Snap Map ನಲ್ಲಿ ಪ್ರಾಯೋಜಿತ ಸ್ನ್ಯಾಪ್‌ಗಳು ಮತ್ತು ಪ್ರಚಾರ ಮಾಡಲ್ಪಟ್ಟ ಸ್ಥಳಗಳನ್ನು ಬಿಡುಗಡೆ ಮಾಡಲಾಗುತ್ತಿದೆ
ಇಂದು, ನಮ್ಮ ಬಿಡುಗಡೆಯ ಪಾಲುದಾರರ ಜೊತೆಗೂಡಿ Snapchat ನಲ್ಲಿ ಎರಡು ಹೊಸ ಜಾಹೀರಾತು ನಿಯೋಜನೆಗಳ ಪರೀಕ್ಷೆಗಳನ್ನು ಆರಂಭಿಸುತ್ತಿರುವುದರ ಕುರಿತು ಹರ್ಷಿತರಾಗಿದ್ದೇವೆ: ಯುನಿವರ್ಸಲ್ ಪಿಕ್ಚರ್ಸರೊಂದಿಗೆ ಪ್ರಾಯೋಜಿತ ಸ್ನ್ಯಾಪ್‌ಗಳು ಹಾಗೂ ಮ್ಯಾಕ್‌ಡೊನಾಲ್ಡ್ಸ್ ಮತ್ತು ಟ್ಯಾಕೋ ಬೆಲ್‌ರೊಂದಿಗೆ ಪ್ರಚಾರ ಮಾಡಲ್ಪಟ್ಟ ಸ್ಥಳಗಳು. ಈ ಹೊಸ ನಿಯೋಜನೆಗಳು Snapchat ನಲ್ಲಿ ಜನರು ಈಗಾಗಲೇ ವ್ಯವಹಾರಗಳೊಂದಿಗೆ ವ್ಯವಹರಿಸುವ ವಿಧಾನದ ಒಂದು ಸಹಜ ವಿಸ್ತರಣೆಯಾಗಿರುವವು, ಹಾಗೂ ಇವುಗಳು ನಮ್ಮ ಸೇವೆಯ ಎರಡು ಅತ್ಯಂತ ವ್ಯಾಪಕವಾದ ಮತ್ತು ಆಗಾಗ ಬಳಸಲ್ಪಡುವ ಭಾಗಗಳಾದ್ಯಂತ Snapchat ಸಮುದಾಯದೊಂದಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಜಾಹೀರಾತುದಾರರಿಗೆ ಸಹಾಯ ಮಾಡುತ್ತವೆ.
ಪೂರ್ಣ-ಪರದೆಯ ಲಂಬ ವೀಡಿಯೋ ಸ್ನ್ಯಾಪ್ ಅನ್ನು ನೇರವಾಗಿ Snapchatter ಗಳಿಗೆ ತಲುಪಿಸುವುದರೊಂದಿಗೆ ದೃಶ್ಯ ಸಂದೇಶಗಳ ಮೂಲಕ ತಮ್ಮ ಗ್ರಾಹಕರನ್ನು ತೊಡಗಿಸಿಕೊಳ್ಳಲು ಪ್ರಾಯೋಜಿತ ಸ್ನ್ಯಾಪ್‌ಗಳು ವ್ಯವಹಾರಗಳನ್ನು ಸಕ್ರಿಯಗೊಳಿಸುತ್ತವೆ. Snapchatter ಗಳು ಸ್ನ್ಯಾಪ್ ಅನ್ನು ತೆರೆಯುವ ಆಯ್ಕೆ ಮಾಡಬಹುದು ಹಾಗೂ ಜಾಹೀರಾತುದಾರರಿಗೆ ನೇರವಾಗಿ ಒಂದು ಸಂದೇಶವನ್ನು ಕಳುಹಿಸುವ ಮೂಲಕ ಅಥವಾ ಪೂರ್ವನಿರ್ಧರಿತ ಲಿಂಕ್‌ವೊಂದನ್ನು ತೆರೆಯಲು ಒದಗಿಸಲಾದ ವಿನಂತಿಯನ್ನು ಬಳಸುವ ಮೂಲಕ ಉತ್ತರಿಸಬಹುದು. ಪ್ರಾಯೋಜಿತ ಸ್ನ್ಯಾಪ್‌ಗಳು ಇನ್‌ಬಾಕ್ಸ್‌ನಲ್ಲಿನ ಇತರ ಸ್ನ್ಯಾಪ್‌ಗಳಿಗಿಂತಲೂ ದೃಷ್ಟಿಗೋಚರವಾಗಿ ಭಿನ್ನವಾಗಿರುತ್ತವೆ, ಹಾಗೂ ಪುಶ್ ಅಧಿಸೂಚನೆಯ ಮೂಲಕ ವಿತರಿಸಲ್ಪಡುವುದಿಲ್ಲ. ಪ್ರಾಯೋಜಿತ ಸ್ನ್ಯಾಪ್‌ಗಳನ್ನು ವೀಕ್ಷಿಸದೆಯೇ ಬಿಡಲಾದರೆ, ಅವುಗಳನ್ನು ಇನ್‌ಬಾಕ್ಸ್‌ನಿಂದ ತೆಗೆದುಹಾಕಲಾಗುತ್ತದೆ.
