Snap ಗಳು, ಕಥೆಗಳು, ಸ್ಪಾಟ್‌ಲೈಟ್ ಮತ್ತು Bitmoji ಜೊತೆಗೆ ಸೃಷ್ಟಿಸಲು ಮತ್ತು ವೈಯಕ್ತಿಕಗೊಳಿಸಲು ಇನ್ನಷ್ಟು ವಿಧಾನಗಳು
800 ದಶಲಕ್ಷಕ್ಕೂ ಅಧಿಕ ಜನರಿರುವ ನಮ್ಮ ಸಮುದಾಯದ ಜನರು ತಮ್ಮ ಸ್ನೇಹಿತರೊಂದಿಗೆ ಸಂಪರ್ಕ ಹೊಂದುವುದಕ್ಕಾಗಿ, ತಮ್ಮನ್ನು ತಾವು ವ್ಯಕ್ತಿಪಡಿಸುವುದಕ್ಕಾಗಿ ಮತ್ತು ನೈಜವಾದ ವಿನೋದಮಯ ವೀಡಿಯೊಗಳನ್ನು ಸೆರೆಹಿಡಿದು ನೆನಪುಗಳನ್ನು ಉಳಿಸಿಕೊಳ್ಳುವುದಕ್ಕಾಗಿ Snapchat ಅನ್ನು ಬಳಸಲು ಇಷ್ಟಪಡುತ್ತಾರೆ.
ಈಗ, Snap ಗಳು, ಕಥೆಗಳು ಮತ್ತು ಸ್ಪಾಟ್‌ಲೈಟ್‌ಗಳೊಂದಿಗೆ ಸೃಜನಶೀಲರಾಗಲು ಹಾಗೂ ಆ ಮೂಲಕ ನಿಮ್ಮ ಆತ್ಮೀಯ (ಮತ್ತು ತುಪ್ಪುಳುಳ್ಳ!) ಸ್ನೇಹಿತರು ಯಾವಾಗಲೂ ಮುನ್ನೆಲೆಯಲ್ಲಿ ಇರುವ ರೀತಿಯಲ್ಲಿ ನಿಮ್ಮ ಆ್ಯಪ್ ಅನ್ನು ವೈಯಕ್ತೀಕರಿಸಲು ಇನ್ನಷ್ಟು ವಿಧಾನಗಳನ್ನು ಒದಗಿಸುವುದಕ್ಕಾಗಿ ನಾವು ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಿದ್ದೇವೆ. ಸ್ನೇಹಿತರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.
ಟೆಂಪ್ಲೇಟ್‌ಗಳ ವೈಶಿಷ್ಟ್ಯದೊಂದಿಗೆ, ಉನ್ನತ-ಗುಣಮಟ್ಟದ ವೀಡಿಯೊಗಳು ಮತ್ತು Snap ಗಳನ್ನು ಸಿದ್ಧಪಡಿಸುವುದು ಈಗ ಹಿಂದೆಂದಿಗಿಂತಲೂ ಸುಲಭವಾಗಿದೆ. ನೆನಪುಗಳು ಗೆ ಹೋಗಿ ಅಥವಾ ನಿಮ್ಮ ಕ್ಯಾಮರಾದ ರೋಲ್ ಅನ್ನು ಪ್ರವೇಶಿಸಿ, ಒಂದು ಹಾಡನ್ನು ಸೇರಿಸಿ, ಅಷ್ಟೇ! ಕೆಲವೇ ಟ್ಯಾಪ್‌ಗಳಲ್ಲಿ, ಸ್ನೇಹಿತರು, ಕುಟುಂಬದವರು ಮತ್ತು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನೀವು ಪರಿಪೂರ್ಣ ಕ್ಲಿಪ್ ಅನ್ನು ಹೊಂದಿರುತ್ತೀರಿ.

ಯಾರೂ ಕೂಡ ಅಡಚಣೆಗಳನ್ನು ಅನುಭವಿಸಲು ಇಷ್ಟಪಡುವುದಿಲ್ಲ. ನಿಮಗೆ ಕೇವಲ ಒಂದೇ Snap ನಲ್ಲಿ ಎಲ್ಲವನ್ನೂ ಹೊಂದಿಸಲು ಸಾಧ್ಯವಾಗದಿದ್ದರೆ ಚಿಂತೆಯಿಲ್ಲ – ಈಗ ನೀವು (ಮೂರು ನಿಮಿಷಗಳವರೆಗಿನ) ದೀರ್ಘ ವೀಡಿಯೊಗಳನ್ನು ಸೃಷ್ಟಿಸಬಹುದು ಹಾಗೂ ಚ್ಯಾಟ್‌ಗಳು, ಕಥೆಗಳು ಮತ್ತು ಸ್ಪಾಟ್‌ಲೈಟ್‌ಗಳಿಗಾಗಿ (ಐದು ನಿಮಿಷಗಳವರೆಗಿನ) ದೀರ್ಘ ವೀಡಿಯೊಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ.

