We Stand Together

Snap CEO Evan Spiegel sent the following memo to all Snap team members on Sunday, May 31. In it he condemns racism while advocating for creating more opportunity, and for living the American values of freedom, equality and justice for all.
ನಂತರ ನನ್ನ ಜೀವನದಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡುವ ಮತ್ತು ಅಧ್ಯಯನ ಮಾಡುವ ಅವಕಾಶ ಸಿಕ್ಕಿತ್ತು. ಇಲ್ಲಿ, ನನ್ನ ಹೀರೋಗಳಲ್ಲಿ ಒಬ್ಬರಾದ ಬಿಶಪ್‌ ಟುಟು ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಜನಾಂಗೀಯತೆ ಮತ್ತು ವರ್ಣಭೇದದ ಹಾನಿಗೆ ನಾನು ಸಾಕ್ಷಿಯಾಗಿದ್ದೇನೆ. ಜೊತೆಗೆ, ಪ್ರಗತಿ ಮತ್ತು ಸಮನ್ವಯ ಸಾಧಿಸುವ ಕಡೆಗೆ ನಡೆಸಿದ ಅವಿರತ ಶ್ರಮವನ್ನೂ ನಾನು ಕಂಡಿದ್ದೇನೆ. ಸ್ಟಾನ್‌ಫೋರ್ಡ್‌ನಲ್ಲಿ ನಾನು ನನ್ನ ಸೀನಿಯರ್ ಓದುವ ವರ್ಷಗಳಲ್ಲಿ ಕಪ್ಪು ವರ್ಣೀಯರಿಗಾಗಿ ಕ್ಯಾಂಪಸ್‌ನಲ್ಲಿ ನಿಗದಿ ಪಡಿಸಲಾದ ಉಜಮಾದಲ್ಲಿನ ವಿದ್ಯಾರ್ಥಿನಿಲಯದಲ್ಲಿ ವಾಸಿಸುತ್ತಿದ್ದೆ (ಇಲ್ಲಿನ ಬಹುತೇಕ ನಿವಾಸಿಗಳು ಕಪ್ಪು ವರ್ಣೀಯರು). ಸ್ಟಾನ್‌ಫೋರ್ಡ್‌ನಲ್ಲಿ ಅಪಾರ ಸೌಲಭ್ಯಗಳು ಇದ್ದರೂ, ನಮ್ಮ ಸಮಾಜದಲ್ಲಿ ದಿನನಿತ್ಯ ನಡೆಯುತ್ತಿದ್ದ ಜನಾಂಗೀಯ ಆಧರಿತ ಅನ್ಯಾಯವನ್ನು ತಿಳಿದುಕೊಳ್ಳಲು ಸಾಕಷ್ಟು ಅವಕಾಶಗಳಿದ್ದವು.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಪ್ಪು ವರ್ಣೀಯರ ನೇರ ಅನುಭವವನ್ನು ವಿವರಿಸುವ ಉದ್ದೇಶದಿಂದ ಇದನ್ನು ಹಂಚಿಕೊಳ್ಳುತ್ತಿಲ್ಲ. ಬದಲಿಗೆ, ಈ ಮೂಲಕ ಸುಮಾರು 30 ವರ್ಷಗಳಿಂದಲೂ ಅಮೆರಿಕ ಮತ್ತು ಇಡೀ ವಿಶ್ವದಲ್ಲಿ ನ್ಯಾಯಕ್ಕಾಗಿ ಗಾಢ ಆಸಕ್ತಿ ಮತ್ತು ಸ್ಥಿರ, ಸಕಾರಣವಾದ ಮತ್ತು ಬಲವಂತದ ಆಗ್ರಹಕ್ಕೆ ನಾನು ವೈಯಕ್ತಿಕವಾಗಿ ಸಾಕ್ಷಿಯಾಗಿದ್ದೇನೆ ಅಥವಾ ಭಾಗವಹಿಸಿದ್ದೇನೆ ಎಂಬುದನ್ನು ವಿವರಿಸುವುದಕ್ಕಾಗಿ ಹಂಚಿಕೊಳ್ಳುತ್ತಿದ್ದೇನೆ. 30 ವರ್ಷಗಳ ನಂತರ, ಕೋಟ್ಯಂತರ ಜನರು ಬದಲಾವಣೆಗಾಗಿ ಬೇಡಿಕೆ ಇಡುತ್ತಿದ್ದರೂ, ಪ್ರಗತಿಯ ಪಥದತ್ತ ಸಾಗಿದ ದಾರಿ ಅತ್ಯಂತ ಸಣ್ಣದಾಗಿದೆ. ಕಳೆದ ಒಂದು ಶತಮಾನದಲ್ಲೇ ಅಮೆರಿಕದಲ್ಲಿ ಆರ್ಥಿಕ ಅಸಮಾನತೆಯು ಗರಿಷ್ಠ ಮಟ್ಟವನ್ನು ಮುಟ್ಟಿದೆ. ಒಂದು ವರ್ಣದ ಜನರು ವಿನಾಕರಣ ಹತ್ಯೆಗೀಡಾಗುವ ಭೀತಿ ಇಲ್ಲದೆ ದಿನಸಿ ಅಂಗಡಿಗೆ ಹೋಗಲಾರರು ಅಥವಾ ಜಾಗಿಂಗ್ ಮಾಡಲಾರರು. ಸರಳವಾಗಿ ಹೇಳುವುದಾದರೆ, ಅಮೆರಿಕದ ಮಾದರಿ ವಿಫಲವಾಗುತ್ತಿದೆ.
ನಾನು ಇದನ್ನು ಹಂಚಿಕೊಳ್ಳಲು ಕಾರಣವೆಂದರೆ MLK ಅವರ ಮಾತಿನಲ್ಲಿ, “ಗಲಭೆ ಎಂದಿಗೂ ಕೇಳದ ಭಾಷೆ” ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಶತಮಾನಗಳಿಂದ ಶಾಂತಿಯುತವಾಗಿ ಬದಲಾವಣೆಯನ್ನು ಪ್ರತಿಪಾದಿಸುತ್ತಿರುವ ಜನರು ಸ್ವಾತಂತ್ರ್ಯ, ಸಮಾನತೆ, ಮತ್ತು ಯುನೈಟೆಡ್ ಸ್ಟೇಟ್ಸ್ ಬಹುಕಾಲದಿಂದ ಭರವಸೆ ನೀಡಿದ ಎಲ್ಲಾ ನ್ಯಾಯ. ಈಗ ಹಿಂಸಾಚಾರ ನಡೆಸುತ್ತಿರುವವರ ಧ್ವನಿಯನ್ನು ಯಾಕೆ ನಾವು ಕೇಳಿಸಿಕೊಳ್ಳುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತದೆ.
Snapchat ಅನ್ನು ನಾವು ರೂಪಿಸಿದ ನಂತರ ಮೊದಲ ಬಾರಿಗೆ ನನ್ನನ್ನು 2013 ರಲ್ಲಿನ ಸ್ಟಾನ್‌ಫೋರ್ಡ್‌ನಲ್ಲಿ ಉದ್ಯಮದಲ್ಲಿ ಮಹಿಳೆಯರ ಸಮ್ಮೇಳನಕ್ಕೆ ಆಹ್ವಾನಿಸಿದಾಗ ಮಾಡಿದ ಭಾಷಣದಲ್ಲಿ, ನನ್ನನ್ನು ನಾನು “ಯುವಕ, ಬಿಳಿ ವ್ಯಕ್ತಿ, ಸುಶಿಕ್ಷಿತ ಪುರುಷ. ನಾನು ನಿಜಕ್ಕೂ ಅದೃಷ್ಟವಂತ. ಜೀವನ ನ್ಯಾಯಸಮ್ಮತವಾಗಿಲ್ಲ” ಎಂದು ಘೋಷಿಸಿಕೊಂಡಿದ್ದೆ. ನನಗಿರುವ ಸವಲತ್ತನ್ನು ಹೆಸರಿಸುವುದು ಮತ್ತು ನಮ್ಮ ಸಮಾಜದಲ್ಲಿನ ಅನ್ಯಾಯವನ್ನು ನಾನು ಒಪ್ಪಿಕೊಳ್ಳುವುದು, ಅದರಲ್ಲೂ ವಿಶೇಷವಾಗಿ ನಿತ್ಯವೂ ಈ ಅನ್ಯಾಯವನ್ನು ಎದುರಿಸುವ ಮಹಿಳಾ ಉದ್ಯಮಿಗಳ ಎದುರು ಒಪ್ಪಿಕೊಳ್ಳುವುದು ಅತ್ಯಂತ ಪ್ರಮುಖ ಎಂದು ನಾನು ಆಳವಾಗಿ ಭಾವಿಸಿದ್ದೇನೆ. ನನ್ನ ಸವಲತ್ತನ್ನು ಒಪ್ಪಿಕೊಳ್ಳುವುದು ನನಗೆ ಅತ್ಯಂತ ಪ್ರಮುಖ ಹಂತವಾಗಿದೆ. ಯಾಕೆಂದರೆ, ಇದು ನನಗೆ ಆಲಿಸಿಕೊಳ್ಳಲು ಸಹಾಯ ಮಾಡುತ್ತದೆ. ಶ್ರೀಮಂತ, ಬಿಳಿಯ ಪುರುಷನಾಗಿ ನನ್ನ ಅನುಭವವು ನನ್ನ ಸಹ ಅಮೆರಿಕನ್ನರು ಅನುಭವಿಸಿದ ಅನ್ಯಾಯಕ್ಕಿಂತ ವಿಭಿನ್ನವಾಗಿತ್ತು. ನನಗಿಂತ ಭಿನ್ನವಾದವರ ಸ್ಥಿತಿಯನ್ನು ನಾನು ಅರ್ಥ ಮಾಡಿಕೊಳ್ಳುವುದರಿಂದ, ಈ ಹೋರಾಟದಲ್ಲಿ ನಾನು ಉತ್ತಮವಾಗಿ ಭಾಗವಹಿಸಲು ಸಹಾಯ ಮಾಡಿತು.
ನಿಮ್ಮ ಜನ್ಮ ಸ್ಥಿತಿಗತಿಗಳು ನಿಮ್ಮ ಜೀವನ ಪಥವನ್ನು ನಿರ್ದೇಶಿಸಬಾರದು ಎಂಬುದೇ ನಮ್ಮ ದೇಶ ನಿರ್ಮಾಣದ ಹಿಂದಿನ ಮೂಲ ಧ್ಯೇಯವಾಗಿದೆ. ದೇವರು ಒಬ್ಬ ರಾಜನನ್ನು ಆಯ್ಕೆ ಮಾಡುವ ಕಲ್ಪನೆಯು ಅಸಂಬದ್ಧವಾಗಿದೆ ಎಂದು ದೇವರು ನಮ್ಮೆಲ್ಲರನ್ನೂ ಆಯ್ಕೆ ಮಾಡಿದನು ಮತ್ತು ದೇವರು ನಮ್ಮೆಲ್ಲರನ್ನೂ ಸಮಾನವಾಗಿ ಪ್ರೀತಿಸುತ್ತಾನೆ. ದೇವರ ಪ್ರೀತಿಯನ್ನು ಪ್ರತಿಫಲಿಸುವ ಮತ್ತು ನಮ್ಮೆಲ್ಲರಲ್ಲೂ ದೇವರು ಹುದುಗಿಸಿರುವ ಕಲ್ಪನೆಯನ್ನು ಪ್ರತಿಫಲಿಸುವ ಸಮಾಜವನ್ನು ರೂಪಿಸುವ ಬಯಕೆಯನ್ನು ಅವರು ಹೊಂದಿದ್ದರು. ನಮ್ಮಲ್ಲಿ ಯಾರಾದರೂ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಪ್ರೀತಿಗೆ ಅರ್ಹರು ಎಂದು ದೇವರು ಭಾವಿಸಲಿಲ್ಲ.
ಅಷ್ಟಕ್ಕೂ, ಸ್ವಾತಂತ್ರ್ಯ, ಸಮಾನತೆ ಮತ್ತು ಎಲ್ಲರಿಗೂ ಸಮಾನ ನ್ಯಾಯವನ್ನು ಪ್ರತಿಪಾದಿಸಿದ ಇದೇ ಸಂಸ್ಥಾಪಕರು ಕೂಡ ಈ ಹಿಂದೆ ಜೀತದಾಳುಗಳ ಮಾಲೀಕರೇ ಆಗಿದ್ದರು. ಜನರಿಂದ ಜನರಿಗಾಗಿ ರಚಿಸಿದ ಅವರ ರಾಷ್ಟ್ರದ ಪ್ರಬಲ ಕಲ್ಪನೆಯು ಪೂರ್ವಾಗ್ರಹ, ಅನ್ಯಾಯ ಮತ್ತು ಜನಾಂಗೀಯತೆಯ ಅಡಿಪಾಯದ ಮೇಲೆ ನಿಂತಿದೆ. ಈ ಭ್ರಷ್ಟ ಅಡಿಪಾಯ ಮತ್ತು ಅದು ನಮ್ಮೆಲ್ಲರಿಗೂ ಅವಕಾಶಗಳನ್ನು ಕಲ್ಪಿಸುವಲ್ಲಿ ಪ್ರಸ್ತುತ ವಿಫಲವಾಗುತ್ತಿರುವ ಸಮಸ್ಯೆಯನ್ನು ಪರಿಗಣಿಸದೇ, ಮಾನವನ ನಿಜವಾದ ಪ್ರಗತಿಗಾಗಿನ ನಿಜವಾದ ಸಾಮರ್ಥ್ಯವನ್ನು ‌ಅರ್ಥ ಮಾಡಿಕೊಳ್ಳದೇ ನಾವು ನಮ್ಮನೇ ತಡೆಹಿಡಿದುಕೊಳ್ಳುತ್ತಿದ್ದೇವೆ - ಮತ್ತು ನಮಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಎಲ್ಲರಿಗೂ ನ್ಯಾಯ ಎಂಬ ಮುಕ್ತ ಧ್ಯೇಯವನ್ನು ತಲುಪಲು ಸಾಧ್ಯವಾಗುವುದೇ ಇಲ್ಲ.
ಆಗಾಗ್ಗೆ ನನ್ನನ್ನು ಸ್ನೇಹಿತರು, ತಂಡದ ಸದಸ್ಯರು, ಪತ್ರಕರ್ತರು ಮತ್ತು ಪಾಲುದಾರರು, ವ್ಯತ್ಯಾಸವನ್ನು ಮಾಡಲು ನಾವು ಏನು ಮಾಡಬಹುದುಕೇಳುತ್ತಾರೆ. ನಾನು ಯಾವುದೇ ರೀತಿಯಲ್ಲೂ ಪರಿಣಿತನಲ್ಲ ಮತ್ತು ಕೇವಲ 29 ವರ್ಷದ ನಾನು ಜಗತ್ತು ಹೇಗೆ ಕೆಲಸ ಮಾಡುವ ರೀತಿಯ ಬಗ್ಗೆ ಕಲಿಯುವುದೇ ಸಾಕಷ್ಟಿದೆ. ಅಮೆರಿಕದಲ್ಲಿ ನಾವು ಬಯಸಿದ ಹಾಗೆ ಬದಲಾವಣೆಯನ್ನು ಮಾಡಲು ಏನು ಬೇಕಿದೆ ಎಂಬ ಬಗ್ಗೆ ನನ್ನ ದೃಷ್ಟಿಕೋನವನ್ನು ಈ ಕೆಳಗೆ ನಾನು ಹಂಚಿಕೊಂಡಿದ್ದೇನೆ. ಜನರ ಹಿನ್ನೆಲೆ ಯಾವುದೇ ಇದ್ದರೂ, ಎಲ್ಲರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸದೇ ವ್ಯವಸ್ಥಿತವಾದ ಜನಾಂಗೀಯತೆಯನ್ನು ನಾವು ಕೊನೆಗೊಳಿಸಲಾಗದು.
ದೇಶದ ಸಂಸ್ಥಾಪನೆಯ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಜೀವನ ಮತ್ತು ಸಂತೃಪ್ತಿಯ ಬಗ್ಗೆ ನಮ್ಮ ಬದ್ಧತೆಯನ್ನು ಪುನಃ ಖಚಿತಪಡಿಸುವುದು ಪ್ರಥಮ ಮತ್ತು ಪ್ರಮುಖ ಆದ್ಯತೆಯಾಗಿದೆ ಎಂದು ನಾನು ಭಾವಿಸಿದ್ದೇನೆ. ಭವಿಷ್ಯದ ಯಶಸ್ಸಿಗೆ ಸಮಾನ ಧ್ಯೇಯವನ್ನು ನಾವು ಒಟ್ಟಾಗಿ ರೂಪಿಸಬೇಕಿದೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಅಮೆರಿಕ ಹೇಗೆ ಕಾಣಬೇಕು ಎಂಬುದನ್ನು ವ್ಯಾಖ್ಯಾನಿಸಬೇಕಿದೆ. ಇದು ಎಲ್ಲ ಅಮೆರಿಕನ್ನರನ್ನು ಒಳಗೊಂಡ ಮತ್ತು "ಜನರಿಂದ, ಜನರಿಗಾಗಿ"ನ ಪ್ರಕ್ರಿಯೆಯಾಗಬೇಕು. ನಮ್ಮದು ಯಾವ ರೀತಿಯ ದೇಶವಾಗಬೇಕು ಎಂಬುದನ್ನು ವ್ಯಾಖ್ಯಾನಿಸಬಲ್ಲೆವು ಎಂದಾದರೆ, ಈ ನಮ್ಮ ಧ್ಯೇಯವನ್ನು ವಾಸ್ತವಕ್ಕೆ ಇಳಿಸುವುದಕ್ಕೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಕುರಿತು ಕ್ರಮ ಕೈಗೊಳ್ಳಲು ಮತ್ತು ನಮ್ಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಆರಂಭಿಸಬಹುದು.
ಜಿಡಿಪಿ ಅಥವಾ ಷೇರು ಮಾರುಕಟ್ಟೆಯಂತಹ ಅಲ್ಪಾವಧಿ ಗಣನೆಯ ಬದಲಿಗೆ ನಮ್ಮ ಮೌಲ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಯಶಸ್ಸನ್ನು ವ್ಯಾಖ್ಯಾನಿಸಲೂ ಸಹ ನಾವು ಆರಂಭಿಸಬೇಕಿದೆ. ನಿಮ್ಮ ಆರೋಗ್ಯ ಸೇವೆ ವೆಚ್ಚ ಹೆಚ್ಚಳವಾದರೆ, ನೀವು ಪಡೆಯುವ ಮೌಲ್ಯ ಎಷ್ಟೇ ಇದ್ದರೂ, ಜಿಡಿಪಿ ಹೆಚ್ಚಳವಾಗುತ್ತದೆ. ಒಂದು ಚಂಡಮಾರುತ ಬಂದು ಸಾವಿರಾರು ಮನೆಗಳನ್ನು ಉರುಳಿಸಿದಾಗ ನಾವು ಅವುಗಳನ್ನು ನಿರ್ಮಿಸಿದರೆ, ಜಿಡಿಪಿ ಹೆಚ್ಚಳವಾಗುತ್ತದೆ. ಜಿಡಿಪಿ ಮೂಲಭೂತವಾಗಿ ಬ್ರೋಕನ್‌ ಮೆಟ್ರಿಕ್‌ ಆಗಿದ್ದು, ಮನುಷ್ಯನ ನಿಜವಾದ ಸಂತೃಪ್ತಿಗೆ ಯಾವುದು ಕೊಡುಗೆ ನೀಡುತ್ತದೆ ಎಂಬುದನ್ನು ತೋರಿಸುವುದಿಲ್ಲ. ಸಂತೃಪ್ತಿಯ ಹಾತೊರಿಕೆಯು ಸಂಪತ್ತಿನ ಹಾತೊರಿಕೆಯನ್ನು ಮೀರಿ ವಿಸ್ತರಿಸಬೇಕಿದೆ.
ಸತ್ಯ, ಸಾಮರಸ್ಯ ಮತ್ತು ಪರಿಹಾರದ ಕುರಿತು ವೈವಿಧ್ಯಮಯ ಮತ್ತು ಪಕ್ಷಪಾತವಿಲ್ಲದ ಆಯೋಗವನ್ನು ನಾವು ಸ್ಥಾಪಿಸಬೇಕಿದೆ. ಇಡೀ ದೇಶದಲ್ಲಿ ಅಮೆರಿಕದ ಕಪ್ಪು ವರ್ಣೀಯ ಸಮುದಾಯದವರ ಮಾತುಗಳನ್ನು ಕೇಳಿಸಿಕೊಳ್ಳಲಾಗುತ್ತದೆ ಎಂಬುದನ್ನು ಖಚಿತಪಡಿಸುವ ಪ್ರಕ್ರಿಯೆಯನ್ನು ನಾವು ಆರಂಭಿಸಬೇಕು, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪಕ್ಷಪಾತತನ ಮತ್ತು ಪೂರ್ವಾಗ್ರಹದ ಬಗ್ಗೆ ತನಿಖೆ ನಡೆಸಬೇಕು, ನ್ಯಾಯ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗವನ್ನು ಸಬಲಗೊಳಿಸಬೇಕು ಮತ್ತು ಆಯೋಗವು ಸಾಮರಸ್ಯ ಮತ್ತು ಪರಿಹಾರದ ಕುರಿತು ನೀಡಿದ ಶಿಫಾರಸುಗಳ ಕುರಿತು ಕ್ರಮ ಕೈಗೊಳ್ಳಬೇಕು. ವಿಶ್ವದ ವಿವಿಧೆಡೆಯಲ್ಲಿ ದೌರ್ಜನ್ಯ ತಡೆಯಲು ಕ್ರಮ ಕೈಗೊಂಡವರಿಂದ ನಾವು ಕಲಿಯುವುದು ಬಹಳಷ್ಟಿವೆ ಮತ್ತು ಅಮೆರಿಕದ ಮೌಲ್ಯಗಳನ್ನು ಪ್ರತಿಫಲಿಸುವ ಮತ್ತು ಅಗತ್ಯ ಬದಲಾವಣೆ ಮತ್ತು ನಿವಾರಣೆ ಮಾಡಲು ನಮ್ಮ ದೇಶಕ್ಕೆ ನೆರವಾಗುವ ಪ್ರಕ್ರಿಯೆಯನ್ನು ನಾವು ರೂಪಿಸಬೇಕು.
ಶಿಕ್ಷಣ, ಆರೋಗ್ಯ ಸೇವೆ ಮತ್ತು ವಸತಿಯಲ್ಲಿ ಹೂಡಿಕೆ ಮಾಡುವ ಮೂಲಕ ಅಮೆರಿಕದಲ್ಲಿ "ಅವಕಾಶದ ಯಂತ್ರ"ವನ್ನು ನಾವು ಮರು ಆರಂಭಿಸಿ, ಈ ಉಚಿತ ಮತ್ತು ಮುಕ್ತ ಸಮಾಜವು ಎಲ್ಲರಿಗೂ ಲಭ್ಯ ಮತ್ತು ಕೈಗೆಟುಕಬಹುದಾದಂತೆ ಮಾಡಬೇಕಿದೆ.
