ಫೆಬ್ರವರಿ 27, 2023
ಫೆಬ್ರವರಿ 27, 2023

My AI ಅನ್ನು ಸ್ವಾಗತಿಸಿ

ಇಂದು ನಾವು Snapchat ಗಾಗಿ ಕಸ್ಟಮೈಸ್ ಮಾಡಿದ OpenAI ನ GPT ತಂತ್ರಜ್ಞಾನದ ಇತ್ತೀಚಿನ ಆವೃತ್ತಿಯಲ್ಲಿ ರನ್ ಆಗುವ ಹೊಸ ಚಾಟ್‌ಬಾಟ್ My AI ಅನ್ನು ಬಿಡುಗಡೆ ಮಾಡುತ್ತಿದ್ದೇವೆ. Snapchat+ ಸಬ್‌ಸ್ಕ್ರೈಬರ್‌ಗಳಿಗಾಗಿ ಪ್ರಾಯೋಗಿಕ ವೈಶಿಷ್ಟ್ಯದ ರೂಪದಲ್ಲಿ My AI ಲಭ್ಯವಿದ್ದು, ಈ ವಾರ ಬಿಡುಗಡೆಯಾಗಲಿದೆ. 

My AI ನಿಮ್ಮ ಎಂದೆಂದಿಗೂ ನೆಚ್ಚಿನ ಸ್ನೇಹಿತರಿಗಾಗಿ ಜನ್ಮದಿನದ ಉಡುಗೊರೆ ಐಡಿಯಾಗಳನ್ನು ಶಿಫಾರಸು ಮಾಡಬಹುದು, ದೀರ್ಘ ವಾರಾಂತ್ಯಕ್ಕಾಗಿ ಒಂದು ಚಾರಣದ ಪ್ರವಾಸವನ್ನು ಯೋಜಿಸಬಹುದು, ರಾತ್ರಿಯ ಭೋಜನಕ್ಕಾಗಿ ಒಂದು ಪಾಕವಿಧಾನವನ್ನು ಸಲಹೆ ಮಾಡಬಹುದು ಅಥವಾ ನಿಮ್ಮ ಚೀಸ್ ವ್ಯಾಮೋಹಿ ಸಂಗಾತಿಗಾಗಿ ಚೀಸ್ ಕುರಿತ ಒಂದು ಕವಿತೆಯನ್ನೂ ಬರೆಯಬಹುದು. My AI ಗೆ ಒಂದು ಹೆಸರು ನೀಡುವ ಮೂಲಕ ಮತ್ತು ನಿಮ್ಮ ಚಾಟ್‌ಗೆ ವಾಲ್‌ಪೇಪರ್ ಅನ್ನು ಕಸ್ಟಮೈಸ್ ಮಾಡುವ ಮೂಲಕ ಅದನ್ನು ನಿಮ್ಮ ಸ್ವಂತದ್ದಾಗಿಸಿಕೊಳ್ಳಿ.

ಎಲ್ಲ AI ಸಂಚಾಲಿತ ಚಾಟ್‌ಬಾಟ್‌ಗಳಂತೆ, My AI ಕೂಡ ಭ್ರಮೆಗಳಿಗೆ ಈಡಾಗುತ್ತದೆ ಮತ್ತು ಯಾವುದರ ಕುರಿತಾದರೂ ಹೇಳುವಂತೆ ಅದನ್ನು ಬೇಸ್ತುಬೀಳಿಸಬಹುದು. ಅದರ ಅನೇಕ ಕೊರತೆಗಳ ಕುರಿತು ದಯವಿಟ್ಟು ಜಾಗರೂಕರಾಗಿರಿ ಮತ್ತು ಅದಕ್ಕಾಗಿ ಮುಂಚಿತವಾಗಿ ಕ್ಷಮೆ ಕೇಳುತ್ತೇವೆ! My AI ಜೊತೆಗಿನ ಎಲ್ಲ ಸಂಭಾಷಣೆಗಳನ್ನು ಶೇಖರಣೆ ಮಾಡಲಾಗುತ್ತದೆ ಮತ್ತು ಉತ್ಪನ್ನದ ಅನುಭವವನ್ನು ಸುಧಾರಿಸಲು ಪರಿಶೀಲಿಸಬಹುದು. ದಯವಿಟ್ಟು My AI ಜೊತೆಗೆ ಯಾವುದೇ ರಹಸ್ಯಗಳನ್ನು ಹಂಚಿಕೊಳ್ಳಬೇಡಿ ಮತ್ತು ಸಲಹೆಗಾಗಿ ಅದರ ಮೇಲೆ ಅವಲಂಬಿತರಾಗಬೇಡಿ.

ಪಕ್ಷಪಾತದ, ತಪ್ಪಾದ, ಹಾನಿಕಾರಕ ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ನಿವಾರಿಸಲು My AI ಅನ್ನು ವಿನ್ಯಾಸಗೊಳಿಸಲಾಗಿದೆಯಾದರೂ, ತಪ್ಪುಗಳು ಆಗುತ್ತವೆ. ಪ್ರತಿಕ್ರಿಯೆಯನ್ನು ಸಲ್ಲಿಸಲು ದಯವಿಟ್ಟು My AI ನ ಯಾವುದೇ ಸಂದೇಶದ ಮೇಲೆ ಒತ್ತಿ ಹಿಡಿಯಿರಿ. My AI ಜೊತೆಗಿನ ನಿಮ್ಮ ಅನುಭವದ ಕುರಿತು ಆಲಿಸಲು ನಾವು ಕಾತುರರಾಗಿದ್ದೇವೆ.

Happy Snapping!

ತಂಡ Snapchat