ಅತಿ ಶೀಘ್ರದಲ್ಲಿಯೇ, ನೀವು ಏನನ್ನೇ ಸೃಷ್ಟಿಸಲು ಬಯಸಿರಲಿ, ತತ್‌ಕ್ಷಣವೇ ತ್ವರಿತವಾದ ಮತ್ತು ವಿಲಕ್ಷಣವಾದ Snap ಗಳನ್ನು ಸೆರೆಹಿಡಿಯುವುದಕ್ಕಾಗಿ ಅಥವಾ ಕೇವಲ ಒಂದು ಸ್ವೈಪ್‌ನೊಂದಿಗೆ ಸಂಪಾದನಾ ಸಾಧನಗಳನ್ನು ಬಳಸಿಕೊಂಡು ಇನ್ನಷ್ಟು ಸುಧಾರಿತ ವಿಷಯಗಳನ್ನು ಸೆರೆಹಿಡಿಯುವುದಕ್ಕಾಗಿ ನಮ್ಮ ಕ್ಯಾಮರಾವನ್ನು ಹೊರಳಿಸುವುದು ಸುಲಭವಾಗಲಿದೆ
ಲೆನ್ಸ್‌ಗಳು ದೀರ್ಘ ಸಮಯದಿಂದ ನಮ್ಮ ಪ್ರತಿದಿನದ ಕ್ಯಾಮರಾ ಅನುಭವದ ಭಾಗವಾಗಿವೆ ಹಾಗೂ ಹೊಸ AI ಲೆನ್ಸ್‌ಗಳು ಮಿತಿರಹಿತ ಸಾಧ್ಯತೆಗಳನ್ನು ಪರಿಚಯಿಸುತ್ತಿವೆ. ಕೇವಲ ಒಂದು ಟ್ಯಾಪ್‌ನೊಂದಿಗೆ ನಿಮಗೆ ಸಂಭ್ರಮದ ವಿಷಯವಸ್ತುಗಳ ರಚನೆಗಾಗಿ ಅವಕಾಶ ಕಲ್ಪಿಸುವ ಹೊಸ ಸುಧಾರಿತ AI-ಸಂಚಾಲಿತ ಲೆನ್ಸ್ ಅನ್ನು ನಾವು ಸೇರಿಸಿದ್ದೇವೆ ಹಾಗೂ ಶೀಘ್ರದಲ್ಲೇ ಬರಲಿರುವ ಇನ್ನಷ್ಟು ವಿಷಯವಸ್ತುಗಳು ಮತ್ತು ಶೈಲಿಗಳ ಬಿಡುಗಡೆಗಳಿಗಾಗಿ ನಿರೀಕ್ಷಿಸಿ!

ಹಾಗೂ, Snapchat+ ಗಾಗಿ:
ಈಗ ಫ್ರೆಂಡ್‌ಶಿಪ್ ಪ್ರೊಫೈಲ್‌ಗಳಲ್ಲಿ ನಿಮ್ಮ ಆತ್ಮೀಯ ಸ್ನೇಹಿತರ Bitmoji ಗಳ ಪಕ್ಕದಲ್ಲಿ ನಿಮ್ಮ ಅವತಾರದ ಭಂಗಿಯನ್ನು ಇರಿಸಬಹುದಾಗಿದ್ದು, ನೀವು ಅದನ್ನು ಆ್ಯಪ್‌ನಾದ್ಯಂತ ಹಂಚಿಕೊಳ್ಳಬಹುದಾಗಿದೆ.

ನಿಮ್ಮ ನೈಜ ಬದುಕಿನ ತುಪ್ಪುಳುಳ್ಳ ಸ್ನೇಹಿತರನ್ನು “Bitmojify” ಮಾಡಿ... Snap ಮ್ಯಾಪ್‌ನ ಮೂಲಕ ನಿಮ್ಮ ಸಾಕು ಪ್ರಾಣಿಯ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ, ಹಾಗೂ ನಮ್ಮ AI ಸಾಧನವು ಮ್ಯಾಪ್‌ನಲ್ಲಿ ನಿಮ್ಮ ಪಕ್ಕದಲ್ಲಿ ಉಳಿಯುವ ವಿಶಿಷ್ಟ ಅವತಾರವನ್ನು ಸ್ವಯಂಚಾಲಿತವಾಗಿ ಸೃಷ್ಟಿಸುವುದು.

ಹ್ಯಾಪಿ ಸ್ನ್ಯಾಪಿಂಗ್!