ಈ ವಾರ, ಜನರೇಟಿವ್ AI, ಕಂಪ್ಯೂಟರ್ ವಿಷನ್ ಮತ್ತು ವರ್ಧಿತ ವಾಸ್ತವಗಳಾದ್ಯಂತ ನಮ್ಮ ಮುಂಚೂಣಿಯ ಸಂಶೋಧನೆ ಮತ್ತು ಉತ್ಪನ್ನ ಆವಿಷ್ಕಾರದ ಮೇಲೆ ಬೆಳಕುಚೆಲ್ಲಲು ಕಂಪ್ಯೂಟರ್ ವಿಷನ್ ಮತ್ತು ಪ್ಯಾಟರ್ನ್ ಗುರುತಿಸುವಿಕೆ ಸಮಾವೇಶದಲ್ಲಿ (CVPR) Snap ಭಾಗಿಯಾಗಲಿದೆ.
Snap ನಲ್ಲಿ, ದಿಟ್ಟ ವಿಚಾರಗಳನ್ನು ಪಥಪರಿವರ್ತಕ ಆವಿಷ್ಕಾರಗಳಾಗಿ ಪರಿವರ್ತಿಸುವುದು ಹಾಗೂ ನಂತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನಮ್ಮ ಸಮುದಾಯವು ತಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸಲು ಬಳಸಬಹುದಾದ ಉತ್ಪನ್ನಗಳಾಗಿ ಮಾರ್ಪಡಿಸುವುದು ನಮ್ಮ ಧ್ಯೇಯವಾಗಿದೆ.
ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಪ್ರಗತಿಗಳು Snapchat, ನಮ್ಮ AR ಅಭಿವೃದ್ಧಿ ಟೂಲ್ Lens Studio, Spectacles, ಮತ್ತು ನಮ್ಮ ಹೊಸ AR ಎಂಟರ್‌ಪ್ರೈಸ್ ಸೇವೆಗಳು ಮತ್ತು AR ಮಿರರ್‌ಗಳಲ್ಲೂ ಕೂಡ Snap ವೈಶಿಷ್ಟ್ಯಗಳನ್ನು ರೂಪಿಸುತ್ತವೆ.
ಈ ಆವಿಷ್ಕಾರಕ ಉತ್ಪನ್ನಗಳು ವಿಶ್ವದ ಅತಿದೊಡ್ಡ AR ವೇದಿಕೆಗಳ ಪೈಕಿ ಒಂದಾಗಲು Snap ಅನ್ನು ಮುನ್ನಡೆಸಿವೆ: 750 ಮಿಲಿಯನ್‌ಗೂ ಅಧಿಕ ಜನರು ಪ್ರತಿ ತಿಂಗಳು Snapchat ಬಳಸುತ್ತಾರೆ, Lens Studio ದಲ್ಲಿ 300,000 ಕ್ಕೂ ಅಧಿಕ AR ಕ್ರಿಯೇಟರ್‌ಗಳು ಮತ್ತು ಡೆವಲಪರ್‌ಗಳು AR ಅನುಭವವನ್ನು ನಿರ್ಮಿಸಿದ್ದಾರೆ ಮತ್ತು ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲು ವ್ಯವಹಾರಗಳು ನಮ್ಮ ಪ್ರಾಯೋಜಿತ AR ಜಾಹೀರಾತುಗಳು ಮತ್ತು AR ಎಂಟರ್‌ಪ್ರೈಸ್ ಸೇವೆಗಳನ್ನು ಬಳಸುತ್ತವೆ.
