ಹೊಸ ವರ್ಷ, Snap ಮಾಡಲು ಹೊಸ ಮಾರ್ಗಗಳು
ಹೊಸ ವರ್ಷವನ್ನು ಆರಂಭಿಸಲು, ನಿಮ್ಮ ನಿಜವಾದ ಸ್ನೇಹಿತರೊಂದಿಗೆ ಚಾಟ್ ಮಾಡುವುದನ್ನು ಇನ್ನಷ್ಟು ಮೋಜು ಮತ್ತು ಅಭಿವ್ಯಕ್ತಗೊಳಿಸಲು ನಾವು Snapchat ಮೆಸೇಜಿಂಗ್‌ಗೆ ಹೊಸ ಫೀಚರ್‌ಗಳನ್ನು ಸೇರಿಸಿದ್ದೇವೆ.

ಹೊಸ ವರ್ಷವನ್ನು ಆರಂಭಿಸಲು, ನಿಮ್ಮ ನೈಜ ಸ್ನೇಹಿತರೊಂದಿಗೆ ಚಾಟ್ ಮಾಡುವುದನ್ನು ಇನ್ನಷ್ಟು ವಿನೋದಮಯ ಮತ್ತು ಅಭಿವ್ಯಕ್ತಿಯದ್ದನ್ನಾಗಿಸುವ ಹೊಸ ವೈಶಿಷ್ಟ್ಯಗಳ ಸರಣಿಯನ್ನು ನಾವು Snapchat ಮೆಸೇಜಿಂಗ್‌ಗೆ ಸೇರಿಸಿದ್ದೇವೆ.
ಮುಂದಿನ ದಿನಗಳಲ್ಲಿ ಅವು ಲಭ್ಯವಾಗಲಿವೆ, ಇದರಿಂದಾಗಿ ನೀವು Android ಮತ್ತು iOS ನಾದ್ಯಂತ ಇವುಗಳೊಂದಿಗೆ ಪ್ರತ್ಯುತ್ತರಿಸಲು, ಪ್ರತಿಕ್ರಿಯಿಸಲು ಅಥವಾ ಸ್ನೇಹಿತರ ಸಮೀಕ್ಷೆ ಮಾಡಲು ಕೂಡ ಸಾಧ್ಯವಾಗುತ್ತದೆ:
ಚಾಟ್ ಪ್ರತ್ಯುತ್ತರ - ಗುಂಪು ಚಾಟ್ ಅತಿಯಾಗುತ್ತಿದೆಯೇ? ಸಂಭಾಷಣೆಗಳನ್ನು ಹಳಿತಪ್ಪದಂತೆ ಇರಿಸಲು ಮತ್ತು ಸನ್ನಿವೇಶದೊಂದಿಗೆ ಸಂಭಾಷಣೆ ನಡೆಸಲು ನಿಮಗೆ ಅನುಕೂಲ ಕಲ್ಪಿಸಿಕೊಳ್ಳುವುದಕ್ಕಾಗಿ ನಡೆಯುತ್ತಿರುವ ಚಾಟ್‌ನಲ್ಲಿ ನೀವು ಚಾಟ್ ಪ್ರತ್ಯುತ್ತರಗಳೊಂದಿಗೆ ವೈಯಕ್ತಿಕ ಸಂದೇಶಗಳಿಗೆ ಪ್ರತಿಕ್ರಿಯಿಸಬಹುದು. ಒಂದು ಥ್ರೆಡ್ ಆರಂಭಿಸಲು, ಚಾಟ್‌ನಲ್ಲಿ ಒಂದು ಸಂದೇಶವನ್ನು ಹಿಡಿದುಕೊಳ್ಳಿ ಮತ್ತು ಪ್ರತ್ಯುತ್ತರವನ್ನು ಟ್ಯಾಪ್ ಮಾಡಿ.
Bitmoji ಪ್ರತಿಕ್ರಿಯೆಗಳು - Bitmoji ಪ್ರತಿಕ್ರಿಯೆಗಳೊಂದಿಗೆ, ಚಾಟ್‌ನಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಹಿಂದೆಂದಿಗಿಂತಲೂ ಸುಲಭ. ಆಯ್ಕೆ ಮಾಡಲು ಒಟ್ಟು ಏಳು Bitmoji ಭಾವನೆಗಳಿವೆ, ಆದ್ದರಿಂದ ಯಾವುದೇ ಸಂದೇಶಕ್ಕೆ ತ್ವರಿತ ಮತ್ತು ಸುಲಭವಾಗಿ ಪ್ರತಿಕ್ರಿಯಿಸುವ ವಿಧಾನ ನಿಮ್ಮ ಬಳಿ ಇರುತ್ತದೆ.
