ಜೂನ್ 17, 2020
ಜೂನ್ 17, 2020

Pride Marches on in Augmented Reality

Snap and Pride Media have teamed up to ensure the spirit of Pride, deeply rooted in activism, marches on. The immersive AR experiences launch today alongside The Advocate’s 2020 edition of the annual “Champions of Pride” feature, highlighting the work of activists, artists, elected officials and everyday people representing a full spectrum of LGBTQ+ and BIPOC communities who are affecting real change.

ಚಳವಳಿಯಲ್ಲಿ ಆಳವಾದ ಬೇರು ಹೊಂದಿರುವ, ಪ್ರೈಡ್ ಮಾರ್ಚ್ ಮುಂದುವರಿಯುತ್ತದೆ ಎನ್ನುವುದನ್ನು ಖಚಿತಪಡಿಸಲು Snap ಮತ್ತು Pride ಮೀಡಿಯಾ ಜೊತೆಗೂಡಿವೆ.

ಈ ಪಾಲುದಾರಿಕೆಯು LGBTQ ಔಟ್‌ಲೆಟ್‌ಗಳ ಅಪ್ರತಿಮ ಪ್ರಕಾಶಕ ದಿ ಅಡ್ವೋಕೇಟ್ ಅನ್ನು ಹೊರತರುತ್ತದೆ ಮತ್ತು Snapchat ಜೊತೆಗೆ ಮೊದಲ ಬಾರಿಗೆ Snap ನ ವರ್ಧಿತ ರಿಯಾಲಿಟಿ ಸಾಮರ್ಥ್ಯಗಳು ಮತ್ತು ಕ್ರಿಯೇಟರ್ ಸಮುದಾಯಗಳ ಸಹಾಯದೊಂದಿಗೆ, U.S. ನ ಪ್ರತಿ ರಾಜ್ಯದಲ್ಲಿ ಎಲ್ಲ ಜನರಿಗೆ ಸಮಾನತೆಯನ್ನು ಪ್ರತಿಪಾದಿಸುವ ಪರಿವರ್ತಕರನ್ನು ಗುರುತಿಸುವ, ವೈವಿಧ್ಯತೆಯನ್ನು ಎತ್ತಿತೋರಿಸುವ ಕೆಲಸ ಮಾಡುತ್ತದೆ.

ವಾರ್ಷಿಕ "ಪ್ರೈಡ್‌ನ ಚಾಂಪಿಯನ್‌ಗಳು" ವೈಶಿಷ್ಟ್ಯದ ಅಡ್ವೊಕೇಟ್ಸ್ನ 2020 ಆವೃತ್ತಿಯ ಜೊತೆಗೆ ಮನಸೂರೆಗೊಳ್ಳುವ AR ಅನುಭವಗಳು ಇಂದು ಬಿಡುಗಡೆಯಾಗುತ್ತವೆ, ನಿಜವಾದ ಬದಲಾವಣೆಗೆ ಕಾರಣರಾಗುತ್ತಿರುವ LGBTQ+ ಮತ್ತು BIPOC ಸಮುದಾಯಗಳನ್ನು ಪೂರ್ಣವಾಗಿ ಪ್ರತಿನಿಧಿಸುವ ಚಳವಳಿಗಾರರು, ಕಲಾವಿದರು, ಚುನಾಯಿತ ಪ್ರತಿನಿಧಿಗಳು ಮತ್ತು ಸಾಮಾನ್ಯ ಜನರನ್ನು ಹೈಲೈಟ್ ಮಾಡುತ್ತದೆ.

Snapchatters ವರ್ಚುವಲ್ ಆರ್ಟ್ ಗ್ಯಾಲರಿ ಸ್ಥಳಗಳನ್ನು ಅನ್ವೇಷಿಸಬಹುದು,ಇಲ್ಲಿ ಅವರು ಪ್ರತಿ "ಪ್ರೈಡ್‌ನ ಚಾಂಪಿಯನ್"‌ ಕುರಿತು ತಿಳಿದುಕೊಳ್ಳಬಹುದು, ಇವು ಸೇರಿದಂತೆ:

  • "ಮೈಟಿ" ರೆಬೆಕ್ಕಾ, 13 ವರ್ಷದ ಹುಡುಗಿಯಾಗಿದ್ದು LGBTQ ಒಳಗೊಂಡ ಪಠ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಲು ತನ್ನ ಸ್ವಂತ ರಾಜ್ಯ ನ್ಯೂಜೆರ್ಸಿಯಲ್ಲಿ ಯಶಸ್ವಿ ಚಳವಳಿ ನಡೆಸಿದಳು