CVPR ನಲ್ಲಿ Snap ಗೆ ಹಲೋ ಹೇಳಿ
Snap ತಂಡದ ಸದಸ್ಯರು CVPR ನಲ್ಲಿ ಈ ವರ್ಷ, ಸಮಾವೇಶದಲ್ಲಿ ಹೈಲೈಟ್ ಮಾಡಲಾಗಿರುವ ಒಂದನ್ನು ಸೇರಿದಂತೆ, ಹನ್ನೆರಡು ಸಂಶೋಧನಾ ವರದಿಗಳು, ಒಂದು ಟ್ಯುಟೋರಿಯಲ್ ಮತ್ತು ಎರಡು ಡೆಮೊಗಳನ್ನು ಪ್ರಸ್ತುತಪಡಿಸಲಿದ್ದಾರೆ. ಈ ವರ್ಷ ನಾವು 70% ಸಂಶೋಧನಾ ವರದಿ ಸ್ವೀಕೃತಿ ದರವನ್ನು ಸಾಧಿಸಲು ರೋಮಾಂಚಿತರಾಗಿದ್ದು, ಇದು ನಮ್ಮ ತಂಡವು ಸಾಧಿಸಿರುವ ಪ್ರಗತಿಗೆ ಪುರಾವೆಯಾಗಿದೆ.
CVPR ನಲ್ಲಿ ಐದು ಅಗ್ರ Snap ಸೆಷನ್‌ಗಳು ಈ ಕೆಳಗಿನಂತಿವೆ (ನೀವು ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ!):
ಮಂಗಳವಾರ, 20ನೇ ಜೂನ್
ಯಿಂಗ್‌ಹಾವ್ ಕ್ಷು, ಮೆಂಗ್ಲೀ ಚಾಯ್, ಝಿಫಾನ್ ಷಿ, ಸಿಡಾ ಪೆಂಗ್, ಇವಾನ್ ಸ್ಕೊರೊಖೊಡೋವ್, ಅಲಿಯಾಕ್ಸಂಡರ್ ಸಿಯಾರೊಹಿನ್, ಸೆಯುನ್ ಯಾಂಗ್, ಯುಜುನ್ ಶೆನ್, ಸಿನ್-ಯಿಂಗ್ ಲೀ, ಬೊಲೇ ಝೊವ್, ಸರ್ಗಿ ಟುಲ್ಯಾಕೊವ್
4:30 - 6:30pm | #26
ಈ ಕಾರ್ಯವು DisCoScene ಅನ್ನು ಪ್ರಸ್ತುತಪಡಿಸುತ್ತದೆ: ಉನ್ನತ ಗುಣಮಟ್ಟ ಮತ್ತು ನಿಯಂತ್ರಿಸಬಹುದಾದ ದೃಶ್ಯ ಸಿಂಥೆಸಿಸ್‌ಗಾಗಿ 3D-ಅರಿವಿನ ಜನರೇಟಿವ್ ಮಾಡೆಲ್.
ಮೇಲ್ವಿಚಾರಣೆಯಿಲ್ಲದ ಪ್ರಮಾಣಾತ್ಮಕ ಅನಿಮೇಶನ್
ಅಲಿಯಾಕ್ಸಂಡರ್ ಸಿಯಾರೊಹಿನ್, ವಿಲ್ಲಿ ಮೆನಾಪೇಸ್, ಇವಾನ್ ಸ್ಕೊರೊಖೊಡೋವ್, ಕೈಲಿ ಒಲ್ಸೆವಸ್ಕಿ, ಜಿಯಾನ್ ರೆನ್, ಸಿನ್-ಯಿಂಗ್ ಲೀ, ಮೆಂಗ್ಲಿ ಚಾಯ್, ಸರ್ಗಿ ಟುಲ್ಯಾಕೊವ್
4:30 -6:30pm | #50
ಈ ಸಂಶೋಧನಾ ವರದಿಯು ಕಠಿಣವಲ್ಲದ ವಿರೂಪಗೊಳಿಸಬಹುದಾದ ವಸ್ತುಗಳ ಮೇಲ್ವಿಚಾರಣೆಯಿಲ್ಲದ 3D ಅನಿಮೇಷನ್‌ಗಾಗಿ ಅಪೂರ್ವ ವಿಧಾನವನ್ನು ಪ್ರಸ್ತಾವನೆ ಮಾಡುತ್ತದೆ. ನಮ್ಮ ವಿಧಾನವು ವಸ್ತುಗಳ 3D ಸಂರಚನೆ ಮತ್ತು ಆಯಾಮಗಳನ್ನು ಕೇವಲ ಏಕ-ನೋಟದ RGB ವೀಡಿಯೊಗಳಿಂದ ತಿಳಿದುಕೊಳ್ಳುತ್ತದೆ ಮತ್ತು ಟ್ರ್ಯಾಕ್ ಮಾಡಬಹುದಾದ ಮತ್ತು ಅನಿಮೇಟ್ ಮಾಡಬಹುದಾದ ಶಬ್ದಪ್ರಕಾರವಾಗಿ ಅರ್ಥಪೂರ್ಣವಾಗಿರುವುದಕ್ಕೆ ಅವುಗಳನ್ನು ಡಿಕಂಪೋಸ್ ಮಾಡಬಲ್ಲದು.
3DAvatarGAN: ವೈಯಕ್ತಿಕಗೊಳಿಸಿದ ಎಡಿಟ್ ಮಾಡಬಹುದಾದ ಅವತಾರ್‌ಗಳಿಗಾಗಿ ಡೊಮೇನ್‌ಗಳನ್ನು ಸಂಬಂಧಪಡಿಸಿ
ರಮೀನ್ ಅಬ್ದಲ್, ಸಿನ್-ಯಿಂಗ್ ಲೀ, ಪೀಹಾವೊ ಝು, ಮೆಂಗ್ಲೀ ಚಾಯ್, ಅಲಿಸ್ಕಾಂಡರ್ ಸಿಯಾರೊಹಿನ್, ಪೀಟರ್ ವೊಂಕಾ, ಸರ್ಗಿ ಟುಲ್ಯಾಕೋವ್
4:30 -6:30pm | #40
ಈ ಕೊಡುಗೆಯು ಕಲಾತ್ಮಕ ಡೇಟಾಸೆಟ್‌ಗಳಲ್ಲಿ ವೈಯಯಕ್ತಿಕಗೊಳಿಸಿದ ಕಲಾತ್ಮಕ 3D ಅವತಾರ್‌ಗಳ ಜನರೇಟ್ ಮಾಡುವಿಕೆ, ಎಡಿಟಿಂಗ್ ಮತ್ತು ಅನಿಮೇಶನ್‌ಗೆ ಅನುಮತಿಸುತ್ತದೆ.
ಪರಿಣಾಮಕಾರತ್ವ: ನೈಜ-ಜಗತ್ತಿನ ವಿಷುವಲ್ ಡೇಟಾಗಾಗಿ ಪರಿಣಾಮಕಾರಿ ವಿವರಣೆಗಳನ್ನು ಕಲಿಯುವುದು
ಪಾನೊಸ್ ಅಕ್ಲಿಯೊಪ್ಟಾಸ್, ಮಾರ್ಕ್ಸ್ ಓವ್ಸ್‌ಜಾನಿಕೋವ್, ಲಿಯೊನಿಡಾಸ್ ಗುಯ್‌ಬಾಸ್, ಸರ್ಗಿ ಟುಲ್ಯಾಕೋವ್
4:30 -6:30PM | #240
ಈ ಕಾರ್ಯದಲ್ಲಿ, ನೀಡಲಾದ ದೃಶ್ಯಾತ್ಮಕ ಪ್ರಚೋದಕಕ್ಕೆ ಪರಿಣಾಮಕಾರಿ ಪ್ರತಿಕ್ರಿಯೆಯ ಹಿಂದಿನ ತರ್ಕವನ್ನು ಅಭಿವ್ಯಕ್ತಪಡಿಸಲು ಮಾಧ್ಯಮವಾಗಿ ಸಹಜ ಭಾಷೆಯನ್ನು ಬಳಸುವ ಮೂಲಕ ನೈಜ-ಜಗತ್ತಿನ ಚಿತ್ರಗಳು ಪ್ರಚೋದಿಸುವ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನಾವು ಅನ್ವೇಷಿಸುತ್ತೇವೆ.