ಪೋಲ್ ಸ್ಟಿಕ್ಕರ್‌ಗಳು - ಈಗ, ನೀವು ಸ್ನೇಹಿತರ ವಿಚಾರಗಳ ಸಮೀಕ್ಷೆ ನಡೆಸಲು Snap ಗಳು ಮತ್ತು ಕಥೆಗಳಿಗೆ ಇಮೋಜಿ-ಸಂಚಾಲಿತ ಪೋಲ್‌ಗಳನ್ನು ಸೇರಿಸಬಹುದು. ನಮ್ಮ ವಿಷುವಲ್ ಪೋಲ್‌ಗಳು iOS ಮತ್ತು Android ನಾದ್ಯಂತ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ನಿಮ್ಮ ಎಲ್ಲ ಸ್ನೇಹಿತರು ಭಾಗವಹಿಸಬಹುದು ಮತ್ತು ಅವರ ವಿಚಾರಗಳನ್ನು ವ್ಯಕ್ತಪಡಿಸಬಹುದು. ಜೊತೆಗೆ, ಪಾರದರ್ಶಕತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪೋಲ್‌ಗಳನ್ನು ವಿನ್ಯಾಸಗೊಳಿಸಲಾಗಿದೆ–ಪ್ರತಿಕ್ರಿಯೆಗಳು ವಿಚಾರಶೀಲ ಮತ್ತು ವಿನಯದಿಂದ ಕೂಡಿರುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಸ್ನೇಹಿತರು ಹೇಗೆ ವೋಟ್ ಮಾಡಿದ್ದಾರೆ ಎನ್ನುವುದನ್ನು ನೀವು ನೋಡಬಹುದು. ಒಂದು ಪೋಲ್ ಸೃಷ್ಟಿಸಲು, ಸ್ಟಿಕ್ಕರ್ ಫೋಲ್ಡರ್‌ನಲ್ಲಿ ಹೊಸ ಆಯ್ಕೆಯನ್ನು ಪರಿಶೀಲಿಸಿ.
ಸುಧಾರಿತ ಕರೆ ಮಾಡುವಿಕೆ - ಲೈವ್ ಸಂಭಾಷಣೆಗಳನ್ನು ಇನ್ನಷ್ಟು ವಿನೋದಮಯವಾಗಿಸುವುದಕ್ಕಾಗಿ ನಾವು ನಮ್ಮ ವೀಡಿಯೊ ಮತ್ತು ಆಡಿಯೋ ಕರೆ ಮಾಡುವಿಕೆ ಇಂಟರ್‌ಫೇಸ್ ಅನ್ನು ಮರುವಿನ್ಯಾಸಗೊಳಿಸಿದ್ದೇವೆ. ಈಗ, ಲೆನ್ಸ್‌ಗಳನ್ನು ಸೇರಿಸುವುದು ಮತ್ತು ನೀವು ಸೇರುವುದಕ್ಕೆ ಮುನ್ನ ಗುಂಪು ಕರೆಗೆ ಯಾರು ಉತ್ತರಿಸಿದ್ದಾರೆ ಎನ್ನುವುದರ ಮುನ್ನೋಟ ಮಾಡುವುದು ಹಿಂದೆಂದಿಗಿಂತಲೂ ಹೆಚ್ಚು ಸುಲಭ. ಜೊತೆಗೆ, ಆಯ್ಕೆ ಮಾಡಲು ಮಿಲಿಯನ್‌ಗಟ್ಟಲೆ ವೀಡಿಯೊ ಕರೆಮಾಡುವಿಕೆಗೆ ಹೊಂದಾಣಿಕೆಯಾಗುವ ಲೆನ್ಸ್‌ಗಳು ಇರುವುದರಿಂದ, ನಿಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಹಲವಾರು ವಿಧಾನಗಳಿವೆ.
Happy Snapping!