  • ಕಿಮ್ ಜಾಕ್ಸನ್, ಕರಿಯ ಬಿಷನ್ ಆಗಿದ್ದು ಜಾರ್ಜಿಯಾದ ಮೊದಲ ಸ್ಟೇಟ್ ಸೆನೆಟರ್ ಆಗಲು ಸ್ಪರ್ಧಿಸುತ್ತಿದ್ದಾರೆ

  • ಕಾರ್ಲಾ ಬಾಟಿಸಾ, ಅರಿಜೋನಾದ ಒಬ್ಬ ಲಿಂಗಪರಿವರ್ತಿತ ಮಹಿಳೆಯಾಗಿದ್ದು LGBTQ ವಲಸಿಗರನ್ನು ಬಂಧನದಿಂದ ಬಿಡುಗಡೆಗೊಳಿಸಲು ಶ್ರಮಿಸುತ್ತಿದ್ದಾರೆ.

ವರ್ಧಿತ ರಿಯಾಲಿಟಿ ಮೂಲಕ ಬದುಕಿನ ಪರ ವಕಾಲತ್ತು ವಹಿಸಲು, ಪ್ರತಿ ಲೆನ್ಸ್ U.S. ನ ಒಂದು ಪ್ರದೇಶವನ್ನು ಪ್ರತಿನಿಧಿಸುವಂಥ ಐದು ಪೋರ್ಟಲ್ ಲೆನ್ಸ್‌ಗಳ ಸೀರೀಸ್ ಅನ್ನು ನಿರ್ಮಿಸಲು ಅನೇಕ ಅಧಿಕೃತ ಲೆನ್ಸ್ ಕ್ರಿಯೇಟರ್ ‌ಗಳನ್ನು Snap ಗುರುತಿಸಿದೆ, ಇದರಿಂದ ಪ್ರತಿ "ಪ್ರೈಡ್‌ನ ಚಾಂಪಿಯನ್" ಕಥೆಗಳನ್ನು Snapchatters ಸಂಭ್ರಮಿಸಬಹುದು. ಪ್ರತಿ ಲೆನ್ಸ್ ಕ್ರಿಯೇಟರ್‌ನ ವಿಶಿಷ್ಟ ದೃಷ್ಟಿಕೋನ ಮತ್ತು ಆ ಪ್ರದೇಶದ ವಿಶೇಷ ಅಭಿರುಚಿಯನ್ನು ಪ್ರದರ್ಶಿಸುತ್ತದೆ, ಉದಾಹರಣೆಗೆ ಉತ್ತರ ಅಟ್ಲಾಂಟಿಕ್ ಲೆನ್ಸ್‌ನ ಇಟ್ಟಿಗೆ ಗೋಡೆಯ ಗ್ಯಾಲರಿ ಸ್ಥಳ ಮತ್ತು ಸಿರೀನ್‌ನ ಸೌತ್ ಲೆನ್ಸ್‌ನಲ್ಲಿ ಸ್ಟೇಟ್ ಹೂವುಗಳು ಮತ್ತು ಕ್ಯಾಟೇಲ್ ಸಸ್ಯಗಳು. ಕ್ರಿಯೇಟರ್ ಪ್ರದೇಶದೊಂದಿಗೆ ಬಾಂಧವ್ಯ ಹೊಂದಿರುತ್ತಾರೆ ಅವರ ಲೆನ್ಸ್ LGBTQ+ ಆಗಿ ಅಥವಾ ಸಮುದಾಯದ ಮಿತ್ರನಾಗಿ ಪ್ರತಿನಿಧಿಸುತ್ತದೆ ಮತ್ತು ಗುರುತಿಸಿಕೊಳ್ಳುತ್ತದೆ.

ಪ್ರತಿಯೊಂದು "ಪ್ರೈಡ್‌ನ ಚಾಂಪಿಯನ್‌ಗಳು" ಲೆನ್ಸ್‌ಗಳನ್ನು ಇಲ್ಲಿ ನೋಡಿ:

