ಅಕ್ಟೋಬರ್ 19, 2021
ಅಕ್ಟೋಬರ್ 19, 2021

Google ನ Pixel 6 ಮತ್ತು Pixel 6 Pro ನ ಲಾಕ್ ಸ್ಕ್ರೀನ್‌ನಲ್ಲಿರುವ Snapchat ಕ್ಯಾಮರಾಗೆ ಹಲೋ ಹೇಳಿ

ಮೊದಲ ಬಾರಿಗೆ, ನಾವು Snapchat ಕ್ಯಾಮರಾವನ್ನು ಫೋನ್ ಲಾಕ್ ಸ್ಕ್ರೀನ್‌ನಿಂದ ನೇರವಾಗಿ ಪ್ರವೇಶಿಸುವಂತೆ ಮಾಡುತ್ತಿದ್ದೇವೆ. Snap ಮಾಡಲು ತ್ವರಿತ ಟ್ಯಾಪ್ ಮಾಡಿ ಮೂಲಕ, ಕ್ಷಣಗಳು ಕಣ್ಮರೆಯಾಗುವ ಮೊದಲು ನೀವು ಅವುಗಳನ್ನು ತ್ವರಿತವಾಗಿ ಸೆರೆಹಿಡಿಯಬಹುದು.

ನಮ್ಮ ಕ್ಯಾಮೆರಾ ಸುತ್ತ ಆವಿಷ್ಕಾರ ಮಾಡುವ ಮತ್ತು ಪ್ರತಿದಿನದ ಕ್ಷಣಗಳು ನಡೆಯುತ್ತಿರುವಂತೆ ಅವುಗಳನ್ನು Snap ಮಾಡುವುದಕ್ಕೆ ನಮ್ಮ ಸಮುದಾಯಕ್ಕೆ ಸಹಾಯ ಮಾಡುವ ಮಾರ್ಗಗಳಿಗಾಗಿ ನಾವು ಯಾವಾಗಲೂ ಹುಡುಕುತ್ತಿರುತ್ತೇವೆ. ಇದೇ ಕಾರಣಕ್ಕಾಗಿ Google ನ Pixel 6 ಮತ್ತು Pixel 6 Pro ಗಾಗಿ 'Snap ಮಾಡಲು ತ್ವರಿತ ಟ್ಯಾಪ್ ಮಾಡಿ' ಅನ್ನು ಪ್ರಕಟಿಸಲು ರೋಮಾಂಚಿತರಾಗಿದ್ದೇವೆ.

ಇದೇ ಮೊದಲ ಬಾರಿಗೆ, ಫೋನ್‌ನ ಲಾಕ್‌ ಸ್ಕ್ರೀನ್‌ನಿಂದ Snapchat ಕ್ಯಾಮೆರಾವನ್ನು ನಾವು ಲಭ್ಯವಾಗಿಸುತ್ತಿದ್ದೇವೆ. Snap ಮಾಡಲು ತ್ವರಿತ ಟ್ಯಾಪ್ ಮಾಡಿ ಜೊತೆಗೆ, ಕ್ಷಣಗಳು ಮರೆಯಾಗುವುದಕ್ಕೆ ಮುನ್ನ ನೀವು ಅವುಗಳನ್ನು ಸೆರೆಹಿಡಿಯಬಹುದು.

ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿವರ ಇಲ್ಲಿದೆ: ನಿಮ್ಮ ಫೋನ್‌ನ ಹಿಂಬದಿಯನ್ನು ಟ್ಯಾಪ್ ಮಾಡುವ ಮೂಲಕ, ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಬೇಕಾದ ಅಗತ್ಯವಿಲ್ಲದೆ, ನಿಮ್ಮ ಲಾಕ್‌ಸ್ಕ್ರೀನ್‌ನಿಂದ ನೇರವಾಗಿ ನೀವು Snap ಗಳನ್ನು ಸೃಷ್ಟಿಸಬಹುದು ಮತ್ತು ಲೆನ್ಸ್‌ಗಳೊಂದಿಗೆ ಕೈಚಳಕ ತೋರಿಸಬಹುದು. ಹಂಚಿಕೊಳ್ಳಲು ಒಂದು Snap ಸಿದ್ಧವಾದಾಗ, ಪೂರ್ಣ ಆ್ಯಪ್ ಅನುಭವವನ್ನು ನೇರವಾಗಿ ಅನ್‌ಲಾಕ್ ಮಾಡಲು ನಿಮ್ಮ ಫೋನ್‌ನ ಲಾಕ್‌ ಸ್ಕ್ರೀನ್‌ಗೆ ಲಾಗ್ ಇನ್ ಮಾಡಿ.

ಇಷ್ಟೇ ಅಲ್ಲ ಇನ್ನೂ ಇದೆ:ಅನನ್ಯ ವರ್ಧಿತ ವಾಸ್ತವಿಕತೆ ಲೆನ್ಸ್‌ಗಳನ್ನು ಲಾಂಚ್ ಮಾಡಲು ಹಾಗೂ Pixel 6 ಮತ್ತು 6 Pro ನಲ್ಲಿ Snapchat ನ ಕ್ಯಾಮೆರಾ ಮತ್ತು ಚಾಟ್‌ನ ಒಳಗಡೆಯೇ, ಅಲ್ಟ್ರಾ ವೈಡ್ ಆ್ಯಂಗಲ್ ಮತ್ತು ಲೈವ್ ಅನುವಾದದಂತಹ Google ನ ಕೆಲವು Pixel ವೈಶಿಷ್ಟ್ಯಗಳನ್ನು ಬೆಂಬಲಿಸಲು, ನಾವು Google ಜೊತೆ ಕೈ ಜೋಡಿಸುತ್ತಿದ್ದೇವೆ. ನೀವು ವೈಡ್ ಆ್ಯಂಗಲ್ Snap ಗಳನ್ನು ತೆಗೆದುಕೊಳ್ಳಬಹುದು ಮತ್ತು ನಿಮ್ಮ ಸ್ನೇಹಿತರ ಜೊತೆ 10 ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಹುದು, ಮತ್ತು ಸಂಭಾಷಣೆಗಳನ್ನು ನೈಜ ಸಮಯದಲ್ಲಿ ಅನುವಾದಿಸಬಹುದು.

Snap ಮಾಡಲು ತ್ವರಿತ ಟ್ಯಾಪ್ ಮಾಡಿ ಜೊತೆಗೆ ಈ ವೈಶಿಷ್ಟ್ಯಗಳನ್ನು, ಮುಂಬರುವ ತಿಂಗಳುಗಳಲ್ಲಿ ಲಾಂಚ್ ಮಾಡಲಾಗುತ್ತದೆ. ವಿಶ್ವಾದ್ಯಂತದ Snapchatter ಗಳಿಗೆ ಇನ್ನೂ ಹೆಚ್ಚಿನ ಅನುಭವವನ್ನು ನೀಡುವುದಕ್ಕಾಗಿ ನಮ್ಮ ಮೊಬೈಲ್ ಪಾಲುದಾರರೊಂದಿಗೆ ಕೆಲಸ ಮಾಡಲು ನಾವು ಅತ್ಯಂತ ರೋಮಾಂಚಿತರಾಗಿದ್ದೇವೆ.