1980 ರಿಂದ ಅಮೆರಿಕದಲ್ಲಿ ಉದ್ಯಮಶೀಲತೆಯು ಗಮನಾರ್ಹವಾಗಿ ಕುಸಿದಿದ್ದಕ್ಕೆ, ಸೂಕ್ತ ಸಾಮಾಜಿಕ ಭದ್ರತೆ ಇಲ್ಲದಿರುವುದೇ ಕಾರಣ ಎಂದು ನಾನು ಭಾವಿಸಿದ್ದೇನೆ. ಒಂದು ವಹಿವಾಟು ಆರಂಭಿಸಲು ಜನರು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಉದ್ಯಮಶೀಲತೆಯು ಅವಲಂಬಿಸಿರುತ್ತದೆ. ನಾನು ಹೊಂದಿದ್ದಂತಹ ಒಂದು ರೀತಿಯ ಸುರಕ್ಷತೆ ಇಲ್ಲದೇ ಇದನ್ನು ಸಾಧಿಸಲು ಬಹುತೇಕ ಅಸಾಧ್ಯವೇ ಆಗಿದೆ. ಪ್ರಸ್ತುತ ಸಂಭಾವ್ಯ ಉದ್ಯಮಶೀಲರು ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಸಾಲಕ್ಕೆ ಸಿಲುಕಿರುತ್ತಾರೆ ಮತ್ತು ಹಂತ ಹಂತವಾದ ಸಂಬಳ ವೃದ್ಧಿಗೆ ಕಟ್ಟು ಬೀಳುತ್ತಾರೆ ಹಾಗೂ ಏರುತ್ತಿರುವ ಖರ್ಚುವೆಚ್ಚಗಳು ವಹಿವಾಟನ್ನು ಆರಂಭಿಸಲು ಅಗತ್ಯ ಬಂಡವಾಳವನ್ನು ಕೂಡಿಹಾಕುವುದು ಕಷ್ಟಕರವಾಗಿಸುತ್ತದೆ.
ನಮ್ಮ ಮುಂದಿನ ಪೀಳಿಗೆಗೆ ಲಾಭವಾಗಲು ನಮ್ಮ ದೇಶದ ಭವಿಷ್ಯದ ಮೇಲೆ ಹೂಡಿಕೆ ಮಾಡುವುದು ಅತ್ಯಂತ ವೆಚ್ಚದಾಯಕ. ನಾವು ಅತ್ಯಂತ ಸುಧಾರಿತ ತೆರಿಗೆ ವ್ಯವಸ್ಥೆ ಮತ್ತು ಗಮನಾರ್ಹವಾಗಿ ಹೆಚ್ಚಿನ ಎಸ್ಟೇಟ್‌ ತೆರಿಗೆಯನ್ನು ಜಾರಿಗೊಳಿಸಬೇಕಿದೆ ಮತ್ತು ಹೆಚ್ಚಿನ ದರದ ತೆರಿಗೆ ಪಾವತಿ ಮಾಡುವ ಸಂಸ್ಥೆಗಳು ನಮಗೆ ಅಗತ್ಯವಿದೆ. ನಾವು ಭವಿಷ್ಯದ ಮೇಲೆ ಹೂಡಿಕೆ ಮಾಡುತ್ತಿರುವಾಗ, ಕೇಂದ್ರೀಯ ವಿತ್ತೀಯ ಕೊರತೆಯನ್ನೂ ನಾವು ಕಡಿಮೆ ಮಾಡಬೇಕು. ಇದರಿಂದ, ತ್ವರಿತವಾಗಿ ಬದಲಾಗುತ್ತಿರುವ ನಮ್ಮ ವಿಶ್ವದಲ್ಲಿ ಎದುರಾಗಬಹುದಾದ ಯಾವುದೇ ಬಾಹ್ಯ ಆಘಾತಗಳಿಗೆ ಉತ್ತಮವಾಗಿ ನಾವು ಸಿದ್ಧವೂ ಆಗಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ನನ್ನಂತಹವರು ಹೆಚ್ಚಿನ ತೆರಿಗೆ ಪಾವತಿ ಮಾಡುತ್ತೇವೆ ಮತ್ತು ನಮ್ಮೆಲ್ಲರಿಗೂ ಪ್ರಯೋಜನ ನೀಡುವ ಸಮಾಜವನ್ನು ರೂಪಿಸುವುದು ಮೌಲ್ಯಯುತ ಎಂದು ನಾವು ಭಾವಿಸಿದ್ದೇನೆ.
ಇಂತಹ ಹಲವು ಬದಲಾವಣೆಗಳು ಅಲ್ಪಾವಧಿಯಲ್ಲಿ ಉದ್ಯಮಗಳಿಗೆ "ಕೆಟ್ಟ" ಪರಿಣಾಮ ಬೀರಬಹುದು. ಆದರೆ, ನಮ್ಮ ದೇಶದ ಜನರ ದೀರ್ಘಕಾಲೀನ ಹೂಡಿಕೆಯನ್ನು ಇವು ಪ್ರತಿನಿಧಿಸುವುದರಿಂದ, ಇವು ಅದ್ಭುತ ದೀರ್ಘಕಾಲೀನ ಪ್ರಯೋಜನಗಳನ್ನು ಒಟ್ಟಾರೆಯಾಗಿ ಒದಗಿಸುತ್ತದೆ ಎಂದು ನಾನು ಭಾವಿಸಿದ್ದೇನೆ.
