ಇಂದು, ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಮುನ್ನ, ನಾವು ಹೆಡ್ ಸ್ಪೇಸ್ ಜೊತೆಗೂಡಿ ನಮ್ಮ ಹೆಡ್ ಸ್ಪೇಸ್ ಮಿನಿಯೊಂದಿಗೆ ಎರಡು ಹೊಸ ಇನ್-ಆ್ಯಪ್ ಧ್ಯಾನಗಳನ್ನು ಬಿಡುಗಡೆ ಮಾಡುತ್ತಿದ್ದೇವೆ - ಸ್ನೇಹಿತರು ಧ್ಯಾನಗಳು ಮತ್ತು ಸಾವಧಾನತೆ ವ್ಯಾಯಾಮಗಳನ್ನು ಅಭ್ಯಾಸ ಮಾಡಬಹುದಾದ ಮತ್ತು Snapchat ಮೂಲಕ ಪರಸ್ಪರ ಪರಿಶೀಲಿಸಬಹುದಾದ ಸುರಕ್ಷಿತ ಸ್ಥಳ.
ಆತಂಕ, ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಸವಾಲುಗಳೊಂದಿಗೆ ಹೋರಾಡುತ್ತಿರುವ Snapchatterಗಳನ್ನು ಉತ್ತಮವಾಗಿ ಬೆಂಬಲಿಸಲು ನಾವು ಹೆಡ್‌ಸ್ಪೇಸ್ ಮಿನಿ ಅನ್ನು ಅಭಿವೃದ್ಧಿಪಡಿಸಿದ್ದೇವೆ, ನಮ್ಮ ಸಮುದಾಯವು ಈ ಸಮಸ್ಯೆಗಳನ್ನು ಹೇಗೆ ಅನುಭವಿಸುತ್ತದೆ ಎಂಬುದರ ಕುರಿತು ಕಳೆದ ವರ್ಷ ನಡೆಸಿದ ಸಂಶೋಧನೆಯಿಂದ ತಿಳಿಸಲಾಗಿದೆ. ಬಹುಪಾಲು Snapchatters ಗಳು ಒತ್ತಡ ಮತ್ತು ಆತಂಕದ ಭಾವನೆಗಳನ್ನು ಅನುಭವಿಸುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ ಮತ್ತು ವೃತ್ತಿಪರರು ಅಥವಾ ಅವರ ಹೆತ್ತವರಿಗಿಂತ ಹೆಚ್ಚಾಗಿ ಸಹಾಯದ ಅಗತ್ಯವಿರುವಾಗ ಅವರ ಸ್ನೇಹಿತರೆಡೆಗೆ ತಿರುಗುತ್ತಾರೆ. ನಾವು ಅವರಿಗೆ, ಅವರು ಈಗಾಗಲೇ ದಿನದಲ್ಲಿ ಹಲವಾರು ಬಾರಿ ಸಂವಹನ ನಡೆಸುತ್ತಿರುವ ಅದೇ ಸ್ಥಳದಲ್ಲಿಯೇ ತಮ್ಮ ಸ್ನೇಹಿತರೊಂದಿಗೆ ನೇರವಾಗಿ ಬಳಸಬಹುದಾದ ಹೊಸ ಮುನ್ನೆಚ್ಚರಿಕಾ ಯೋಗಕ್ಷೇಮ ಟೂಲ್‌ಗಳನ್ನು ನೀಡಲು ಬಯಸುತ್ತೇವೆ.
ಈಗ, COVID-19 ಸಾಂಕ್ರಾಮಿಕದೊಂದಿಗಿನ ಹಲವಾರು ತಿಂಗಳುಗಳಲ್ಲಿ, ಮತ್ತು Snapchatters ಶಾಲಾ ವರ್ಷವನ್ನು ವರ್ಚುವಲ್ ಆಗಿ ನ್ಯಾವಿಗೇಟ್ ಮಾಡಲು ಪ್ರಾರಂಭಿಸಿರುವುದರಿಂದ ಅಥವಾ ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರೆಸಿರುವುದರಿಂದ, ಬಿಕ್ಕಟ್ಟು ಅವರ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎಂಬುದರ ಬಗ್ಗೆ ಉತ್ತಮವಾಗಿ ತಿಳಿದುಕೊಳ್ಳಲು ಬಯಸುತ್ತೇವೆ.
US, UK ಮತ್ತು ಫ್ರಾನ್ಸ್‌ನಾದ್ಯಂತ ಯುವಜನರು ಒತ್ತಡ ಮತ್ತು ಅನಿಶ್ಚಿತತೆಯನ್ನು ಹೇಗೆ ಅನುಭವಿಸುತ್ತಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ನಾವು GroupSolver ರವರ ಮೂಲಕ ಒಂದು ಸಮೀಕ್ಷೆಯನ್ನು ನಿಯೋಜಿಸಿದ್ದೆವು. ಆ ಪ್ರತಿಯೊಂದೂ ಮಾರ್ಕೆಟ್‍ನಲ್ಲಿ, COVID-19 ಪ್ರಾಥಮಿಕ ಚಾಲಕವಾಗಿರುವುದರೊಂದಿಗೆ, ಬಹುತೇಕ Snapchatter ಗಳು ಹೆಚ್ಚು ಒತ್ತಡವನ್ನು ಅನುಭವಿಸುತ್ತಿದ್ದಾರೆ ಎಂದು ಫಲಿತಾಂಶಗಳು ತೋರಿಸಿವೆ.
