Snap ಪಾಲುದಾರರ ಶೃಂಗಸಭೆಯ ದಿನಾಂಕವನ್ನು ಗುರುತು ಮಾಡಿಟ್ಟುಕೊಳ್ಳಿ: ಎಪ್ರಿಲ್ 19, 2023
ಎಪ್ರಿಲ್ 19 ರಂದು, ನಾವು ನಮ್ಮ ವಾರ್ಷಿಕ Snap ಪಾಲುದಾರ ಶೃಂಗಸಭೆಯನ್ನು ಲೈವ್‌ಸ್ಟ್ರೀಮ್ ಮಾಡುತ್ತೇವೆ. Snapchat ನ 375 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರ ಬೆಳೆಯುತ್ತಿರುವ ಸಮುದಾಯದ ಸಂಭ್ರಮದಲ್ಲಿ ಪಾಲುದಾರರು ಮತ್ತು ಕ್ರಿಯೇಟರ್‌ಗಳ ಜೊತೆಗೂಡಲು ನಾವು ಕಾತರರಾಗಿದ್ದೇವೆ.

ಈಗ ಐದನೇ ವರ್ಷದಲ್ಲಿರುವ Snap ಪಾಲುದಾರರ ಶೃಂಗಸಭೆಯ ಪ್ರಧಾನ ಭಾಷಣವು ಹೊಸ ಉತ್ಪನ್ನಗಳು, ಟೂಲ್‌ಗಳು ಮತ್ತು ಸೇವೆಗಳ ವಿಶಾಲ ಶ್ರೇಣಿಯನ್ನು ಅನಾವರಣಗೊಳಿಸಲಿದೆ ಮತ್ತು Snapchat ಸಮುದಾಯವು ಸಂವಹನ ನಡೆಸುವ, ಅನ್ವೇಷಿಸುವ, ಶಾಪಿಂಗ್ ಮಾಡುವ ಮತ್ತು ಫ್ಯಾಶನ್, ಕ್ರೀಡೆ ಹಾಗೂ ಸಂಗೀತ ಸೇರಿದಂತೆ ತಮ್ಮ ಹವ್ಯಾಸಗಳೊಂದಿಗೆ ಸಂಪರ್ಕಗೊಳ್ಳುವ ವಿಧಾನವನ್ನು ವರ್ಧಿಸುವ ಮಹತ್ವದ ಪಾಲುದಾರಿಕೆಗಳನ್ನು ಪ್ರದರ್ಶಿಸಲಿದೆ.
ಪೆಸಿಫಿಕ್ ಸಮಯ 10:00 AM ನಿಂದ ಆರಂಭಗೊಳ್ಳುವ ಸಭೆಯನ್ನು snappartnersummit.com ನಲ್ಲಿ ವೀಕ್ಷಿಸುವಂತೆ ಎಲ್ಲರನ್ನೂ ಆಹ್ವಾನಿಸುತ್ತಿದ್ದೇವೆ. ಒಂದು ವೇಳೆ ನಿಮಗೆ ಆ ಸಮಯದಲ್ಲಿ ಹಾಜರಾಗಲು ಸಾಧ್ಯವಾಗದಿದ್ದರೆ, ನೀವು ಅದನ್ನು ನಂತರ Snap ನ YouTube ಚಾನಲ್ ನಲ್ಲಿ ನೋಡಬಹುದು.