕ್ಯಾಮೆರಾ ಕಿಟ್ ಹೊಸ ಕೊಡುಗೆಯಾಗಿದೆ.
ಈ SDK, ಕ್ಯಾಟಲಾಗ್-ಸಂಚಾಲಿತ ಶಾಪಿಂಗ್ ಲೆನ್ಸ್‌ಗಳನ್ನು ರಿಟೇಲರ್‌ಗಳು ಮತ್ತು ಬ್ರ್ಯಾಂಡ್‌ನ ಉತ್ಪನ್ನ ವಿವರಗಳ ಪುಟಕ್ಕೆ ತರುತ್ತದೆ, ಇದರಿಂದಾಗಿ ಯಾವುದೇ ಗ್ರಾಹಕರು ಕನ್ನಡಕ ಅಥವಾ ಹ್ಯಾಂಡ್‌ಬ್ಯಾಗ್‌ಗಳಂತಹ ಉತ್ಪನ್ನಗಳನ್ನು ನೇರವಾಗಿ ತಮ್ಮ ಮಾಲೀಕತ್ವದ ಮತ್ತು ತಾವು ಆಪರೇಟ್ ಮಾಡುವ ಅಪ್ಲಿಕೇಶನ್‌ಗಳಿಂದ ಟ್ರೈ-ಆನ್ ಅಥವಾ ವಿಷುವಲೈಸ್ ಮಾಡಲು Snap AR ಅನ್ನು ಬಳಸಬಹುದು. AR ಶಾಪಿಂಗ್‌ಗಾಗಿ ಕ್ಯಾಮೆರಾ ಕಿಟ್, Android ಮತ್ತು iOS ನಾದ್ಯಂತ ಕೆಲಸ ಮಾಡುತ್ತದೆ, ಮತ್ತು ಶೀಘ್ರ ವೆಬ್‌ಸೈಟ್‌ಗಳಲ್ಲೂ ಕಾರ್ಯನಿರ್ವಹಿಸಲಿದೆ.
Puma, ತಂತ್ರಜ್ಞಾನವನ್ನು ಬಳಸಿದ Snap ನ ಮೊದಲ ಜಾಗತಿಕ ಬ್ರ್ಯಾಂಡ್ ಪಾಲುದಾರನಾಗಿದೆ. Snap ನ ಕ್ಯಾಮೆರಾ ಕಿಟ್‌ನಿಂದ ಸಂಚಾಲಿತವಾಗಿರುವ, Puma ಸ್ನೀಕರ್‌ಗಳನ್ನು ಡಿಲಿಟಲ್ ರೂಪದಲ್ಲಿ ಪ್ರಯತ್ನಿಸಿ ನೋಡಲು ಶಾಪರ್‌ಗಳಿಗೆ ಸಾಧ್ಯವಾಗುತ್ತದೆ.
ಬ್ರ್ಯಾಂಡ್‌ಗಳು ಮತ್ತು ಶಾಪರ್‌ಗಳು ಇಬ್ಬರಿಗೂ Snapchat ನಲ್ಲಿ ಮತ್ತು ಹೊರಗೆ ಶಾಪಿಂಗ್ ಮಾಡುವುದು ಅತ್ಯಂತ ಸುಲಭ ಮತ್ತು ವಿನೋದಮಯವಾಗಿರುತ್ತದೆ. ಗಾತ್ರಕ್ಕಾಗಿ ಈ ಹೊಸ ಅನುಭವಗಳನ್ನು ಜನರು ಎಲ್ಲೆಡೆ ಪ್ರಯತ್ನಿಸುವುದಕ್ಕಾಗಿ ನಾವು ಕಾತರರಾಗಿದ್ದೇವೆ!