375 ಮಿಲಿಯನ್‌ಗೂ ಅಧಿಕ ದೈನಂದಿನ ಸಕ್ರಿಯ ಬಳಕೆದಾರರೊಂದಿಗೆ, ಕಲಾವಿದರು ಮತ್ತು ಕ್ರಿಯೇಟರ್‌ಗಳು ತಮ್ಮ ಸಂಗೀತವನ್ನು ಜಾಗತಿಕವಾಗಿ ಹಂಚಿಕೊಳ್ಳಲು Snapchat ಧ್ವನಿಗಳು, ಶಕ್ತಿಶಾಲಿ ವಿತರಣೆಯ ಟೂಲ್ ಅನ್ನು ಒದಗಿಸುತ್ತದೆ. ಅಭಿಮಾನಿಗಳು ಹೊಸ ಸಂಗೀತವನ್ನು ಹುಡುಕಲು ಮತ್ತು ಸ್ಟ್ರೀಮಿಂಗ್ ಸೇವೆಗಳಲ್ಲಿ ಆಲಿಸಲು ನೆರವಾಗುವುದಕ್ಕಾಗಿ ಕಲಾವಿದರಿಗೆ ಪರಿಣಾಮಕಾರಿ ವಿಧಾನವನ್ನು ಧ್ವನಿಗಳು ಒದಗಿಸುತ್ತದೆ, ಇದೇ ವೇಳೆ ವೇದಿಕೆಯಲ್ಲಿನ ಕಂಟೆಂಟ್ ಅನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಇನ್ನಷ್ಟು ವಿನೋದಮಯವಾಗಿಸುತ್ತದೆ ಮತ್ತು ತಲ್ಲೀನಗೊಳಿಸುವ ಅನುಭವ ಒದಗಿಸುತ್ತದೆ.
ಯುನೈಟೆಡ್ ಮಾಸ್ಟರ್ಸ್ ಮತ್ತು ಎರಡು ಹೊಸ ಯುರೋಪಿಯನ್ ಕಲೆಕ್ಷನ್ ಸೊಸೈಟಿಗಳೊಂದಿಗೆ Snapchat ನ ಹೊಸ ಸಂಗೀತ ಪರವಾನಗಿಯ ಒಪ್ಪಂದಗಳೊಂದಿಗೆ ಧ್ವನಿಗಳು ಲೈಬ್ರರಿ ವಿಸ್ತರಣೆಯಾಗುತ್ತಿದೆ ಎಂದು ಪ್ರಕಟಿಸಲು, ಇಂದು ನಾವು ಹರ್ಷಿತರಾಗಿದ್ದೇವೆ. ಈ ಪಾಲುದಾರಿಕೆಗಳು, Snapchat ಧ್ವನಿಗಳು ಲೈಬ್ರರಿಗೆ ಸ್ಥಳೀಯ ಕಲಾವಿದರ ಸಂಗೀತವನ್ನು ಸೇರಿಸಲಿವೆ, ಈ ಮೂಲಕ Snapchatter ಗಳು ಇನ್ನಷ್ಟು ಆವಿಷ್ಕಾರ ಮಾಡಲು ಹಾಗೂ Snapchat ನ ವೇದಿಕೆಯಾದ್ಯಂತ ಹಾಗೂ ವರ್ಧಿತ ವಾಸ್ತವ ಲೆನ್ಸ್‌ಗಳಂತಹ ಕ್ರಿಯೇಟಿವ್ ಟೂಲ್ಸ್‌ನಲ್ಲಿ ತಮ್ಮ ಸಂದೇಶಗಳು ಮತ್ತು Snap ಗಳಿಗೆ ಪರವಾನಗಿಯಿರುವ ಸಂಗೀತವನ್ನು ಸುಲಭವಾಗಿ ಸೇರಿಸಲು ಅವಕಾಶ ಕಲ್ಪಿಸುತ್ತದೆ.
ಈ ತಿಂಗಳು ಈ ಕೆಳಗಿನ ಸಂಸ್ಥೆಗಳಿಂದ ಪರವಾನಗಿ ಪಡೆದ ಸಂಗೀತವು ಧ್ವನಿಗಳಲ್ಲಿ ಲಭ್ಯವಿರಲಿದೆ:
ನೆದರ್‌ಲ್ಯಾಂಡ್ಸ್: BUMA/STEMRA
ಸ್ವಿಜರ್‌ಲ್ಯಾಂಡ್: SUISA (ಸ್ವಿಸ್ ಕೋಆಪರೇಟಿವ್ ಸೊಸೈಟಿ ಆಫ್ ಮ್ಯೂಸಿಕ್ ಆಥರ್ಸ್ ಆ್ಯಂಡ್ ಪಬ್ಲಿಷರ್ಸ್)
Snapchat ಪ್ರಸ್ತುತ, ಯುನಿವರ್ಸಲ್ ಮ್ಯೂಸಿಕ್ ಗ್ರೂಪ್, ಯುನಿವರ್ಸಲ್ ಮ್ಯೂಸಿಕ್ ಪಬ್ಲಿಶಿಂಗ್ ಗ್ರೂಪ್, ಸೋನಿ ಮ್ಯೂಸಿಕ್ ಎಂಟರ್‌ಟೇನ್‌ಮೆಂಟ್, ಸೋನಿ ಮ್ಯೂಸಿಕ್ ಪಬ್ಲಿಶಿಂಗ್, ವಾರ್ನರ್ ಮ್ಯೂಸಿಕ್ ಗ್ರೂಪ್, ವಾರ್ನರ್ ಚಾಪೆಲ್, ಕೊಬಾಲ್ಟ್, ಡಿಸ್ಟ್ರೊಕಿಡ್, ಬಿಎಂಜಿ, ಎನ್‌ಎಂಪಿಎ ಪಬ್ಲಿಶರ್ ಮೆಂಬರ್ಸ್, ಮರ್ಲಿನ್, ಎಂಪೈರ್ ಡಿಸ್ಟ್ರಿಬ್ಯೂಷನ್ ಮತ್ತು 9000 ಕ್ಕೂ ಅಧಿಕ ಸ್ವತಂತ್ರ ಸಂಗೀತ ಪ್ರಕಾಶಕರು ಮತ್ತು ಲೇಬಲ್‌ಗಳು ಸೇರಿದಂತೆ, ಜಗತ್ತಿನಾದ್ಯಂತ ಪ್ರಮುಖ ಹಾಗೂ ಸ್ವತಂತ್ರ ರೆಕಾರ್ಡ್ ಲೇಬಲ್‌ಗಳು ಮತ್ತು ಸಂಗೀತ ಪ್ರಕಾಶಕರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ.