ಏಪ್ರಿಲ್ 07, 2022
ಏಪ್ರಿಲ್ 07, 2022

Yellow Accelerator’s Latest Class

Last week, our fifth Yellow Accelerator cohort kicked off in Santa Monica, California, with eight founding teams from across the globe.

Snap ನ ಹಳದಿ ವೇಗವರ್ಧಕವನ್ನು, ಸೃಜನಶೀತಲತೆ ಮತ್ತು ತಂತ್ರಜ್ಞಾನದ ಛೇದನದಲ್ಲಿ ಕಟ್ಟುತ್ತಿರುವ ಅಭಿಯಾನ ಚಾಲಿತ , ಸೃಜನಶೀಲ ಉದ್ಯಮಿಗಳನ್ನು ಬೆಂಬಲಿಸಲು ಸ್ಥಾಪಿಸಲಾಗಿದೆ. ಪ್ರೋಗ್ರಾಮ್‌ನ ಭಾಗವಾಗಿ , ಎಂಟು ಕಂಪನಿಗಳು ಅವರ ವ್ಯವಹಾರ ಉದ್ದೇಶಗಳನ್ನು ಮುಟ್ಟಲು Snap ಕಡೆಯಿಂದ ಹೂಡಿಕೆ ಮತ್ತು ಮಾರ್ಗದರ್ಶನ , ಮತ್ತು ಚಾಲ್ತಿಯಲ್ಲಿ ಇರುವ ಪ್ರೋಗ್ರಾಮಿಂಗ್ ಪಡೆಯುತ್ತವೆ.

ಕಳೆದ ವಾರ, ಜಗತ್ತಿನ ಎಂಟು ಸ್ಥಾಪಕ ತಂಡಗಳೊಂದಿಗೆ, ನಮ್ಮ ಐದನೇ ಹಳದಿ ವೇಗವರ್ಧಕ ಕೊಹೋರ್ಟ್ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಆರಂಭವಾಯಿತು ಮುಂದಿನ ಹದಿಮೂರು ವಾರಗಳಲ್ಲಿ, ಹೂಡಿಕೆದಾರರು, ಟೆಕ್ ಸಂಸ್ಥಾಪಕರು, ಕಲಾಕಾರರು, ಕ್ರೀಡಾಪಟುಗಳು ಮತ್ತು ಮುಂತಾದವರ ಮುಂದಾಳತ್ವದಲ್ಲಿ ಜರುಗುವ ಪಠ್ಯಕ್ರಮಕ್ಕೆ ಈ ಸಂಸ್ಥಾಪಕರು Snap ಗೆ ಸೇರುತ್ತಾರೆ. ಈ ತರಗತಿ ಕೊಲಂಬಿಯಾ, ಟರ್ಕಿ, ಮತ್ತು ನೆದರ್ಲ್ಯಾಂಡ್ಸ್ ಸೇರಿ ಪ್ರಪಂಚದಾದ್ಯಂತದ ದೇಶಗಳಿಂದ ಬರುವ ಉದ್ಯಮಿಗಳನ್ನು ಬರಮಾಡಿಕೊಳ್ಳುತ್ತದೆ.

ಅವರು ಅಂತಿಮಗೊಳಿಸುವ ಸಮಯದಲ್ಲಿ ನಾವು ಅವರ ಪ್ರಯಾಣದ ಬಗ್ಗೆ ಜೂನ್‌ನಲ್ಲಿ ನಿಮಗೆ ಇನ್ನಷ್ಟನ್ನು ತಿಳಿಸುತ್ತೇವೆ, ಆದರೆ ಈ ಮಧ್ಯೆ, ಅವರ ಬಗ್ಗೆ ಕೆಳಗೆ ತಿಳಿಯಿರಿ!

  • Bits of Stock - ಕಾರ್ಡ್‌ಲೆಸ್ ಸ್ಟಾಕ್ ಪ್ರೋಗ್ರಾಮ್ ಮೇಲೆ ಕೆಲಸ ಮಾಡುತ್ತಿದ್ದು ಇದು ಗ್ರಾಹಕರು ಅವರ ಇಷ್ಟದ ಬ್ರಾಂಡ್ ಗಳಿಂದ ಪ್ರತಿದಿನದ ಖರೀದಿ ಮಾಡುವಾಗ ಅವರ ಸ್ಟಾಕ್ ನ ಸಣ್ಣ ಪಾಲನ್ನು ನೀಡುತ್ತದೆ, ಇದು ನೆದರ್ಲ್ಯಾಂಡ್ ನಲ್ಲಿ ಸ್ಥಾಪಿತವಾಗಿದೆ.