"ಗಡಿ ಮೀರುವ ವೇದಿಕೆಯಾದ Snapchat ನಲ್ಲಿ ಈ ವರ್ಷದ ಪ್ರೈಡ್‌ನ ಚಾಂಪಿಯನ್‌ರನ್ನು ಸ್ಪಾಟ್‌ಲೈಟ್ ಮಾಡುವ ಅವಕಾಶ ಪಡೆದಿರುವ ನಾವು ಎಷ್ಟು ಅದೃಷ್ಟವಂತರಲ್ಲವೇ?" ಎಂದುದಿ ಅಡ್ವೊಕೇಟ್ ನ ಪ್ರಧಾನ ಸಂಪಾದಕರಾದ ಡೇವಿಡ್ ಅರ್ಟೇವಿಯಾ ಹೇಳುತ್ತಾರೆ. ಈ ಚಾಂಪಿಯನ್‌ಗಳ ಧ್ವನಿಗೆ ವಿಸ್ತಾರವಾದ ವೇದಿಕೆ ಒದಗಿಸುತ್ತಿರುವುದಕ್ಕಾಗಿ ನಾವು Snapchat ಮತ್ತು ಅವರ LGBTQ+ ಕ್ರಿಯೇಟರ್‌ಗಳ ವೈವಿಧ್ಯಮಯ ತಂಡವನ್ನು ನಾವು ಶ್ಲಾಘಿಸುತ್ತೇವೆ. ತೀರದಿಂದ ತೀರದವರೆಗೆ, ಈ ಪಟ್ಟಿಯಲ್ಲಿರುವ ಎಲ್ಲರೂ, ಒಂದು ರೀತಿಯಲ್ಲಿ ಜಗತ್ತನ್ನು ಒಳಿತಿಗಾಗಿ ಬದಲಾಯಿಸಿದ್ದಾರೆ. Snapchat ನ ವರ್ಧಿತ ರಿಯಾಲಿಟಿ ಅವರನ್ನು ಪರಿಚಯಿಸಲು ವಿನೂತನ ವಿಧಾನವಷ್ಟೇ ಆಗಿಲ್ಲ, ತಂತ್ರಜ್ಞಾನವನ್ನು ಹೇಗೆ ಒಳಿತಿಗಾಗಿ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಅಚ್ಚರಿಯ ಉದಾಹರಣೆಯೂ ಆಗಿದೆ."

"ಹಿಂದಿನ ಸಂಭ್ರಮಾಚರಣೆಯಷ್ಟೇ ಅಲ್ಲ, ಜೊತೆಗೆ ಭವಿಷ್ಯದ ಸಂಭ್ರಮಾಚರಣೆಯೂ ಆಗಿರುವ ಪ್ರೈಡ್ ಲೆನ್ಸ್‌ನಲ್ಲಿ ನಾನು ಕೆಲಸ ಮಾಡಲು ಬಯಸಿದ್ದೆ," ಎಂದು ಪ್ರೈಡ್ ಫೆಸಿಫಿಕ್ ವೆಸ್ಟ್ ಲೆನ್ಸ್‌ನ ಕ್ರಿಯೇಟರ್ ಬ್ರೇಲೀ ಗಾರ್ಸಿಯಾ ಹೇಳಿದರು. "ಈ ಲೆನ್ಸ್‌ಗಳು LGBT ಸಮುದಾಯದ ಪ್ರತಿಯೊಬ್ಬರಿಗೂ ಪ್ರೋತ್ಸಾಹಕವಾಗಿರುತ್ತವೆ ಎಂದು ನಾವು ಆಶಿಸುತ್ತೇನೆ. ಆ ಜನರಿಗೆ ಪ್ರೋತ್ಸಾಹ ವಿಶಿಷ್ಟವಾಗಿರುತ್ತದೆ ಏಕೆಂದರೆ ನೀವು ಉದ್ಯಮಿ,ರಾಜಕಾರಣಿ, ಕಲಾವಿದ ಅಥವಾ ನೀವು ಕನಸು ಕಾಣುವ ಯಾವುದೇ ವೃತ್ತಿಯಲ್ಲಿ ಯಶಸ್ವಿಯಾಗಬಹುದು. ಈ ಸಂದೇಶ ನನಗೆ ಬಹಳ ಮುಖ್ಯ ಏಕೆಂದರೆ ಈ ರೀತಿಯ ಯಶಸ್ಸು ನಮಗೆ ಯಾವಾಗಲೂ ಸಿಗುವುದಿಲ್ಲ. ಮಾರ್ಗ ನಿರ್ಮಿಸಲು ನಮ್ಮ ಮುಂದೆ ಅನೇಕ ಅದ್ಭುತ ಜನರು ಬಂದಿದ್ದಾರೆ ಮತ್ತು ಇದು ಅವರ ಯಶಸ್ಸಿನ ಸಂಭ್ರಮಾಚಣೆ ಮತ್ತು ನೀವು ಏನು ಸಾಧಿಸಬಹುದು ಎನ್ನುವುದರ ಮಾರ್ಗದರ್ಶನ."

Snapchat ನಲ್ಲಿ ವರ್ಧಿತ ರಿಯಾಲಿಟಿ ಅನುಭವಗಳನ್ನು ಸೃಷ್ಟಿಸಲು ಮತ್ತು ಪ್ರಕಟಿಸಲು Snap ನ ಶಕ್ತಿಶಾಲಿ ವೇದಿಕೆಯಾದ ಲೆನ್ಸ್ ಸ್ಟುಡಿಯೋದಲ್ಲಿ ಕ್ರಿಯೇಟರ್‌ಗಳು ಈ ಲೆನ್ಸ್‌ಗಳನ್ನು ನಿರ್ಮಿಸಿದ್ದಾರೆ.

Back To News