ಡಿಸೆಂಬರ್ 13, 2022
ಡಿಸೆಂಬರ್ 13, 2022

2022 ರಲ್ಲಿ Snapchat ನಿಮ್ಮನ್ನು ಹೇಗೆ ಸೆರೆಹಿಡಿಯಿತು!

2022 ರಲ್ಲಿ Snapchat ನಿಮ್ಮನ್ನು ಹೇಗೆ ಸೆರೆಹಿಡಿಯಿತು ಎಂದು ಹಿಂತಿರುಗಿ ನೋಡಲು, ಮರುಸ್ಮರಣೆ ಮಾಡಲು ಮತ್ತು ಸುತ್ತಿಡಲು ಇದು ಸೂಕ್ತ ಸಮಯವಾಗಿದೆ. Snap ನಲ್ಲಿ ನಮಗೆ ಇದು ಅತ್ಯಂತ ವ್ಯಸ್ತವಾದ ವರ್ಷವಾಗಿತ್ತು. ವರ್ಷದ ನಮ್ಮ ಅಗ್ರ ಲೆನ್ಸ್‌ಗಳಾದ ಕಾರ್ಟೂನ್ ಕಿಡ್ ಮತ್ತು ಕ್ಯೂಟ್ ಅನಿಮೆ ಜೊತೆಗೆ ಶೂಕ್, ಸ್ತಬ್ಧನಾದ, ಅತ್ತ, ನಮ್ಮ ಮುಗ್ಧ ಮುಖವನ್ನೂ ತೋರಿಸಿದ ಎಂದು ನಮಗೆ ಅನಿಸಿತು.[ 1]

Snap Inc. ಆಂತರಿಕ ಡೇಟಾ ಮೇ 01 - ನವೆಂಬರ್ 30, 2022.

ಅಲ್ಲಿ ಎಲ್ಲ ಬಗೆಯ ಪ್ರವೃತ್ತಿಗಳಿದ್ದವು: ಗಮನಿಸಬೇಕಾದ ಮೊದಲ ಸಂಗತಿ ಅಂದರೆ ಈ ವರ್ಷ ನಮ್ಮ ಸಮುದಾಯ ಜೋರಾಗಿ ಸದ್ದು ಮಾಡಿತು! ಒಟ್ಟಾರೆಯಾಗಿ, ಸಂಗೀತದೊಂದಿಗೆ Snap ಕಥೆಗಳ ಸಂಖ್ಯೆ 3 ಪಟ್ಟಿಗಿಂತಲೂ ಹೆಚ್ಚಿನ ಪ್ರಮಾಣಕ್ಕೆ ಬೆಳೆಯಿತು. Snap ಗಳಲ್ಲಿ ಬಳಸಲ್ಪಟ್ಟ ಅಗ್ರ ಹಾಡುಗಳು ಇವು:

  • ವಿಟಮಿನ್ ಎ ಅವರ "ಹ್ಯಾಪಿ ಬರ್ತ್‌ಡೇ

  • ಅಹ್ಮದ್ ಹೆಲ್ಮಿ ಅವರ "ಎಲ್ ಹರಕಾ ಡೆ" 

  • ಲೌವ್ ಅವರ "ಲೈಕ್ ಮೀ ಬೆಟರ್"

  • ಜಸ್ಟಿನ್ ಬೀಬರ್ ಅವರ "ಯಮ್ಮಿ"

  • ಗ್ಲಾಸ್ ಅನಿಮಲ್ಸ್ ಅವರ "ಹೀಟ್ ವೇವ್ಸ್" 

ಅದು ಕೇವಲ ಸಂಗೀತವಷ್ಟೇ ಆಗಿರಲಿಲ್ಲ, Snapchatter ಗಳು ತಮ್ಮ ಮೆಚ್ಚಿನ ಟಿವಿ ಶೋಗಳು ಮತ್ತು ಸಿನಿಮಾಗಳನ್ನು ಕೂಡ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಇಷ್ಟಪಟ್ಟರು. Snapchat ಕಥೆಗಳಲ್ಲಿ ಈ ವರ್ಷ ಅತಿ ಹೆಚ್ಚು ಚರ್ಚೆಗೆ ಕಾರಣವಾದ ಅತ್ಯಂತ ಜನಪ್ರಿಯ ಸಿನಿಮಾಗಳು ಇವು:

  • ಹೊಟೆಲ್ ಟ್ರಾನ್ಸಿಲ್ವೇನಿಯಾ: ಟ್ರಾನ್ಸ್‌ಫಾರ್ಮೇನಿಯಾ

  • ಥಾರ್: ಲವ್ ಆ್ಯಂಡ್ ಥಂಡರ್

  • ಮಿನಿಯನ್ಸ್: ದಿ ರೈಸ್ ಆಫ್ ಗ್ರೂ

  • ಡಾಕ್ಟರ್ ಸ್ಟ್ರೇಂಜ್ ಇನ್ ದ ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್

  • ಹೋಕಸ್ ಪೋಕಸ್ 2

. . .  ಮತ್ತು ಈ ಟಿವಿ ಶೋಗಳ ಕುರಿತು ಬಹಳ ಚರ್ಚೆಯಾಯಿತು:

  • ಕೋಬ್ರಾ ಕೈ

  • ಯುಫೋರಿಯಾ

  • ಲವ್ ಐಲ್ಯಾಂಡ್

  • ಸ್ಟ್ರೇಂಜರ್ ಥಿಂಗ್ಸ್

  • ಹೌಸ್ ಆಫ್ ದ ಡ್ರ್ಯಾಗನ್

ನವೆಂಬರ್ 2022 ರ ಪ್ರಕಾರ Snap Inc. ಆಂತರಿಕ ಡೇಟಾ

ಅಂತಿಮವಾಗಿ, ಪ್ರವಾಸೋದ್ಯಮ ಮತ್ತೆ ಗರಿಗೆದರಿತು.  Snapchatter ಗಳು ನ್ಯೂಯಾರ್ಕ್ ನಗರ ಪ್ರದಕ್ಷಿಣೆ ಮಾಡದಿರುವ ಸಂದರ್ಭ, ಅವರು ಲಂಡನ್ ಮತ್ತು ರೋಮ್‌ನಂತಹ ನಗರಗಳನ್ನು ಅನ್ವೇಷಿಸುತ್ತಾರೆ, ಹಾಗಾಗಿ ವರ್ಷದ #1 ಟ್ಯಾಗ್ ಮಾಡಿದ ಸ್ಥಳ ವಿಮಾನನಿಲ್ದಾಣವಾಗಿತ್ತು ಎನ್ನುವ ಕುರಿತು ನಮಗೆ ಅಚ್ಚರಿಯಾಗಲಿಲ್ಲ![ 2]

Snapchatter ಗಳು Snap ಗಳಲ್ಲಿ ಸೆರೆಹಿಡಿದ ಈ ವರ್ಷದ ಅಗ್ರ ಸ್ಥಳಗಳು ಈ ಕೆಳಗಿನಂತಿವೆ:

  • ಬಿಗ್ ಬೆನ್

  • ಸಂತ ಪಾಲ್ ಅವರ ಕ್ಯಾಥೆಡ್ರಲ್

  • ಗುಗೆನ್‌ಹೀಮ್ ಮ್ಯೂಸಿಯಂ

  • ಸಂತ ಪೀಟರ್‌ರ ಬೆಸಿಲಿಕಾ

  • ದಿ ಎಂಪೈರ್ ಸ್ಟೇಟ್ ಬಿಲ್ಡಿಂಗ್

Snap Inc. ಆಂತರಿಕ ಡೇಟಾ ಮೇ 01 2021 - ಜೂನ್ 22 2022.

ಇದು ಹರ್ಷದಾಯಕ ವರ್ಷವಾಗಿತ್ತು ಮತ್ತು ಇದು ಕೇವಲ ಕಥೆಯ ಆರಂಭ ಮಾತ್ರ. ಆದ ಕಾರಣ ಮುಂದಿನ ವಾರದಿಂದ, ನಮ್ಮ ಸಮುದಾಯಕ್ಕಾಗಿ ವೈಯಕ್ತಿಕಗೊಳಿಸಿದ ವರ್ಷಾಂತ್ಯದ ಕಥೆಗಳನ್ನು ತಲುಪಿಸಲು ನಾವು ಹರ್ಷಗೊಂಡಿದ್ದೇವೆ. ಅರ್ಹ Snapchatter ಗಳಿಗೆ, ತಮ್ಮ ಮೆಚ್ಚಿನ ನೆನಪುಗಳಿಂದ ರಚಿಸಿದ ತಮ್ಮ ವರ್ಷಾಂತ್ಯದ ಕಥೆಯನ್ನು ಕ್ಯಾಮೆರಾದಿಂದ ಮೇಲಕ್ಕೆ ಸ್ವೈಪ್ ಮಾಡುವ ಮೂಲಕ ಕಂಡುಕೊಳ್ಳಲು ಸಾಧ್ಯವಾಗುತ್ತದೆ. 

ಹ್ಯಾಪಿ ಸ್ನ್ಯಾಪಿಂಗ್‌ ಮತ್ತು ಮುಂದಿನ ವರ್ಷ ಸಿಗೋಣ!


[1] Snap Inc. ಆಂತರಿಕ ಡೇಟಾ 01 - ನವೆಂಬರ್ 30, 2022.

[2] Snap Inc. ಆಂತರಿಕ ಡೇಟಾ 2022.

ಸುದ್ದಿಗೆ ಮರಳಿ