ಹೊಸ ವೈಶಿಷ್ಟ್ಯಗಳು ನಿಮ್ಮ Snapchat ಅಕೌಂಟ್ ಅನ್ನು ವಿಶಿಷ್ಟವಾಗಿ ನಿಮ್ಮದೆನಿಸುವಂತೆ ಮಾಡುತ್ತದೆ
ಈಗಾಗಲೇ 9 ಮಿಲಿಯನ್‌ಗಿಂತಲೂ ಹೆಚ್ಚು ಸ್ನ್ಯಾಪ್‌ಚಾಟರ್‌ಗಳು Snapchat+ ಗೆ ಚಂದಾದಾರರಾಗಿದ್ದಾರೆ, ಇದು ನಿಮ್ಮ ಸ್ನೇಹಿತರೊಂದಿಗೆ ಇನ್ನಷ್ಟು ನಿಕಟವಾಗಿ ಸಂಪರ್ಕ ಸಾಧಿಸಲು, ನಿಮ್ಮ ಅಪ್ಲಿಕೇಶನ್ ಅನ್ನು ಕಸ್ಟಮೈಸ್ ಮಾಡಲು ಮತ್ತು ನಮ್ಮ ಅತ್ಯಂತ ತಾಂತ್ರಿಕವಾಗಿ ಸುಧಾರಿತ ವೈಶಿಷ್ಟ್ಯಗಳನ್ನು ಪ್ರಯತ್ನಿಸಲು ಸಹಾಯ ಮಾಡುವ ವಿಶೇಷ ಮತ್ತು ಬಿಡುಗಡೆಯ ಪೂರ್ವ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ಒದಗಿಸುವ ನಮ್ಮ ಚಂದಾದಾರಿಕೆ ಸೇವೆಯಾಗಿದೆ.
ಸದಸ್ಯರುಗಳು ತಮ್ಮ ಖಾತೆಗಳನ್ನು ಇನ್ನಷ್ಟು ವೈಯಕ್ತೀಕರಿಸಲು ಸಹಾಯ ಮಾಡುವ ಹೊಸ ವೈಶಿಷ್ಟ್ಯಗಳನ್ನು ಇಂದು ನಾವು ಪರಿಚಯಿಸುತ್ತಿದ್ದೇವೆ. ಈಗ ಲಭ್ಯವಿರುವ ಹೊಸ ಹೊಸ ವೈಶಿಷ್ಟ್ಯಗಳು ಮತ್ತು ಶೀಘ್ರವಾಗಿ ಬರುತ್ತಿರುವ ಕೆಲವು ಅಂಶಗಳು ಹೀಗಿವೆ:
Snap ಮ್ಯಾಪ್‌ನಲ್ಲಿ ನೀವು ಮತ್ತು ಸ್ನೇಹಿತರಿಗೆ ಗೋಚರಿಸುವಂತಹ ಒಂದು ವೈಯಕ್ತಿಕವಾದ ಮನೆಯನ್ನು ವಿನ್ಯಾಸಗೊಳಿಸಿ Snap Mapನಲ್ಲಿ ನಿಮ್ಮ ಸ್ಥಳವನ್ನು ನೀವು ಹಂಚಿಕೊಳ್ಳಿ. ನೀವು ವಾಸ್ತವಿಕ ನೋಟ ಅಥವಾ ವಿಚಿತ್ರ ಕ್ಯಾಂಡಿ ಕೋಟೆಯ ರೀತಿಯಲ್ಲಿ ಅದನ್ನು ತೋರಿಸಲು ಬಯಸುತ್ತೀರ ಎಂಬುದನ್ನು ನಿರ್ಧರಿಸಿದರೆ ನಿಮಗೆ ಸಾಕಷ್ಟು ಲೆಕ್ಕವಿಲ್ಲದಷ್ಟ ವಿಧಾನಗಳಿವೆ.

ನಿಮ್ಮ ಪ್ರೀತಿಯ ಸಾಕು ಪ್ರಾಣಿಯನ್ನು ಕೇವಲ Snap ಮ್ಯಾಪ್‌ನಲ್ಲಿ ಮಾತ್ರವಲ್ಲ, ನಿಮ್ಮ ಚಾಟ್ನಲ್ಲಿ ಕೂಡ ಇರಿಸಿಕೊಳ್ಳಿ! ಈಗ ನಿಮ್ಮ ಸ್ನೇಹಿತರ ಜೊತೆ ನೀವು ಸಂಭಾಷಣೆಯಲ್ಲಿ ಇರುವಾಗ ನಿಮ್ಮ ಇಚ್ಛೆಯ ಸಾಕುಪ್ರಾಣಿಯು ನಿಮ್ಮ ಬಿಟ್ಮೋಜೀಯ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತದೆ.

ಮಿಂಚಿನ ಕ್ಷಿಪ್ರ ಸ್ನ್ಯಾಪ್‌ಗಳನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಿ ಅಥವಾ .10, .25, ಮತ್ತು .50 ಸೆಕೆಂಡ್‌ಗಳ ಅವಧಿಯ ಹೊಸ ಮುಕ್ತಾಯ ಆಯ್ಕೆಗಳೊಂದಿಗೆ ನಿಮ್ಮ ಕಥೆಗೆ ಪೋಸ್ಟ್ ಮಾಡಿ!

ನಮ್ಮ ಚಂದಾದಾರರ ಸಮುದಾಯಕ್ಕಾಗಿ ನಾವು ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದ್ದೇವೆ. ನಮ್ಮ ಬೆಂಬಲ ಸೈಟ್‌ನಲ್ಲಿ ಏನು ಲಭ್ಯವಿದೆ ಎಂಬುದರ ಕುರಿತು ನವೀಕೃತವಾಗಿರಿ.
ನಮ್ಮ ಇಡೀ ಸಮುದಾಯಕ್ಕೂ ಕೂಡ ಹೊಸ ವೈಶಿಷ್ಟ್ಯಗಳನ್ನು ಹೊಂದಿದ್ದೇವೆ! ಎಲ್ಲಾ ಸ್ನ್ಯಾಪ್‌ಚಾಟರ್‌ಗಳಿಗಾಗಿ:
ನಿಮ್ಮಂತೆ ಕಾಣುವ ವೈಶಿಷ್ಟ್ಯಗಳನ್ನು ಆಯ್ಕೆ ಮಾಡಲು ಸಹಾಯ ಮಾಡಲು ನಮ್ಮ Bitmoji ಬಿಲ್ಡರ್‌ನಲ್ಲಿ ಹೊಸ ಲೈವ್ "ಮಿರರ್" ನೊಂದಿಗೆ ನಿಮ್ಮನ್ನು ಪರೀಕ್ಷಿಸಿಕೊಳ್ಳಿ!

"ನನ್ನ 5-ವರ್ಷದ ಹಿಂದಿನ ಸೆಲ್ಫ್" ನಂತಹ ನಮ್ಮ ಇತ್ತೀಚಿನ AI-ಚಾಲಿತ ಲೆನ್ಸ್‌ಗಳನ್ನು ಪರೀಕ್ಷಿಸಲು ಮರೆಯದಿರಿ, ಅದು ನಿಮ್ಮನ್ನು ಸಮಯಕ್ಕೆ ಹಿಂತಿರುಗಿಸುತ್ತದೆ!
