ಇಂದು, ಪ್ರತಿ ತಿಂಗಳೂ ಸಹಭಾಗಿತ್ವದ ವೇದಿಕೆಯನ್ನು ಬಳಸುವ 280 ಮಿಲಿಯನ್ ಜನರಿಗಾಗಿ, Teams ಗಾಗಿ Snapchat ಲೆನ್ಸ್‌ಗಳು ಏಕೀಕರಣದ ಪ್ರಕಟಣೆ ಮಾಡಲು Microsoft ಮತ್ತು Snap ಹರ್ಷಗೊಂಡಿವೆ. ಲೆನ್ಸ್‌ಗಳು ಜೊತೆಯಾಗಿ ಭಾಗವಹಿಸಲು ಮತ್ತು ಕೆಲಸ ಮಾಡಲು ವೈಯಕ್ತಿಕ, ತೊಡಗಿಕೊಳ್ಳುವ ವಿಧಾನವನ್ನು ಒದಗಿಸುತ್ತದೆ, ಇದೇ ವೇಳೆ ವರ್ಧಿತ ವಾಸ್ತವದ ಮೂಲಕ ಪ್ರತಿಯೊಬ್ಬರ ದಿನವನ್ನು ಉಲ್ಲಾಸಗೊಳಿಸುವ ಒಂದಿಷ್ಟು ತಮಾಷೆ ಮತ್ತು ಪ್ರತಿಕ್ರಿಯಾಶೀಲತೆಯನ್ನು ಕೂಡ ಸೇರಿಸುತ್ತದೆ (AR ಸನ್‌ಗ್ಲಾಸ್‌ಗಳಿಗಾಗಿ ಸುಳಿವು!). Snap ನ AR ತಂತ್ರಜ್ಞಾನವನ್ನು ತಮ್ಮ ಸ್ವಂತ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಬಳಸಿಕೊಳ್ಳಲು ಪಾಲುದಾರರಿಗೆ ಅವಕಾಶ ಕಲ್ಪಿಸುವ Snap ನ SDK ಆದ ಕ್ಯಾಮೆರಾ ಕಿಟ್ ಮೂಲಕ ಈ ಏಕೀಕರಣ ಸಾಧ್ಯವಾಗಿದೆ.
Teams ಮೀಟಿಂಗ್ ಸಂದರ್ಭ, ಜಾಣತನದಿಂದ ಸೃಜನಶೀಲತೆಯವರೆಗೆ, 26 ಜನಪ್ರಿಯ ಲೆನ್ಸ್‌ಗಳ ಆವರ್ತನೀಯ ಸಂಗ್ರಹ ಲಭ್ಯವಿರಲಿದೆ. ಲೆನ್ಸ್‌ಗಳು ನಿಮ್ಮನ್ನು ಕಾರ್ಟೂನ್ ಪಾತ್ರವಾಗಿ ಪರಿವರ್ತಿಸುತ್ತವೆ, ನಿಮ್ಮ ವೀಡಿಯೊಗೆ ವಿನೋದಮಯ ಹಿನ್ನೆಲೆಗಳನ್ನು ಸೇರಿಸುತ್ತವೆ ಮತ್ತು ನಿಮ್ಮ ಕಚೇರಿಯಲ್ಲಿ ಹಿಮಪಾತವನ್ನೂ ಸೃಷ್ಟಿಸುತ್ತವೆ. ನಿಮ್ಮ ಮುಂದಿನ ಪ್ರಾಜೆಕ್ಟ್ ಆರಂಭದ ಸಂದರ್ಭ AR ಮೂಲಕ ಹೊಸತನಕ್ಕಾಗಿ ನಿಮ್ಮ ಮೀಟಿಂಗ್‌ಗಳನ್ನು ವಿಶಿಷ್ಟವಾಗಿಸಿ ಮತ್ತು ಎಲ್ಲರಿಂದ ಸೃಜನಶೀಲ ವಿಚಾರಗಳು ಬರಲಿ. ನಿಮ್ಮ ವ್ಯಕ್ತಿತ್ವ ಮತ್ತು ಹಾಸ್ಯಪ್ರಜ್ಞೆಗೆ ಸೂಕ್ತವಾಗುವ ಲೆನ್ಸ್ ಕಂಡುಕೊಳ್ಳಲು ಯಾವುದೇ ಹೆಚ್ಚುವರಿ ಡೌನ್‌ಲೋಡ್‌ಗಳ ಅಗತ್ಯವಿಲ್ಲ. ಆರಂಭಿಸಲು, 'ವೀಡಿಯೊ ಎಫೆಕ್ಟ್‌ಗಳು' ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಅನ್ವೇಷಣೆ ಆರಂಭಿಸಲು 'Snapchat' ಟ್ಯಾಬ್ ಆಯ್ಕೆ ಮಾಡಿ.
ಕ್ಯಾಮೆರಾ ಕಿಟ್‌ನೊಂದಿಗೆ ಇದು Microsoft ನ ಎರಡನೇ ಏಕೀಕರಣವಾಗಿದೆ. ಅವರು Microsoft ನ ವೀಡಿಯೊ ಕಲಿಕಾ ವೇದಿಕೆಯಾದ Flip ನಲ್ಲಿ Snap AR ಅನ್ನು ತರಲು ಕೂಡ ಕ್ಯಾಮೆರಾ ಕಿಟ್ ಅನ್ನು ಬಳಸಿದ್ದಾರೆ, ಇದರಲ್ಲಿ ವಿದ್ಯಾರ್ಥಿಗಳಲ್ಲಿ ವೀಡಿಯೊ ಚರ್ಚೆಯನ್ನು ಹುರಿದುಂಬಿಸಲು ಶಿಕ್ಷಕರು ವಿಷಯದ ಸುಳಿವುಗಳನ್ನು ಪೋಸ್ಟ್ ಮಾಡಬಹುದು. Flip ವೆಬ್ ಅನುಭವಕ್ಕೆ Snap AR ಸೇರಿಸಿದಂದಿನಿಂದ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವೀಡಿಯೊಗಳನ್ನು ರಚಿಸುವುದರಲ್ಲಿ 60% ಏರಿಕೆಯಾಗಿದೆ.
ಕ್ಯಾಮೆರಾ ಕಿಟ್ ಏಕೀಕರಿಸಲು ಮತ್ತು AR ಗಾಗಿ ಹೊಸ ಬಳಕೆಯ ಸನ್ನಿವೇಶಗಳನ್ನು ಅಭಿವೃದ್ಧಿಪಡಿಸಲು ಹೊಸ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ನಾವು ಮುಂದುವರಿಸಿದ್ದೇವೆ. ಆರಂಭಿಸಲು ಪಾಲುದಾರರು ಮತ್ತು ಡೆವಲಪರ್‌ಗಳು ಸಂಪರ್ಕಿಸಬಹುದು: https://ar.snap.com/camera-kit.