Snapchatನಲ್ಲಿ ಜಿಯೋಫಿಲ್ಟರ್ಗಳು ನಮ್ಮ ನೆಚ್ಚಿನ ಬಿಡಿಭಾಗಗಳಲ್ಲಿ ಒಂದು . Snapchat ಸಮುದಾಯದ ಸೃಜನಶೀಲತೆಯಿಂದ ನಾವು ತುಂಬಾ ಪ್ರಭಾವಿತರಾಗಿದ್ದೇವೆ ಮತ್ತು ನಿಮ್ಮ ಕಲಾಕೃತಿಗಳ ಮೂಲಕ ಪ್ರತಿಯೊಂದು ಸ್ಥಳದ ವಿಶಿಷ್ಟತೆಯು ಹೊರಹೊಮ್ಮುವುದನ್ನು ನೋಡುವುದು ನಮಗೆ ಖುಷಿಕೊಟ್ಟಿದೆ. ಇಲ್ಲಿಯವರೆಗೆ, ಸುಮಾರು ಅರ್ಧ ದಶಲಕ್ಷದಷ್ಟು ಸಮುದಾಯ ಜಿಯೋಫಿಲ್ಟರ್ಗಳನ್ನು ಸಲ್ಲಿಸಲಾಗಿದೆ, ಮತ್ತು ಪ್ರತಿದಿನ, ಜಿಯೋಫಿಲ್ಟರ್ಗಳೊಂದಿಗೆ ಆವರಿಸಿರುವ Snapಗಳನ್ನು ನೂರಾರು ಮಿಲಿಯನ್ ಬಾರಿ ವೀಕ್ಷಿಸಲಾಗುತ್ತಿದೆ!
ನಾವು ಮೊದಲಿಗೆ ಸಮುದಾಯ ಜಿಯೋಫಿಲ್ಟರ್ಗಳನ್ನು ಸಾರ್ವಜನಿಕ ಸ್ಥಳಗಳಿಗಾಗಿ ವಿನ್ಯಾಸಗೊಳಿಸಿದೆವು- ಆದರೆ ನಾವು Snapchatterಗಳಿಂದ ಅವರಿಗೆ ಅವರ ವ್ಯವಹಾರ ಅಥವಾ ಖಾಸಗಿ ಕಾರ್ಯಕ್ರಮಕ್ಕಾಗಿ ಒಂದು ಜಿಯೋಫಿಲ್ಟರ್ ಬೇಕೆಂಬ ಬೇಡಿಕೆಗಳು ಕೇಳಿಬರುತ್ತಿತ್ತು, ಆದ್ದರಿಂದ ಇಂದು ನಾವು ಒಂದು ಹೊಸದನ್ನು ಘೋಷಿಸುತ್ತಿದ್ದೇವೆ:
ಆನ್-ಡಿಮಾಂಡ್ ಜಿಯೋಫಿಲ್ಟರ್ಗಳು ನಿಮ್ಮ ಪಾರ್ಟಿ, ಮದುವೆ, ವ್ಯವಹಾರ ಅಥವಾ ಇನ್ನಾವುದೇ ಸ್ಥಳ ಅಥವಾ ಈವೆಂಟ್ಗಾಗಿ ಒಂದು ಜಿಯೋಫಿಲ್ಟರ್ ರಚಿಸಲು ಮತ್ತು ಪ್ರದರ್ಶಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಇದು ನಿಮ್ಮ ಸ್ನೇಹಿತರು ಅಥವಾ ಗ್ರಾಹಕರು ಎಲ್ಲಿದ್ದರೂ ಅವರ Snapಗಳನ್ನು ಅಲಂಕರಿಸಲು ಅವರಿಗೆ ಸಹಾಯ ಮಾಡುವ ಒಂದು ಮೋಜಿನ ವಿಧಾನವಾಗಿದೆ!
