Say It With Your Hands: New AR Lenses for Week of the Deaf

Snap is honoring International Week of the Deaf by launching a suite of creative tools, including custom Stickers and three Augmented Reality enabled Lenses that encourage Snapchatters to fingerspell.
Snapchatter ಗಳಿಗೆ ಬೆರಳುಗಳ ಮೂಲಕ ಮಾತನಾಡಲು ಪ್ರೋತ್ಸಾಹಿಸುವ ಕಸ್ಟಮ್ ಸ್ಟಿಕ್ಕರ್‌ಗಳು ಮತ್ತು ಮೂರು ವರ್ಧಿತ ರಿಯಾಲಿಟಿ ಸಕ್ರಿಯಗೊಳಿಸಿದ ಲೆನ್ಸ್‌ಗಳು ಸೇರಿದಂತೆ, ಕ್ರಿಯೇಟಿವ್ ಟೂಲ್‌ಗಳ ಗುಚ್ಛವನ್ನು ಬಿಡುಗಡೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕಿವುಡರ ಸಪ್ತಾಹವನ್ನು Snap ಗೌರವಿಸುತ್ತಿದೆ. Snap ನಲ್ಲಿನ ಕಿವುಡ ಮತ್ತು ಶ್ರವಣದೋಷವಿರುವ ಉದ್ಯೋಗಿಗಳಿಂದ ಮಾರ್ಗದರ್ಶನ ಮತ್ತು ಪ್ರತಿಕ್ರಿಯೆಗಳನ್ನು ಅಳವಡಿಸಿಕೊಂಡು, ಈ ಹೊಸ ವೈಶಿಷ್ಟ್ಯಗಳನ್ನು ವಿಚಾರಶೀಲವಾಗಿ ವಿನ್ಯಾಸಗೊಳಿಸಲಾಗಿದೆ.
ಅಮೆರಿಕನ್ ಸಂಕೇತ ಭಾಷೆಯನ್ನು ಗುರುತಿಸುವ ಮತ್ತು ಅನುವಾದ ಮಾಡುವ SignAll ನ AI ಮತ್ತು ಕಂಪ್ಯೂಟರ್ ವಿಷನ್ ತಂತ್ರಜ್ಞಾನವನ್ನು ಬಳಸಿಕೊಂಡಿರುವ ಈ AR ಲೆನ್ಸ್‌ಗಳು ತಮ್ಮ ಹೆಸರನ್ನು ಹಾಗೂ 'ಪ್ರೀತಿ', 'ಅಪ್ಪುಗೆ' ಮತ್ತು 'ಮುಗುಳ್ನಗು' ಮುಂತಾದ ಇತರ ಸಾಮಾನ್ಯ ಪದಗಳನ್ನು ತಮ್ಮ ಬೆರಳಿನಿಂದ ಸ್ಪೆಲ್ ಮಾಡಲು Snapchatter ಗಳಿಗೆ ಸ್ಪೂರ್ತಿ ನೀಡುತ್ತವೆ.
Snapchatter ಗಳು ತಮ್ಮ ಕಲಿಕೆಯ ಅನುಭವವನ್ನು ಸೆರೆಹಿಡಿಯಬಹುದು, ಚಾಟ್‌ನಲ್ಲಿ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು ಮತ್ತು Bitmoji ಸ್ಟಿಕ್ಕರ್‌ಗಳಂಥ ಹೆಚ್ಚುವರಿ ವೈಶಿಷ್ಟ್ಯಗಳ ಮೂಲಕ ಜಾಗೃತಿಯನ್ನು ಹೆಚ್ಚಿಸಬಹುದು.
ಎಲ್ಲ Snapchatter ಗಳನ್ನು ಸಂಪೂರ್ಣವಾಗಿ ಒಳಗೊಂಡಿರುವ ಉತ್ಪನ್ನಗಳನ್ನು ನಮ್ಮ North Star ತಯಾರಿಸುತ್ತದೆ. ನೀವು ಎಲ್ಲಿ ವಾಸಿಸುತ್ತೀರಿ, ನಿಮ್ಮ ಹಿನ್ನೆಲೆ ಏನು, ನೀವು ಹೇಗೆ ಕಾಣಿಸುತ್ತೀರಿ ಅಥವಾ ನೀವು ಹೇಗೆ ಸಂವಹನ ಮಾಡುತ್ತೀರಿ ಎನ್ನುವುದರ ಪರಿಗಣನೆ ಇಲ್ಲದೆ, ನಮ್ಮ ಸಮುದಾಯದ ಎಲ್ಲ ಸದಸ್ಯರಿಗೆ ನಮ್ಮ ಉತ್ಪನ್ನಗಳನ್ನು ಅವರಿಗಾಗಿಯೇ ತಯಾರಿಸಲಾಗಿದೆ ಎಂಬಂತೆ ಅನಿಸಬೇಕು ಎಂದು ನಾವು ಬಯಸುತ್ತೇವೆ -- ಮತ್ತು ಇದರಲ್ಲಿ ಸ್ಥಳೀಯ ಸಂಕೇತ ಭಾಷೆಯಲ್ಲಿ ಮಾತನಾಡುವವರೂ ಸೇರಿದ್ದಾರೆ. Snapchat ನಲ್ಲಿ ಪ್ರತಿಯೊಬ್ಬರಿಗಾಗಿ ಅನುಭವವನ್ನು ಸುಧಾರಿಸಲು ನಾವು ನಿರಂತರ ಪರಿಶ್ರಮ ಪಡುತ್ತಿರುವಂತೆ ನಮ್ಮ ಸಮುದಾಯದಿಂದ ಇನ್ನಷ್ಟು ಕಲಿಯುವುದಕ್ಕಾಗಿ ನಾವು ನಿರೀಕ್ಷಿಸುತ್ತೇವೆ.
ಬಿಡುಗಡೆಯಾಗಿರುವ ಲೆನ್ಸ್‌ಗಳನ್ನು ಈಗಲೇ ಪ್ರಯತ್ನಿಸಿ ಮತ್ತು ನಿಮ್ಮ ಹೆಸರನ್ನು ಸ್ಪೆಲ್ ಮಾಡಲು ಪ್ರಾರಂಭಿಸಿ!
Back To News