COVID-19 ಒಡ್ಡಿದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿಗೆ ಸಮುದಾಯಗಳು ಸಿದ್ಧತೆ ಮತ್ತು ಪ್ರತಿಕ್ರಿಯೆಯನ್ನು ಮುಂದುವರಿಸುವುದರಿಂದ, ನಮ್ಮ Snapchat ಸಮುದಾಯ, ನಮ್ಮ ಪಾಲುದಾರರು, ನಮ್ಮ ತಂಡ ಮತ್ತು ನಾವೆಲ್ಲರೂ ಒಟ್ಟಿಗೆ ಹಂಚಿಕೊಳ್ಳುವ ಪ್ರಪಂಚದ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ನಮ್ಮ ಪ್ರಯತ್ನಗಳ ಕುರಿತ ನವೀಕರಣವನ್ನು ಹಂಚಿಕೊಳ್ಳಲು ನಾವು ಬಯಸಿದ್ದೇವೆ.
ನಮ್ಮ ಜಾಗತಿಕ ತಂಡವು ದೈಹಿಕ ಅಂತರವನ್ನು ಅಭ್ಯಾಸ ಮಾಡುತ್ತಿದೆ ಮತ್ತು ವೈರಸ್ ಹರಡುವುದನ್ನು ನಿಧಾನಗೊಳಿಸಲು ಸಹಾಯ ಮಾಡುವ ದೊಡ್ಡ ಸಾರ್ವಜನಿಕ ಆರೋಗ್ಯ ಪ್ರಯತ್ನಗಳಿಗೆ ಸೇರ್ಪಡೆಗೊಳ್ಳುವಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸುತ್ತಿದೆ. ನಾವೆಲ್ಲರೂ ಈ ಅಭೂತಪೂರ್ವ ಸವಾಲಿನಲ್ಲಿ ಒಟ್ಟಿಗೆ ಸಂಚರಿಸುತ್ತಿರುವುದರಿಂದ ನಮ್ಮ ಸಮುದಾಯ ಮತ್ತು ನಮ್ಮ ಪಾಲುದಾರರನ್ನು ಬೆಂಬಲಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.
ಆಪ್ತ ಸ್ನೇಹಿತರು ಮತ್ತು ಕುಟುಂಬವನ್ನು ಬೇರೆಯಾಗಿದ್ದಾಗಲೂ Snapchat ಒಟ್ಟಿಗೆ ಸೇರಿಸುತ್ತದೆ - ಮತ್ತು ಈ ಸಮಯದಲ್ಲಿ ಜನರು ಸಂಪರ್ಕದಲ್ಲಿರಲು ಸಹಾಯ ಮಾಡುವ ಅವಕಾಶಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಸೇವೆಯಲ್ಲಿ ಹೆಚ್ಚಿನ ತೊಡಗಿಕೊಳ್ಳುವಿಕೆಯನ್ನು ನಾವು ನೋಡಿದ್ದೇವೆ ಮತ್ತು ಎಲ್ಲವೂ ಸುಗಮವಾಗಿ ನಡೆಯಲು ನಾವು ಶ್ರಮಿಸುತ್ತಿದ್ದೇವೆ.
ವೈರಸ್ ಹರಡುವುದನ್ನು ತಡೆಯುವಲ್ಲಿ Snapchatters ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ನಾವು ನಂಬುತ್ತೇವೆ. ದೈಹಿಕವಾಗಿ ಅಂತರವನ್ನು ನಿರ್ವಹಿಸುವಾಗ ತಂತ್ರಜ್ಞಾನದ ಸಂಪೂರ್ಣ ಶಕ್ತಿಯನ್ನು ಬಳಸುವುದರ ಮೂಲಕ -ಪ್ರೀತಿಪಾತ್ರರ ಜೊತೆ ಸಂವಹನ ನಡೆಸುವುದಕ್ಕಾಗಿ, ಇಲ್ಲವೇ ಸ್ನೇಹಿತರೊಂದಿಗೆ ಆಟವಾಡುವುದಕ್ಕಾಗಿ ಅಥವಾ ಮಾಹಿತಿಯುಕ್ತರಾಗಿ ಇರುವುದಕ್ಕಾಗಿ ನಮ್ಮ ಸಮುದಾಯವು ಸಹಾಯ ಮಾಡಬಹುದು.