ಪ್ರಾಯೋಜಿತ ಸ್ಥಳಗಳು Snap Map ನಲ್ಲಿ ಪ್ರಾಯೋಜಿತ ಆಸಕ್ತಿಯ ಸ್ಥಳಗಳನ್ನು ಪ್ರಮುಖವಾಗಿ ಬಿಂಬಿಸುತ್ತವೆ, ಹಾಗೂ ಆ ಮೂಲಕ ನಮ್ಮ ಸಮುದಾಯದವರಿಗೆ ತಾವು ಭೇಟಿ ನೀಡಲು ಬಯಸುವ ಸ್ಥಳಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತವೆ. ನಿಮ್ಮ ಸ್ನೇಹಿತರು ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಮತ್ತು ಸಮೀಪದ ಸ್ಥಳಗಳಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಅರಿಯುವುದಕ್ಕಾಗಿ ಅನ್ವೇಷಿಸಲು ಮತ್ತು ಬ್ರೌಸ್ ಮಾಡಲು ಹಾಗೂ Snapchat ಸಮುದಾಯದವರು ಭೇಟಿ ನೀಡಲು ಒಲವು ಹೊಂದಿರುವುದರ ಆಧಾರದಲ್ಲಿ "ಅತಿ ಹೆಚ್ಚು ಆಯ್ಕೆ ಮಾಡಲಾಗುವ ಸ್ಥಳಗಳು" ಯಾವುವು ಎಂದು ತಿಳಿದುಕೊಳ್ಳುವುದಕ್ಕಾಗಿ Snap Map ಅನ್ನು ಬಳಸಲಾಗುತ್ತದೆ "ಅತಿ ಹೆಚ್ಚು ಆಯ್ಕೆ ಮಾಡಲಾಗುವ ಸ್ಥಳಗಳು" ಎಂದು ಸ್ಥಳಗಳನ್ನು ಗುರುತಿಸುವುದರಿಂದ ಹಾಗೆ ಗುರುತಿಸಲಾಗದ ಸ್ಥಳಗಳ ತುಲನೆಯಲ್ಲಿ ಆ ಸ್ಥಳಗಳಿಗೆ ಭೇಟಿ ನೀಡುವ Snapchat ನ ಪುನರಾವರ್ತಿತ ಬಳಕೆದಾರರ ಸಂಖ್ಯೆಯಲ್ಲಿ 17.6% ವರ್ಧನೆಗೆ ಚಾಲನೆ ನೀಡಿದಂತಾಗುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ, ಹಾಗೂ ವ್ಯವಹಾರಗಳು ಮೇಲಿನಂತೆ ತಮ್ಮ ಸ್ಥಳಗಳಿಗೆ ನೀಡಲ್ಪಡುವ ಭೇಟಿಗಳಲ್ಲಿ ಹೆಚ್ಚಳಕ್ಕೆ ಚಾಲನೆ ನೀಡುವುದಕ್ಕೆ ಮತ್ತು ಅದನ್ನು ಅವರು ಗ್ರಹಿಸುವುದಕ್ಕೆ ಸಹಾಯ ಮಾಡಲು ನಾವು ನಿರೀಕ್ಷಿಸುತ್ತಿದ್ದೇವೆ.
Snapchat ಸಮುದಾಯದಿಂದ ಪ್ರತಿಕ್ರಿಯೆಗಳನ್ನು ಪಡೆಯಲು ಹಾಗೂ ಪ್ರಾಯೋಜಿತ ಸ್ನ್ಯಾಪ್‌ಗಳು ಮತ್ತು ಪ್ರಚಾರ ನೀಡಲಾಗುವ ಸ್ಥಳಗಳ ವಿಕಸನವನ್ನು ಪುನರಾವರ್ತಿಸಲು ನಾವು ಎದುರು ನೋಡುತ್ತಿದ್ದೇವೆ. CRM ಸಿಸ್ಟಮ್ ಇಂಟಿಗ್ರೇಷನ್‌ಗಳು ಮತ್ತು AI ಚ್ಯಾಟ್‌ಬೊಟ್ ಬೆಂಬಲದಂತಹ ವೈಶಿಷ್ಟ್ಯಗಳು ಪ್ರಾಯೋಜಿತ ಸ್ನ್ಯಾಪ್‌ಗಳು ವ್ಯವಹಾರಗಳಿಗೆ ತಮ್ಮ ಗ್ರಾಹಕರೊಂದಿಗೆ ಚ್ಯಾಟ್ ಮಾಡುವುದನ್ನು ಸುಲಭಗೊಳಿಸುತ್ತವೆ ಎಂದು ನಾವು ನಂಬುತ್ತೇವೆ ಹಾಗೂ Snap Map ನ ವಿಷಯದಲ್ಲಿ ಗ್ರಾಹಕರ ನಿಷ್ಠೆಯ ಕುರಿತು ಹೊಸ ಪರಿಕಲ್ಪನೆಗಳನ್ನು ಅನ್ವೇಷಿಸಲು ನಾವು ಉತ್ಸುಕರಾಗಿದ್ದೇವೆ.
Happy Snapping!