ಬುಧವಾದ, 21ನೇ ಜೂನ್
ಮೊಬೈಲ್ ಸಾಧನಗಳಲ್ಲಿ ನೈಜ-ಸಮಯದ ನ್ಯೂರಲ್ ಲೈಟ್ ಫೀಲ್ಡ್
ಜುನ್ಲಿ ಕಾವೊ, ಹ್ಯುಯಾನ್ ವಾಂಗ್, ಪಾವ್ಲೊ ಕಿಮಿರಿಸ್, ವ್ಲಾಡಿಸ್ಲಾವ್ ಶಕ್ರಾಯ್, ಜು ಹು, ಯುನ್ ಫು, ಡೆನಿಸ್ ಮಾಕೊವಿಚುಕ್, ಸರ್ಗಿ ಟುಲ್ಯಾಕೋವ್, ಜಿಯಾನ್ ರೆನ್
10:30 AM -12:30 PM | #10
ಈ ಕಾರ್ಯದಲ್ಲಿ, ನ್ಯೂರಲ್ ರೆಂಡರಿಂಗ್‌ಗಾಗಿ ಮೊಬೈಲ್ ಸಾಧನಗಳಲ್ಲಿ ನೈಜ-ಸಮಯದಲ್ಲಿ ರನ್ ಆಗುವ ದಕ್ಷ ನೆಟ್‌ವರ್ಕ್ ಅನ್ನು ನಾವು ಪ್ರಸ್ತಾವನೆ ಮಾಡುತ್ತೇವೆ.
ನಮ್ಮ ತಂಡವನ್ನು ಭೇಟಿಯಾಗಲು ಬೂತ್ #923 ಗೆ ಭೇಟಿ ನೀಡಿ, ನಮ್ಮ Lens Studio, Spectacles ಮತ್ತು AR Mirror (AR ಮಿರರ್) ಅನ್ನು ಪ್ರಯತ್ನಿಸಿ ಹಾಗೂ Snap ನಲ್ಲಿ ಉದ್ಯೋಗಾವಕಾಶಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
Snap ತಂಡವನ್ನು ಸೇರಿಕೊಳ್ಳಿ
ಮೆಷಿನ್ ಲರ್ನಿಂಗ್, ಕಂಪ್ಯೂಟರ್ ವಿಷನ್ ಮತ್ತು ಸಹಜ ಭಾಷೆ ಪ್ರಕ್ರಿಯೆಗೊಳಿಸುವಿಕೆಯಲ್ಲಿ ಪರಿಣಿತಿ ಹೊಂದಿರುವ ಪ್ರತಿಭಾನ್ವಿತ ಸಂಶೋಧಕರು, ಎಂಜಿನಿಯರ್‌ಗಳು ಮತ್ತು ಇಂಟರ್ನಿಗಳನ್ನು ನಾವು ನೇಮಕ ಮಾಡಿಕೊಳ್ಳುತ್ತಿದ್ದೇವೆ. Snap ನಲ್ಲಿ ಪ್ರಸ್ತುತ ಮತ್ತು ಭವಿಷ್ಯದ ಕಂಪ್ಯೂಟರ್ ವಿಷನ್ ಮತ್ತು ಮೆಷಿನ್ ಲರ್ನಿಂಗ್ ಹುದ್ದೆಗಳ ಕುರಿತು ನಿಮ್ಮನ್ನು ಸಂಪರ್ಕಿಸಬೇಕು ಎಂದು ಬಯಸಿದಲ್ಲಿ ಸೈನ್ ಅಪ್ ಮಾಡಿ ಅಥವಾ ನಮ್ಮ ಎಲ್ಲ ಪೂರ್ಣಾವಧಿಯ ವೃತ್ತಿ ಅವಕಾಶಗಳ ಕುರಿತು careers.snap.com ನಲ್ಲಿ ಪರಿಶೀಲಿಸಿ.
ನಿಮ್ಮನ್ನು CVPR ನಲ್ಲಿ ಭೇಟಿಯಾಗಲು ನಾವು ಕಾತರರಾಗಿದ್ದೇವೆ!