ಇಂದು Snap Inc. ನಮ್ಮ ಉತ್ಪನ್ನಗಳು, ವ್ಯವಹಾರ, ಕಮ್ಯುನಿಟಿ ಮತ್ತು ಭವಿಷ್ಯದ ಅವಕಾಶಗಳನ್ನು ಹೈಲೈಟ್ ಮಾಡುವ ಮೂಲಕ, ನಮ್ಮ ಮೊದಲ ಹೂಡಿಕೆದಾರರ ದಿನವನ್ನು ಆಯೋಜಿಸಿತು. ಜನರು ತಮ್ಮನ್ನು ಅಭಿವ್ಯಕ್ತಿಪಡಿಸಲು, ಕ್ಷಣಗಳನ್ನು ಆನಂದಿಸಲು, ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ಮತ್ತು ಒಟ್ಟಿಗೆ ಮೋಜು ಮಾಡಲು ಅವಕಾಶ ಕಲ್ಪಿಸುವ ಮೂಲಕ ಮಾನವ ಪ್ರಗತಿಗೆ ಕೊಡುಗೆ ನೀಡುವ ನಮ್ಮ ಧ್ಯೇಯವನ್ನು ಈ ಈವೆಂಟ್ ಒತ್ತಿಹೇಳಿತು.
ಸಹ-ಸಂಸ್ಥಾಪಕ ಮತ್ತು CEO ಇವಾನ್ ಸ್ಪೀಗೆಲ್ ಅವರು ವರ್ಚುವಲ್ ಈವೆಂಟ್‌ಗೆ ಚಾಲನೆ ನೀಡಿದರು, ಇದರಲ್ಲಿ ನಮ್ಮ ಉತ್ಪನ್ನ, ವ್ಯವಹಾರ, ಮಾರ್ಕೆಟಿಂಗ್, ಎಂಜಿನಿಯರಿಂಗ್, ಕಂಟೆಂಟ್ ಮತ್ತು ಹಣಕಾಸು ತಂಡಗಳಾದ್ಯಂತ ಒಂಬತ್ತು ನಾಯಕರ ಪ್ರಸ್ತುತಿಗಳು ಸೇರಿದ್ದವು. ಪ್ರಸ್ತುತಿಗಳ ಸಮಯದಲ್ಲಿ, ವಿಶಾಲ ವೇದಿಕೆಗಳು ಮತ್ತು ವ್ಯವಹಾರಗಳಾಗಿ ಮೂಲ Snapchat ಉತ್ಪನ್ನಗಳು ಹೇಗೆ ವಿಕಸನಗೊಳ್ಳುತ್ತಿವೆ ಎಂಬುದನ್ನು ನಾವು ಅವಲೋಕಿಸಿದೆವು. ಪ್ರಸ್ತಾವನೆ ಮಾತುಗಳನ್ನಾಡಿದ ಇವಾನ್, ಪ್ರತಿದಿನ 265 ಮಿಲಿಯನ್ ಜನರಿಂದ ಬಳಸಲ್ಪಡುವ ಕ್ಯಾಮೆರಾಗಾಗಿ ನಮ್ಮ ದೃಷ್ಟಿಕೋನವನ್ನು ವಿವರಿಸಿದರು:
“ಕ್ಯಾಮೆರಾ ಒಂದು ಕಾಲದಲ್ಲಿ ಪ್ರಮುಖ ಕ್ಷಣಗಳನ್ನು ದಾಖಲಿಸುವ ಸಾಧನವಾಗಿತ್ತು ಮತ್ತು ಈಗ ಸ್ವಯಂ ಅಭಿವ್ಯಕ್ತಿ ಮತ್ತು ದೃಶ್ಯ ಸಂವಹನಕ್ಕಾಗಿ ಪ್ರಬಲ ವೇದಿಕೆಯಾಗಿದೆ. ಪ್ರತಿದಿನ 5 ಬಿಲಿಯನ್ Snaps ಗಳನ್ನು ರಚಿಸಲಾಗುತ್ತದೆ. ಮತ್ತು Snapchat ಪೀಳಿಗೆಯು, ಪದಗಳಿಗಿಂತ ಚಿತ್ರಗಳೊಂದಿಗೆ ಸಂವಹನ ನಡೆಸಲು ಶೇಕಡಾ 150 ರಷ್ಟು ಹೆಚ್ಚು ಸಾಧ್ಯತೆ ಇರುವುದರಿಂದ, ನಾವು ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂವಹನ ನಡೆಸುವ ಮತ್ತು ಸಂಬಂಧವನ್ನು ಬೆಳೆಸುವ ವಿಧಾನಕ್ಕೆ ಕ್ಯಾಮೆರಾ ಇನ್ನಷ್ಟು ಕೇಂದ್ರಭಾಗವಾಗುತ್ತದೆ."
ಈ ದಿನದ ಪ್ರತಿಲಿಪಿಗಳು ಮತ್ತು ವೀಡಿಯೊಗಳನ್ನು ದಯವಿಟ್ಟು ಇಲ್ಲಿ ನೋಡಿ.