  • Blink Date- ವಾಯ್ಸ್ ಫಸ್ಟ್ ಡೇಟಿಂಗ್ ಆ್ಯಪ್ ಅನ್ನು ತಯಾರಿಸುತ್ತಿದ್ದು , ಇದು ವ್ಯಕ್ತಿಗಳನ್ನು ಹತ್ತು ನಿಮಿಷದ ಮಾತುಕತೆಗೆ ಜೋಡಿಸುತ್ತದೆ, ಅದರ ನಂತರ ಅವರು ಮುಂದುವರಿಯಲು ಯೋಚಿಸಬಹುದು

  • Bump - ಒಂದು ಸಾಫ್ಟ್‌ವೇರ್ ತಯಾರಿಸುತ್ತಿದ್ದು ಇದು ಕ್ರಿಯೇಟರ್‌ಗಳಿಗೆ ಬೇರೆ ಬೇರೆ ಮೂಲಗಳಿಂದ ತಮ್ಮ ಆದಾಯವನ್ನು ಟ್ರ್ಯಾಕ್ ಮಾಡಲು ಮತ್ತು ಸಂಗ್ರಹಿಸಲು, ಅವರ ಖರ್ಚನ್ನು ಮಾನಿಟರ್ ಮಾಡಲು, ಮತ್ತು ಅವರ ಕ್ರಿಪ್ಟೋ ಮತ್ತು NFT ಯನ್ನು ಒಂದೇ ಜಾಗದಲ್ಲಿ ನಿಭಾಯಿಸಲು ಸಹಾಯ ಮಾಡುತ್ತದೆ.

  • DB Creations - ಇದು Table Trenches ನಂತಹ AR ತಂತ್ರಗಳನ್ನು ರೂಪಿಸುತ್ತಿದ್ದು, ವೇಗದ ಪ್ರೋಟೋಟೈಪಿಂಗ್ ಮತ್ತು ಅನ್ವೇಷಿಸುವಿಕೆಯನ್ನು ಹೊಂದಿದೆ.

  • Ettos - ಸೌಂದರ್ಯ ಉತ್ಪನ್ನಗಳಿಗೆ ಒಂದು ಇ- ಕಾಮರ್ಸ್ ವೇದಿಕೆಯನ್ನು ರೂಪಿಸುತ್ತಿದ್ದು, ಒಳಗೊಳ್ಳುವ ಸೌಂದರ್ಯವನ್ನು ಬೆಂಬಲಿಸುತ್ತದೆ ಮತ್ತು ಕೊಲಂಬಿಯಾದಲ್ಲಿ ನೆಲೆ ಹೊಂದಿದೆ.

  • Shoplook - ಮೂಡ್ ಬೋರ್ಡ್‌ಗಳ ಸಹಾಯದಿಂದ ದೃಶ ಸ್ವ- ಅಭಿವ್ಯಕ್ತಿಗೆ, ಕ್ಯೂರೇಷನ್, ಮತ್ತು ಸ್ಪೂರ್ತಿಗೆ ಸಮುದಾಯ- ಚಾಲಿತ ವೇದಿಕೆಯನ್ನು ಪೋಷಿಸುತ್ತಿದೆ.

  • Tiplay Studio - ಇದು Water Shootyಯಂತಹ ಮೊಬೈಲ್ ಗೇಮ್‌ಗಳಿಗೆ ಟರ್ಕಿಯಲ್ಲಿ ಸ್ಥಾಪಿತವಾಗಿರುವ ಹಾಗು ವೇಗವಾಗಿ ಬೆಳೆಯುತ್ತಿರುವ ಗೇಮ್ ಸ್ಟುಡಿಯೋ ಆಗಿದೆ.

  • Well Traveled Club -ಆಧುನಿಕ ಪ್ರಯಾಣಿಕರಿಗಾಗಿ ಸದಸ್ಯತ್ವ ಕ್ಲಬ್ ರಚಿಸುತ್ತಿದೆ, ಇದರಿಂದ ಅವರು ವಿಶ್ವಾಸಾರ್ಹ ಶಿಫಾರಸುಗಳನ್ನು ಪಡೆಯಬಹುದು ಮತ್ತು ಅನನ್ಯ ಪ್ಯಾಕೇಜ್‌ಗಳನ್ನು ಆ್ಯಕ್ಸೆಸ್ ಮಾಡಬಹುದು.

Back To News