Sound On, Volume Up: Introducing Sounds For Your Snaps
Today, we launched Sounds, a new feature to add music and your own creations to your Snaps. Music makes video creations and communication more expressive, and offers a personal way to recommend music to your closest friends.

ಇಂದು, ನಿಮ್ಮ Snap ಗಳಿಗೆ ಸಂಗೀತ ಮತ್ತು ನಿಮ್ಮ ಸ್ವಂತ ರಚನೆಗಳನ್ನು ಸೇರಿಸಲು ಹೊಸ ವೈಶಿಷ್ಟ್ಯವಾದ ಧ್ವನಿಗಳು ಅನ್ನು ನಾವು ಪ್ರಾರಂಭಿಸಿದ್ದೇವೆ. ನಮ್ಮ ಕ್ಯಾಟಲಾಗ್ ಜಸ್ಟಿನ್ ಬೀಬರ್ ಮತ್ತು ಬೆನ್ನಿ ಬ್ಲಾಂಕೊ ಅವರ ಹೊಸ ಹಾಡು "ಲೋನ್ಲಿ"ಯ ವಿಶೇಷ ಪೂರ್ವವೀಕ್ಷಣೆಯನ್ನು ಒಳಗೊಂಡಿದೆ.
ಈಗ, ವಿಶ್ವಾದ್ಯಂತ iOS ನಲ್ಲಿನ Snapchatter ಗಳು ಉದಯೋನ್ಮುಖ ಮತ್ತು ಪ್ರಸಿದ್ಧ ಕಲಾವಿದರಿಂದ ಅವರ Snap ಗಳಿಗೆ (ಸೆರೆಹಿಡಿಯುವ ಮೊದಲು ಅಥವಾ ನಂತರ) ಪ್ರಬಲ ಮತ್ತು ಕ್ಯುರೇಟೆಡ್ ಸಂಗೀತ ಕ್ಯಾಟಲಾಗ್ ಅನ್ನು ಸೇರಿಸಬಹುದು. ಸಂಗೀತವು ವೀಡಿಯೊ ರಚನೆ ಮತ್ತು ಸಂವಹನವನ್ನು ಹೆಚ್ಚು ಅಭಿವ್ಯಕ್ತಗೊಳಿಸುತ್ತದೆ ಮತ್ತು ಆಪ್ತ ಸ್ನೇಹಿತರಿಗೆ ಸಂಗೀತವನ್ನು ಶಿಫಾರಸು ಮಾಡಲು ವೈಯಕ್ತಿಕಗೊಳಿಸಿದ ಮಾರ್ಗವನ್ನು ಒದಗಿಸುತ್ತದೆ. ಪ್ರತಿದಿನ ಸರಾಸರಿ 4 ಬಿಲಿಯನ್ Snap ಗಳನ್ನು ರಚಿಸಲಾಗುತ್ತದೆ *.
ಧ್ವನಿಗಳು ಜೊತೆಗೆ ಒಂದು Snap ಅನ್ನು ನೀವು ಸ್ವೀಕರಿಸಿದಾಗ, ಆಲ್ಬಮ್ ಕವರ್, ಹಾಡಿನ ಹೆಸರು ಮತ್ತು ಕಲಾವಿದರ ಹೆಸರನ್ನು ವೀಕ್ಷಿಸಲು ನೀವು ಸ್ವೈಪ್ ಮಾಡಬಹುದು. "ಈ ಹಾಡನ್ನು ಪ್ಲೇ ಮಾಡಿ" ಲಿಂಕ್ ನಿಮ್ಮ ನೆಚ್ಚಿನ ಅಂದರೆ Spotify, Apple Music, ಮತ್ತು SoundCloud ಸೇರಿದಂತೆ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಪೂರ್ಣ ಹಾಡನ್ನು ಕೇಳಲು ನಿಮಗೆ ಅನುಮತಿಸುತ್ತದೆ.
Snap ಈಗ ಪ್ರಮುಖ ಮತ್ತು ಸ್ವತಂತ್ರ ವಿತರಕರು ಮತ್ತು ರೆಕಾರ್ಡ್ ಕಂಪನಿಗಳೊಂದಿಗೆ ಬಹು-ವರ್ಷದ ಒಪ್ಪಂದಗಳನ್ನು ಹೊಂದಿದೆ, ಇದರಲ್ಲಿ ವಾರ್ನರ್ ಮ್ಯೂಸಿಕ್ ಗ್ರೂಪ್, ಮೆರ್ಲಿನ್ (ಸ್ವತಂತ್ರ ರೆಕಾರ್ಡ್ ಕಂಪನಿಗಳ ಸದಸ್ಯರನ್ನು ಒಳಗೊಂಡಂತೆ), NMPA, ಯೂನಿವರ್ಸಲ್ ಮ್ಯೂಸಿಕ್ ಪಬ್ಲಿಷಿಂಗ್ ಗ್ರೂಪ್, ವಾರ್ನರ್ ಚಾಪೆಲ್ ಮ್ಯೂಸಿಕ್, ಕೋಬಾಲ್ಟ್ ಮತ್ತು BMG ಮ್ಯೂಸಿಕ್ ಪಬ್ಲಿಷಿಂಗ್ ಸೇರಿವೆ.
ಇದಲ್ಲದೆ, ಜಸ್ಟಿನ್ ಬೀಬರ್ ಮತ್ತು ಬೆನ್ನಿ ಬ್ಲಾಂಕೊ ಅವರ ಹೊಸ ಹಾಡು “ಲೋನ್ಲಿ” ಯನ್ನು ಇಂದು Snapchat ನ ವೈಶಿಷ್ಟ್ಯಪೂರ್ಣ ಧ್ವನಿಗಳು ಪಟ್ಟಿಯಲ್ಲಿ ಅನನ್ಯವಾಗಿ ಪ್ರದರ್ಶಿಸಲಾಗುತ್ತದೆ. Snapchatter ಗಳು ತಮ್ಮ ಹೊಸ ಲಾವಣಿಗಳನ್ನು ಕಲಾತ್ಮಕ Snap ಗಳನ್ನು ರಚಿಸಲು, ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮತ್ತು ತಮ್ಮ ನೆಚ್ಚಿನ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಪೂರ್ಣ ಹಾಡುಗಳನ್ನು ಡೌನ್‌ಲೋಡ್ ಮಾಡಲು ಲಿಂಕ್‌ಗಳನ್ನು ಉಳಿಸಬಹುದು.
ಸಂಗೀತವಷ್ಟೇ ಅಲ್ಲದೆ, Snapchat ಬಳಕೆದಾರರು ತಮ್ಮದೇ ಆದ ಧ್ವನಿಗಳು ಅನ್ನು ರಚಿಸುವ ಮತ್ತು Snap ಗಳಿಗೆ ಸೇರಿಸುವ ಸಾಮರ್ಥ್ಯವನ್ನೂ ನಾವು ಪರೀಕ್ಷಿಸಿದ್ದೇವೆ. ಇದು ಮುಂದಿನ ತಿಂಗಳುಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ.
*Snap Inc.ಇಂಟರ್ನಲ್ ಡೇಟಾ Q1 2020.