ಇದು ಹೀಗೆ ಕೆಲಸ ಮಾಡುತ್ತದೆ:
ವಿನ್ಯಾಸ ಮಾಡಿ — ಫಿಲ್ಟರ್ ಸೃಷ್ಟಿಸಲು ನಿಮ್ಮ ಮೆಚ್ಚಿನ ಇಮೇಜ್ ಎಡಿಟರ್ ಬಳಸಿ We’ve also provided some templates that are compatible with Photoshop and Illustrator to get you started :)
ಮ್ಯಾಪ್ ಮಾಡಿ— ನಿಮ್ಮ ಫಿಲ್ಟರ್ ಕಾಣಿಸುವ ಜಿಯೋಫೆನ್ಸ್ ಅನ್ನು ಆರಿಸಿ, ನಂತರ ನಿಮ್ಮ ಜಿಯೋಫಿಲ್ಟರ್ ಯಾವಾಗ ಲಭ್ಯವಾಗಬೇಕು ಎಂದು ನೀವು ಬಯಸುವ ಸಮಯ ಮತ್ತು ದಿನಾಂಕಗಳನ್ನು ಆಯ್ಕೆ ಮಾಡಿ
ಖರೀದಿಸಿ — ನಿಮ್ಮ ಜಿಯೋಫಿಲ್ಟರ್ ಸಲ್ಲಿಸಿ ಎಲ್ಲವೂ ಸರಿಯಾಗಿದೆ ಎಂದು ಭಾವಿಸಿಕೊಂಡು, ನಮ್ಮ ತಂಡ ಅದನ್ನು ತ್ವರಿತವಾಗಿ ಪರಿಶೀಲಿಸುತ್ತದೆ, ಅದನ್ನು ಸಜ್ಜುಗೊಳಿಸಿ ಚಾಲನೆ ಮಾಡುತ್ತದೆ.
ಒಂದು ಈವೆಂಟ್ ಅಥವಾ ಒಂದು ಸಂಪೂರ್ಣ ಬ್ಲಾಕ್ಗಾಗಿ ನೀವು ಆನ್-ಡಿಮ್ಯಾಂಡ್ ಜಿಯೋಫಿಲ್ಟರ್ಗಳನ್ನು ಖರೀದಿಸಬಹುದು - ಒಂದು ಗಂಟೆ ಅಥವಾ ಮೂವತ್ತು ದಿನಗಳವರೆಗೆ! ಬೆಲೆ $ 5 ರಿಂದ ಪ್ರಾರಂಭವಾಗುತ್ತದೆ, ಮತ್ತು ಇದು, ನಿಮ್ಮ ಜಿಯೋಫೆನ್ಸ್ನ ಗಾತ್ರ ಮತ್ತು ನೀವು ಆಯ್ಕೆ ಮಾಡಿದ ಸಮಯ ಸೇರಿದಂತೆ ಇತರ ಕೆಲವು ಅಂಶಗಳನ್ನು ಅವಲಂಬಿಸಿರುತ್ತದೆ. ಆನ್-ಡಿಮ್ಯಾಂಡ್ ಜಿಯೋಫಿಲ್ಟರ್ಗಳು ಈಗ ಯುಎಸ್, ಯುಕೆ ಮತ್ತು ಕೆನಡಾದಲ್ಲಿ ಲಭ್ಯವಿವೆ,ಹಾಗೂ ಹೆಚ್ಚಿನ ಸ್ಥಳಗಳಿಗೆ ಶೀಘ್ರದಲ್ಲೇ ಬರಲಿವೆ!
https://www.snapchat.com/on-demand! ನಲ್ಲಿ ಪ್ರಾರಂಭಿಸಿ
ಹೆಚ್ಚಿನ ಮಾಹಿತಿ ಮತ್ತು FAQ ಗಳಿಗಾಗಿ, ದಯವಿಟ್ಟು ನಮ್ಮ ಜಿಯೋಫಿಲ್ಟರ್ಗಳ ಬೆಂಬಲಕೇಂದ್ರವನ್ನು ಪರಿಶೀಲಿಸಿ.