Snapchatter ಗಳು ಕಳೆದ ವರ್ಷ ಹೆಚ್ಚು ಒತ್ತಡವನ್ನು ಅನುಭವಿಸಿದ್ದಾರೆ ಹಾಗೂ ಆಗಾಗ್ಗೆ ಹೆಚ್ಚು ಒತ್ತಡವನ್ನು ಅನುಭವಿಸುತ್ತಿದ್ದಾರೆ - ಕಳೆದ ವಾರ US ನಲ್ಲಿ 73%, UK ಯಲ್ಲಿ 60% ಹಾಗೂ ಫ್ರಾನ್ಸ್ ನಲ್ಲಿ 60% ರಷ್ಟು Snapchatter ಗಳು ಒತ್ತಡವನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ.
COVID-19 ಒತ್ತಡಕ್ಕೆ ಒಂದು ಪ್ರಮುಖ ಕಾರಣವಾಗಿದೆ (US ನಲ್ಲಿ 85%, UK ಯಲ್ಲಿ 87% ಮತ್ತು ಫ್ರಾನ್ಸ್ ನಲ್ಲಿ 80% Snapchatter ಗಳೊಂದಿಗೆ) ನಂತರ ಆರ್ಥಿಕತೆ (US ನಲ್ಲಿ 81%, UK ಯಲ್ಲಿ 77% ಮತ್ತು ಫ್ರಾನ್ಸ್ ನಲ್ಲಿ 76%) ಮತ್ತು ಕೆಲಸ/ವೃತ್ತಿ ಒತ್ತಡಗಳು (US ನಲ್ಲಿ 80%, UK ಮತ್ತು ಫ್ರಾನ್ಸ್ ನಲ್ಲಿ 77%). US Snapchatter ಗಳಿಗೆ ಚುನಾವಣೆ/ರಾಜಕೀಯಗಳೂ ಸಹಾ ಒತ್ತಡದ ಗಮನಾರ್ಹ ಮೂಲಗಳಾಗಿವೆ - ಒತ್ತಡ ಮಟ್ಟಗಳಿಗೆ 60% ರಷ್ಟು ಕೊಡುಗೆ ನೀಡುತ್ತಿರುವುದು ಕಂಡುಬಂದಿದೆ.
COVID-19 ಅಡೆತಡೆಗಳು ಪ್ರಮುಖ ಕಳವಳವಾಗಿರುವ ಕಾರಣದಿಂದಾಗಿ ತಮ್ಮ ಸ್ನೇಹಿತರನ್ನು ಭೇಟಿಮಾಡದೆ ಮತ್ತು ತಮ್ಮ ಶಿಕ್ಷಣದಲ್ಲಿ ಹಿಂದುಳಿಯುವ ಮೂಲಕ, US ನಲ್ಲಿ ಜನರೇಷನ್ Z Snapchatter (13-24) ಗಳಿಗೆ, ಶಾಲೆಯು ಒತ್ತಡದ ಪ್ರಮುಖ ಮೂಲವಾಗಿದೆ (13-24 ರವರಿಗೆ 75% ಮತ್ತು 13-17 ರವರಿಗೆ 91%),
US Snapchatter ಗಳು ಈ ಒತ್ತಡವನ್ನು ತಮ್ಮ ಭಾವನಾತ್ಮಕ ಹಾಗೂ ದೈಹಿಕ ಸ್ವಾಸ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಈ ರೀತಿ ವರದಿ ಮಾಡುತ್ತಾರೆ - 60% ರಷ್ಟು ಮಂದಿ ಆತಂಕದ ಭಾವನೆಯನ್ನು, 60% ರಷ್ಟು ಮಂದಿ ಆಯಾಸದ ಭಾವನೆಯನ್ನು ಹಾಗೂ 59% ರಷ್ಟು ಮಂದಿ ಹತಾಶೆಯನ ಭಾವನೆಯನ್ನು ವರದಿ ಮಾಡಿದ್ದಾರೆ. ಸರಿಸುಮಾರು 50% ರಷ್ಟು ಮಂದಿ ಚಡಪಡಿಕೆಯನ್ನು ಮತ್ತು 43% ರಷ್ಟು ಮಂದಿ ಹೆಚ್ಚಿನ ತಲೆನೋವನ್ನು ವರದಿ ಮಾಡಿದ್ದಾರೆ.
US ನಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು Snapchatter ಗಳು ಮತ್ತು UK ಹಾಗೂ ಫ್ರಾನ್ಸ್‌ನ ಐದನೇ ಒಂದು ಭಾಗದಷ್ಟು ಬಳಕೆದಾರರು ಒತ್ತಡವನ್ನು ನಿಭಾಯಿಸಲು ಧ್ಯಾನವನ್ನು ಬಳಸುತ್ತಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು, ಕೆಳಗಿನವುಗಳನ್ನೂ ಒಳಗೊಂಡಂತೆ ಈ ಕೆಲವು ಸಮಸ್ಯೆಗಳನ್ನು ನೇರವಾಗಿ ಪರಿಹರಿಸಲು ನಾವು ಹೊಸ ಹೆಡ್ ಸ್ಪೇಸ್ ಮಾರ್ಗದರ್ಶಿತ ಧ್ಯಾನಗಳನ್ನು ಹೊರತರುತ್ತಿದ್ದೇವೆ:
"ಕರುಣೆಯನ್ನು ಆರಿಸಿ" - ಕರುಣೆಯನ್ನು ಅಭ್ಯಾಸ ಮಾಡುವುದರ ಮೇಲೆ ಕೇಂದ್ರೀಕರಿಸಿದ ಮಿನಿ ಧ್ಯಾನ, ಇದು ನಾವು ಜಗತ್ತಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತೇವೆ ಮತ್ತು ಇತರರೊಂದಿಗೆ ನಾವು ಹೇಗೆ ವರ್ತಿಸುತ್ತೇವೆ ಎಂಬುದನ್ನು ಬದಲಾಯಿಸಬಹುದು. ಅವ್ಯವಸ್ಥೆ, ಗೊಂದಲ ಮತ್ತು ಸಂಘರ್ಷದ ಮಧ್ಯೆ, ನಮ್ಮ ಮನಃಸ್ಥಿತಿಯನ್ನು ಬದಲಾಯಿಸಲು ಮತ್ತು ಸಹಾನುಭೂತಿಯ ಸ್ಥಳಕ್ಕೆ ಹೋಗಲು ಈ ಧ್ಯಾನವನ್ನು ವಿನ್ಯಾಸಗೊಳಿಸಲಾಗಿದೆ.
"ಶಾಲಾ ವರ್ಷವನ್ನು ತೆಗೆದುಕೊಳ್ಳುವುದು" - ಶಾಲೆಯಲ್ಲಿನ ಅನಿಶ್ಚಿತತೆಯನ್ನು ನ್ಯಾವಿಗೇಟ್ ಮಾಡಲು ಕೇಂದ್ರೀಕರಿಸಿದ ಮಿನಿ ಧ್ಯಾನ. ವಿದ್ಯಾರ್ಥಿಗಳು ತರಗತಿಗೆ ಮರಳಿ ಬಂದಿದ್ದರೂ ಅಥವಾ ಇನ್ನೂ ಮನೆಯಲ್ಲಿಯೇ ಇದ್ದರೂ,ಚಿಂತೆ,ಆತಂಕ ಅಥವಾ ಸ್ನೇಹಿತರಿಂದ ಸಂಪರ್ಕ ಕಡಿತಗೊಳ್ಳುವ ಭಾವನೆಗಳು ಇರಬಹುದು. ನಿಮ್ಮ ಉಸಿರಾಟದೊಂದಿಗೆ ಸಂಪರ್ಕ ಹೊಂದಲು ಮತ್ತು ಅನಿಶ್ಚಿತತೆಯನ್ನು ಹೋಗಲಾಡಿಸಲು ವಿಶ್ರಾಂತ ಸ್ಥಳವನ್ನು ಹುಡುಕಲು ನಿಮಗೆ ಸಹಾಯ ಮಾಡುವುದಕ್ಕೆ ಈ ಧ್ಯಾನವನ್ನು ವಿನ್ಯಾಸಗೊಳಿಸಲಾಗಿದೆ.
ನಮ್ಮ ಸಮುದಾಯದ ಆರೋಗ್ಯ ಮತ್ತು ಸಂತೋಷವನ್ನು ಬೆಂಬಲಿಸುವಲ್ಲಿ Snapchat ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ನಂಬುತ್ತೇವೆ. ಹಿಯರ್ ಫಾರ್ ಯುನಂತಹ ನಮ್ಮ ಮಾನಸಿಕ ಆರೋಗ್ಯ ಸಂಪನ್ಮೂಲಗಳ ಜೊತೆಗೆ, ಈ ಪ್ರಯತ್ನಗಳನ್ನು ನಿರ್ಮಿಸಲು ಹಾಗೂ ಬೆಂಬಲವನ್ನು ಪಡೆಯಲು ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು Snapchatter ಗಳನ್ನು ಸಶಕ್ತಗೊಳಿಸಲು ನಾವು ಎದುರು ನೋಡುತ್ತೇವೆ.