ಈ ಬದಲಾವಣೆ ಯಾಕೆ ಇನ್ನೂ ಆಗಿಲ್ಲ? ನಮ್ಮ ಸರ್ಕಾರದ ಎಲ್ಲ ವಿಭಾಗಗಳಲ್ಲಿ ಬೂಮರ್ ಸೂಪರ್‌ಮೆಜಾರಿಟಿಯಿಂದಾಗಿ, ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಅಷ್ಟೇನೂ ಆಸಕ್ತಿ ಮೂಡಿಲ್ಲ ಎಂದು ನಾನು ಸರಳವಾಗಿ ಹೇಳಬಲ್ಲೆ. ದಶಕಗಳಿಂದಲೂ ಸಾಲ ಆಧರಿತ ಆರ್ಥಿಕ ತೆರಿಗೆ ರಿಯಾಯಿತಿ ಮತ್ತು ಅತ್ಯಂತ ಪ್ರಮುಖ ಪಾತ್ರಧಾರಿಗಾಳದ ಬೂಮರ್ಸ್‌ ಎಂದು ಕರೆಯಬಹುದಾದವರನ್ನು ಶ್ರೀಮಂತಗೊಳಿಸಲು ವೆಚ್ಚ ಪ್ರೋತ್ಸಾಹದ ತಂತ್ರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಖಂಡಿತವಾಗಿಯೂ, ಅಮೆರಿಕದಲ್ಲಿನ ಎಲ್ಲ ಕೌಟುಂಬಿಕ ಶ್ರೀಮಂತಿಕೆಯ ಬಹುತೇಕ ಶೇ. 60 ಪಾಲನ್ನು ಬೂಮರ್ಸ್‌ ಹೊಂದಿದ್ದಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಬಿಲಿಯನೇರ್‌ಗಳು ಶೇ. 3 ರಷ್ಟು ಸಂಪತ್ತು ಹೊಂದಿದ್ದಾರೆ. ಸಾಮಾಜಿಕ ಭದ್ರತೆಯೊಂದಿಗೆ ಉದಾಹರಣೆಗೆ, ಯಾವುದೇ ಅರ್ಹತೆ ಪರೀಕ್ಷೆ ಮಾಡದೆಯೇ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ತಲೆಮಾರಿನ ಎಲ್ಲರಿಗೂ ಪ್ರಯೋಜನ ಒದಗಿಸುವ ಕಾರ್ಯಕ್ರಮಕ್ಕೆ ಇದರಿಂದ ಹಣಕಾಸು ಒದಗಿಸಬಹುದು.
ಹಿಂದಿನ ಪೀಳಿಗೆಯವರು ತಮ್ಮನ್ನು ತಾವು ಯುವ ಪೀಳಿಗೆಯಲ್ಲಿ ಕಂಡುಕೊಳ್ಳದೇ ಇದ್ದಾಗ ಅವರು ಭವಿಷ್ಯದ ಮೇಲೆ ಹೂಡಿಕೆಯಲ್ಲಿ ಅಷ್ಟೇನೂ ಆಸಕ್ತಿ ತೋರುವುದಿಲ್ಲ ಎಂದು ಕೆಲವು ಸಂಶೋಧನೆಗಳು ಹೇಳಿವೆ. ಅಮೆರಿಕದಲ್ಲಿ, ಬೂಮರ್ ತಲೆಮಾರಿನಲ್ಲಿ ಶೇ. 70 ಬಿಳಿಯರಿದ್ದಾರೆ ಮತ್ತು ಝೆಡ್ ತಲೆಮಾರಿನಲ್ಲಿ ಶೇ. 50 ರಷ್ಟು ಬಿಳಿಯರಿದ್ದಾರೆ. ಅಮೆರಿಕದ ಜನಸಂಖ್ಯಾಶಾಸ್ತ್ರೀಯ ಬದಲಾವಣೆ ಅತ್ಯಗತ್ಯವಾಗಿದೆ. ಹೀಗಾಗಿ, ಯಾರೇ ಆಗಿರಲಿ ಅಥವಾ ಅವರ ಮೂಲ ಯಾವುದೇ ಆಗಿರಲಿ, ನಮ್ಮ ಸಂಸ್ಥಾಪನೆಯ ಮೌಲ್ಯಗಳನ್ನು ಉತ್ತಮವಾಗಿ ಪ್ರತಿನಿಧಿಸುವ, ನಮ್ಮ ಹಿಂದಿನ ಆಳ ಗಾಯಗಳನ್ನು ಗುಣಪಡಿಸುವ, ಜನಾಂಗೀಯತೆ ಮತ್ತು ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸುವ ಮತ್ತು ಎಲ್ಲರಿಗೂ ಅವಕಾಶವನ್ನು ರೂಪಿಸುವ ದೇಶವನ್ನು ರಚಿಸುವಲ್ಲಿ ನಾವು ಒಟ್ಟಾಗಿ ಶ್ರಮಿಸಬಹುದೇ ಅಥವಾ ಇಲ್ಲವೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ನಮ್ಮ ಪ್ಲಾಟ್‌ಫಾರಂನಲ್ಲಾಗಲೀ ಅಥವಾ ಇತರೆಡೆಯಲ್ಲಾಗಲೀ ಜನಾಂಗೀಯ ಹಿಂಸೆಯನ್ನು ಪ್ರಚೋದಿಸುವುದಕ್ಕೆ ಸಂಬಂಧಿಸಿದ ಖಾತೆಗಳನ್ನು ಅಮೆರಿಕದಲ್ಲಿ Snapchat ಪ್ರೋತ್ಸಾಹಿಸುವುದಿಲ್ಲ. ನಮ್ಮ ಕಂಟೆಂಟ್ ಪರಿಶೋಧದ ಪ್ಲಾಟ್‌ಫಾರಂ ತಪ್ಪುಒಪ್ಪುಗಳನ್ನು ಅರಿಯಬಲ್ಲದು, ಇಲ್ಲಿ ಏನನ್ನು ಪ್ರೋತ್ಸಾಹಿಸಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ. ಧನಾತ್ಮಕ ಪರಿಣಾಮವನ್ನು ಉಂಟು ಮಾಡುವ ಬಗ್ಗೆ ಹಿಂದಿನಿಂದಲೂ ನಾವು ಪ್ರತಿಪಾದಿಸುತ್ತಿದ್ದೇವೆ ಮತ್ತು Snapchat ನಾವು ಪ್ರೋತ್ಸಾಹಿಸುವ ಕಂಟೆಂಟ್‌ ಮೂಲಕ ನುಡಿದಂತೆ ನಡೆಯುತ್ತೇವೆ. ಭೇದ ಕಲ್ಪಿಸುವ ಜನರು Snapchat ನಲ್ಲಿ ಪ್ರಕಟಿಸುವ ವಿಷಯವು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಿಗೆ ಅನುಗುಣವಾಗಿರುವವರೆಗೂ, ಅವರಿಗೆ Snapchat ಖಾತೆಯನ್ನು ನಿರ್ವಹಿಸಲು ಅವಕಾಶ ಒದಗಿಸುವುದನ್ನು ನಾವು ಮುಂದುವರಿಸಬಹುದು. ಅದರೆ, ಆ ಖಾತೆ ಅಥವಾ ಕಂಟೆಂಟ್ ಅನ್ನು ಯಾವುದೇ ರೀತಿಯಲ್ಲೂ ಪ್ರಚಾರ ಮಾಡುವುದಿಲ್ಲ.