ಸಹಾಯ ಮಾಡಲು ನಾವು ಮಾಡುತ್ತಿರುವ ಕೆಲವು ವಿಷಯಗಳ ಕುರಿತು ತ್ವರಿತ ಅಪ್‍ಡೇಟ್ ಇಲ್ಲಿದೆ:
ಸುರಕ್ಷಿತವಾಗಿರುವುದು ಹೇಗೆ ಎಂಬುದರ ಕುರಿತು ನಮ್ಮ ಸಮುದಾಯಕ್ಕೆ ಸಲಹೆಯೊಂದಿಗೆ ವಿಶ್ವಾದ್ಯಂತ ಫಿಲ್ಟರ್ ಸೇರಿದಂತೆ Snapchatters ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ತಜ್ಞ-ಅನುಮೋದಿತ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದಕ್ಕೆ ಸಹಾಯ ಮಾಡಲು ನಾವು ಸೃಜನಶೀಲ ಸಾಧನಗಳನ್ನು ಪ್ರಾರಂಭಿಸಿದ್ದೇವೆ. ಈ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಪಡೆಯಲಾಗಿದೆ, ಮತ್ತು ಹೆಚ್ಚಿನ ಮಾಹಿತಿಗಾಗಿ ಅದರ ವೆಬ್‌ಸೈಟ್‌ಗೆ ಲಿಂಕ್‌ಗಳು.
ತಜ್ಞರಿಂದಲೇ ಎಲ್ಲಾ ಇತ್ತೀಚಿನ ಮಾಹಿತಿಯನ್ನು Snapchatters ಹೊಂದಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು WHO ಹಾಗೂ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. WHO ಮತ್ತು CDC ತಮ್ಮ ಅಧಿಕೃತ ಖಾತೆಗಳಿಂದ Snapchatters ಗಾಗಿ ನಿಯಮಿತ ನವೀಕರಣಗಳನ್ನು ಪ್ರಕಟಿಸುತ್ತವೆ ಮತ್ತು ನಮ್ಮ ಸಮುದಾಯದ ಪ್ರಶ್ನೆಗಳಿಗೆ ಉತ್ತರಿಸಲು ಕಸ್ಟಮ್ ವಿಷಯವನ್ನು ಅಭಿವೃದ್ಧಿಪಡಿಸಲು ನಾವು WHO ನೊಂದಿಗೆ ಕೆಲಸ ಮಾಡಿದ್ದೇವೆ.
ಜನರು ಅನುಭವಿಸುತ್ತಿರುವ ಆತಂಕ ಮತ್ತು ಒತ್ತಡದ ಬೆಳಕಿನಲ್ಲಿ, Snapchatters ಮಾನಸಿಕ ಆರೋಗ್ಯ, ಆತಂಕ, ಖಿನ್ನತೆ, ಒತ್ತಡ, ಆತ್ಮಹತ್ಯೆ ಆಲೋಚನೆಗಳು, ದುಃಖ ಮತ್ತು ಹೆದರಿಕೆಗೆ ಸಂಬಂಧಿಸಿದ ಕೆಲವು ವಿಷಯಗಳಿಗಾಗಿ ಹುಡುಕಿದಾಗ ಪರಿಣಿತ ಸ್ಥಳೀಯ ಪಾಲುದಾರರಿಂದ ಸಂಪನ್ಮೂಲಗಳನ್ನು ತೋರಿಸುವ ಹೊಸ ವೈಶಿಷ್ಟ್ಯ, ಹಿಯರ್ ಫಾರ್ ಯು ಅನ್ನು ನಾವು ಪ್ರಾರಂಭಿಸಿದ್ದೇವೆ. ಕರೋನವೈರಸ್‍ಗೆ ನಿರ್ದಿಷ್ಟವಾಗಿ ಪ್ರತಿಕ್ರಿಯಿಸಲು, WHO, CDC, ಆಡ್ ಕೌನ್ಸಿಲ್ ಮತ್ತು ಕ್ರೈಸಿಸ್ ಟೆಕ್ಸ್ಟ್ ಲೈನ್ ಉತ್ಪಾದಿಸುತ್ತಿರುವ COVID-19 ಗೆ ಸಂಬಂಧಿಸಿದ ಆತಂಕದ ವಿಷಯವನ್ನು ತೋರಿಸುವ ಹೊಸ ವಿಭಾಗವನ್ನೂ ನಾವು ಸೇರಿಸಿದ್ದೇವೆ.
ನಾವು ವಿಶ್ವಾಸಾರ್ಹ ವಿಷಯವನ್ನು ನೀಡುತ್ತೇವೆ. ನಮ್ಮ ವಿಷಯ ಪ್ಲಾಟ್‌ಫಾರ್ಮ್, Discover ವ್ಯವಸ್ಥಿತವಾಗಿದೆ ಮತ್ತು ನಾವು ಜಗತ್ತಿನ ಕೆಲವು ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳನ್ನು ಒಳಗೊಂಡಂತೆ ಆಯ್ದ ಪಾಲುದಾರರ ಜೊತೆ ಮಾತ್ರವೇ ಕೆಲಸ ಮಾಡುತ್ತೇವೆ. ನಮ್ಮ ಮಾರ್ಗಸೂಚಿಗಳು Snapchatters ಮತ್ತು ನಮ್ಮ ಪಾಲುದಾರರಿಗೆ ಹಾನಿಯನ್ನುಂಟುಮಾಡುವ ಸುಳ್ಳು ಮಾಹಿತಿಯನ್ನು ಮೋಸಗೊಳಿಸುವ ಅಥವಾ ಉದ್ದೇಶಪೂರ್ವಕವಾಗಿ ಹರಡುವ ವಿಷಯವನ್ನು ಹಂಚಿಕೊಳ್ಳುವುದನ್ನು ನಿಷೇಧಿಸುತ್ತವೆ, ಮತ್ತು ಅನಾವರಣಗೊಳಿಸಿದ ಪ್ರಕಾಶಕರು ಅಥವಾ ವ್ಯಕ್ತಿಗಳು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲು ಅವಕಾಶವನ್ನು ಹೊಂದಿರುವ, ಮುಕ್ತ ಸುದ್ದಿ ಫೀಡ್ ಅನ್ನು ನಾವು ನೀಡುವುದಿಲ್ಲ.
ಈ ಪಾಲುದಾರರಲ್ಲಿ NBC News’ “StayTuned”, The Washington Post, SkyNews, The Telegraph, Le Monde, VG, Brut India, ಮತ್ತು Sabq ಸೇರಿದಂತೆ ಮೂರು ಡಜನ್‌ಗಿಂತಲೂ ಹೆಚ್ಚು ಮಂದಿ COVID-19 ನಲ್ಲಿ ನಿರಂತರ ಪ್ರಸಾರವನ್ನು ಸಿದ್ಧಪಡಿಸುತ್ತಿದ್ದಾರೆ.
ನಮ್ಮದೇ ಸುದ್ದಿ ತಂಡವು ನಿಯಮಿತವಾಗಿ ಕವರೇಜ್ ಮಾಡುತ್ತಿದೆ ಮತ್ತು ವೈದ್ಯಕೀಯ ತಜ್ಞರೊಂದಿಗೆ ಪ್ರಶ್ನೋತ್ತರ ಸೇರಿದಂತೆ COVID-19 ಬಗ್ಗೆಗಿನ ಸಲಹೆಗಳು ಮತ್ತು ಮಾಹಿತಿಯೊಂದಿಗೆ Discover ಅನ್ನು ನಿರಂತರವಾಗಿ ನವೀಕರಿಸುತ್ತಿದೆ.
ಇದು ಕೇವಲ ಪ್ರಾರಂಭ ಮಾತ್ರ. ನಮ್ಮ ಸಮುದಾಯವನ್ನು ಬೆಂಬಲಿಸಲು ಹೆಚ್ಚಿನ ಮಾರ್ಗಗಳನ್ನು ಹುಡುಕುವುದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾವು ನಿಮ್ಮೆಲ್ಲರ ಬಗ್ಗೆ ಯೋಚಿಸುತ್ತಿದ್ದೇವೆ ಮತ್ತು ಈ ಕಷ್ಟದ ಸಮಯದಲ್ಲಿ ಸಾಕಷ್ಟು ಪ್ರೀತಿಯನ್ನು ಕಳುಹಿಸುತ್ತಿದ್ದೇವೆ.