ಪ್ರೀತಿ ಕಡೆಗೆ ಪಯಣಿಸುವುದರಲ್ಲಿ ಎಂದಿಗೂ ವಿಳಂಬ ಎಂಬುದಿಲ್ಲ. ನಮ್ಮ ಅದ್ಭುತ ದೇಶದ ನಾಯಕತ್ವವು ನಮ್ಮ ಸಂಸ್ಥಾಪನಾ ಮೌಲ್ಯಗಳು ಮತ್ತು ಅಸ್ತಿತ್ವದ ದ್ಯೋತಕವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಎಲ್ಲರಿಗೂ ನ್ಯಾಯ ಎಂಬುದನ್ನು ಸಾಧಿಸಲು ಶ್ರಮಿಸುತ್ತಾರೆ ಎಂದು ನನ್ನ ಪ್ರಾಮಾಣಿಕ ಮತ್ತು ವಿನಮ್ರ ಭರವಸೆಯಾಗಿದೆ.
ನಮ್ಮ ಕ್ರಮಗಳು ಆ ದಿನದವರೆಗೂ, ಜನಾಂಗೀಯತೆ, ಹಿಂಸೆ ಮತ್ತು ಅನ್ಯಾಯವನ್ನು ಪ್ರತಿರೋಧಿಸುವ ವಿಚಾರದಲ್ಲಿ ಯಾವುದೇ ಕುಂದು ಉಂಟಾಗದಂತೆ ಇರುತ್ತವೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ ಮತ್ತು ನಾವು ಅದನ್ನಾಗಲೀ ಅಥವಾ ಅದನ್ನು ಬೆಂಬಲಿಸುವವರನ್ನಾಗಲೀ ನಮ್ಮ ಪ್ಲಾಟ್‌ಫಾರಂನಲ್ಲಿ ಪ್ರೋತ್ಸಾಹಿಸುವುದಿಲ್ಲ.
ಜನರು ಒಪ್ಪದ ಅಥವಾ ಕೆಲವು ಜನರಿಗೆ ಅಸೂಕ್ಷ್ಮವಾದ ಕಂಟೆಂಟ್‌ನ ಖಾತೆಗಳನ್ನು ನಾವು ತೆಗೆದುಹಾಕುತ್ತೇವೆ ಎಂದು ಇದರ ಅರ್ಥವಲ್ಲ. ನಮ್ಮ ದೇಶ ಮತ್ತು ವಿಶ್ವದ ಭವಿಷ್ಯದ ಬಗ್ಗೆ ತುಂಬಾ ಚರ್ಚೆಗಳು ನಡೆಯಬೇಕಿದೆ. ಆದರೆ, ಮಾನವ ಜೀವದ ಮೌಲ್ಯದ ಬಗ್ಗೆ ಮತ್ತು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ನಿರಂತರ ಹೋರಾಟದ ಪ್ರಾಮುಖ್ಯತೆಯ ಬಗ್ಗೆ ನಮ್ಮ ದೇಶದಲ್ಲಿ ಚರ್ಚೆಗೆ ಯಾವುದೇ ಅವಕಾಶ ಇರುವುದಿಲ್ಲ. ಶಾಂತಿ, ಪ್ರೀತಿ ಮತ್ತು ನ್ಯಾಯದ ಪರ ನಿಲ್ಲುವವರ ಪರವಾಗಿ ನಾವಿದ್ದೇವೆ ಮತ್ತು ದುಷ್ಟತನಕ್ಕಿಂತ ಒಳ್ಳೆಯತನವನ್ನು ಪ್ರಚುರಪಡಿಸಲು ನಾವು ನಮ್ಮ ವೇದಿಕೆಯನ್ನು ಬಳಸುತ್ತೇವೆ.
"ಕೆಲವು ವ್ಯಕ್ತಿಗಳು" ಜನಾಂಗೀಯ ದ್ವೇಷವನ್ನು ಹೊಂದಿದ್ದರಿಂದ ಅಥವಾ ನಮ್ಮ ಸಮಾಜದಲ್ಲಿ "ಕೆಲವು ಅನ್ಯಾಯ" ನಡೆಯುತ್ತಿದೆ ಎಂಬ ಕಾರಣದಿಂದ "ಎಲ್ಲವೂ ಕೆಟ್ಟದಾಗಿಲ್ಲ" ಎಂಬ ಭಾವನೆಯನ್ನು ಹೊಂದಿರುವ ಹಲವು ಜನರಿದ್ದಾರೆ ಎಂದು ನನಗೆ ತಿಳಿದಿದೆ. ಮಾನವೀಯತೆಯು ಆಳವಾಗಿ ಪರಸ್ಪರ ಸಂಬಂಧ ಹೊಂದಿದೆ ಮತ್ತು ನಮ್ಮಲ್ಲಿ ಒಬ್ಬರಿಗೆ ತೊಂದರೆಯಾದರೆ, ನಮ್ಮೆಲ್ಲರಿಗೂ ತೊಂದರೆಯಾಗುತ್ತದೆ ಎಂಬುದು ನನ್ನ ಭಾವನೆಯಾಗಿದೆ. ನಮ್ಮಲ್ಲಿ ಒಬ್ಬರು ಹಸಿವಿನಿಂದ ಬಳಲಿದರೆ, ನಾವೆಲ್ಲರೂ ಹಸಿವಿನಿಂದ ಬಳಲುತ್ತೇವೆ. ನಮ್ಮಲ್ಲಿ ಒಬ್ಬರು ಬಡವರಾಗಿದ್ದರೆ, ನಾವೆಲ್ಲರೂ ಬಡವರೇ. ನಮ್ಮಲ್ಲಿ ಯಾರಾದರೂ ಒಬ್ಬರು ಮೌನವಾಗಿರುವ ಮೂಲಕ ಅನ್ಯಾಯಕ್ಕೆ ಎಡೆಮಾಡಿಕೊಟ್ಟರೆ, ಉನ್ನತ ಆದರ್ಶಗಳಿಗೆ ತುಡಿಯುವ ದೇಶವನ್ನು ರಚಿಸಲು ನಾವೆಲ್ಲರೂ ವಿಫಲವಾಗುತ್ತೇವೆ.
ಸಮಾನತೆ ಮತ್ತು ನ್ಯಾಯವನ್ನು ಬೆಂಬಲಿಸುವ ಸಂಸ್ಥೆಗಳಿಗೆ Snap ಕೊಡುಗೆ ನೀಡುತ್ತದೆಯೇ ಎಂದು ನಿಮ್ಮಲ್ಲಿ ಕೆಲವರು ಕೇಳಿದ್ದೀರಿ. ಹೌದು ಎಂಬುದೇ ಇದಕ್ಕೆ ಉತ್ತರ. ಆದರೆ, ನನ್ನ ಅನುಭವದ ಪ್ರಕಾರ, ನಾವು ಎದುರಿಸಿದ ಅನ್ಯಾಯದಿಂದ ಉಂಟಾದ ಕಂದಕವನ್ನು ನಿವಾರಿಸಲು ದೇಣಿಗೆ ಮಾತ್ರದಿಂದ ಸಾಧ್ಯವಿಲ್ಲ. ಅವಕಾಶ ವಂಚಿತರಿಗೆ ಅವಕಾಶವನ್ನು ರೂಪಿಸಲು ಅರ್ಥವತ್ತಾದ ಕೊಡುಗೆಯನ್ನು ನಮ್ಮ ಕುಟುಂಬವು ಮಾಡುತ್ತದೆ ಮತ್ತು ಮುಂದುವರಿಸುತ್ತದೆ ಹಾಗೂ ನ್ಯಾಯವನ್ನು ಪೋಷಿಸುವವರಿಗೆ ದೇಣಿಗೆ ನೀಡುತ್ತದೆ. ಆದರೆ, ಈ ಸನ್ನಿವೇಶಗಳು ನಮ್ಮ ಸಮಾಜದಲ್ಲಿ ಇನ್ನಷ್ಟು ಸಮಗ್ರ ಮರು ಸಂರಚನೆಗೆ ಆಗ್ರಹಿಸುತ್ತಿದೆ. ಖಾಸಗಿ ದೇಣಿಗೆಯು ರಂಧ್ರಗಳನ್ನು ಮುಚ್ಚಬಹುದು ಅಥವಾ ಪ್ರಗತಿಯನ್ನು ಉತ್ತೇಜಿಸಬಹುದು. ಆದರೆ ಇದೊಂದೇ, ಆಳ ಮತ್ತು ವಿಶಾಲವಾದ ಅನ್ಯಾಯದ ಕಂದರವನ್ನು ಪರಿಹರಿಸಲಾರದು. ಈ ಕಂದರವನ್ನು ತುಂಬಲು ನಾವು ಇಡೀ ದೇಶವಾಗಿ ಒಗ್ಗಟ್ಟಾಗಬೇಕಿದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಎಲ್ಲರಿಗೂ ನ್ಯಾಯದ ಆಗ್ರಹದಲ್ಲಿ ನಾವು ಒಟ್ಟಾಗಬೇಕಿದೆ.
ನಮ್ಮ ಎದುರು ತುಂಬಾ ದೊಡ್ಡ ಸವಾಲುಗಳಿವೆ. ಇತ್ತೀಚಿನ ಜಾರ್ಜ್‌, ಅಹಮದ್‌ ಮತ್ತು ಬ್ರೆಯೋನ್ನಾ ಸೇರಿದಂತೆ ಹಲವು ಅನಾಮಿಕ ಸಂತ್ರಸ್ತರನ್ನೂ ಒಳಗೊಂಡಂತೆ ಅಮೆರಿಕದಲ್ಲಿನ ಹಿಂಸೆ ಮತ್ತು ಅನ್ಯಾಯದ ದೀರ್ಘ ಪರಂಪರೆಯನ್ನು ತಡೆಯಲು, ಆಳವಾದ ಬದಲಾವಣೆಗೆ ನಾವು ಮೊರೆಹೋಗಬೇಕಿದೆ. ಇದು ಕೇವಲ ನಮ್ಮ ದೇಶದಲ್ಲಿ ಆಗಬೇಕಾದ ಬದಲಾವಣೆಯಲ್ಲ. ಬದಲಿಗೆ, ನಮ್ಮ ಹೃದಯದಲ್ಲಿ ಆಗಬೇಕಾದ ಬದಲಾವಣೆಯಾಗಿದೆ. ನಾವು ಶಾಂತಿಯ ಬೆಳಕನ್ನು ಹೊತ್ತೊಯ್ಯಬೇಕಿದೆ ಮತ್ತು ಇಡೀ ಮನುಕುಲಕ್ಕೆ ಪ್ರೀತಿಯನ್ನು ಹಂಚಬೇಕಿದೆ.
ನಿಮ್ಮೊಂದಿಗೆ ಶಾಂತಿ ನೆಲೆಸಲಿ,
ಇವಾನ್
Back To News