ಆಗಸ್ಟ್ 13, 2019
ಆಗಸ್ಟ್ 13, 2019

Introducing Spectacles 3

Today we’re excited to introduce Spectacles 3, the latest version of Spectacles sunglasses with dual cameras designed to capture the world in 3D.

ಜಗತ್ತನ್ನು 3D ಯಲ್ಲಿ ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿರುವ ಡ್ಯುಯಲ್ ಕ್ಯಾಮೆರಾಗಳೊಂದಿಗೆ Spectacles ಸನ್‌ಗ್ಲಾಸ್‌ಗಳ ಇತ್ತೀಚಿನ ಆವೃತ್ತಿಯಾದ, Spectacles 3 ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ.

Spectacles 3 ಅನ್ನು ಗಟ್ಟಿಮುಟ್ಟಾದ, ಹಗುರ ಸ್ಟೀಲ್ ಫ್ರೇಮ್ ಮತ್ತು ವೃತ್ತಾಕಾರದ ಲೆನ್ಸ್‌ಗಳಿಂದ ನಿರ್ಮಿಸಲಾಗಿದೆ. ಫ್ರೇಮ್‌ನ ಎರಡು ಬದಿಗಳಲ್ಲಿರುವ ಎರಡು HD ಕ್ಯಾಮರಾಗಳು ನಿಮ್ಮ ಕಣ್ಣುಗಳು ಮಾಡುವ ರೀತಿಯಲ್ಲಿ ಆಳ ಮತ್ತು ಆಯಾಮವನ್ನು ಸೆರೆಹಿಡಿಯುತ್ತವೆ, ಮತ್ತು ನಿಮ್ಮ Snap ಗಳನ್ನು ಸುಧಾರಿಸಲು ಹೊಸ ವರ್ಧಿತ ರಿಯಾಲಿಟಿ ಕ್ರಿಯೇಟಿವ್ ಟೂಲ್‌ಗಳನ್ನು ಸಂಚಾಲಿತಗೊಳಿಸುತ್ತವೆ.

ಹೊಸ 3D ಪರಿಣಾಮಗಳ ಸೂಟ್‌ನೊಂದಿಗೆ ನಿಮ್ಮ ಮೆಚ್ಚಿನ ಕ್ಷಣಗಳನ್ನು ಮರುಕಲ್ಪನೆ ಮಾಡಿಕೊಳ್ಳುವುದು ಸುಲಭವಾಗಿದೆ. ನಿಮ್ಮ ಸ್ವಂತ ಮಾಂತ್ರಿಕ ಕ್ಷಣ ರಚಿಸಿ, ಅಥವಾ ಕೇವಲ ಒಂದು ಸ್ವೈಪ್‌ನೊಂದಿಗೆ ಹೊಸ ಲೈಟಿಂಗ್, ಭೂದೃಶ್ಯಗಳು, ಮತ್ತು ಇತರ ಮಾಂತ್ರಿಕ ಪರಿಣಾಮಗಳನ್ನು ಸೇರಿಸಿ.

ನಿಮ್ಮ ಸ್ವಂತದ ನೆನಪಿಗಳಲ್ಲಿ ಮುಳುಗಿಹೋಗಲು ಅಥವಾ ಇನ್ನೊಬ್ಬರ ದೃಷ್ಟಿಕೋನವನ್ನು ಆನಂದಿಸಲು ಸೇರಿಸಿರುವ 3D ವೀವರ್ ಅನ್ನು ಬಳಸಿ.

Spectacles 3 ಈ ಚಳಿಗಾಲದಲ್ಲಿ ಬಿಡುಗಡೆಯಾಗಲಿದೆ ಮತ್ತು Spectacles.com ನಲ್ಲಿ ಈಗ ಪ್ರಿ-ಆರ್ಡರ್‌ ಮಾಡುವುದಕ್ಕೆ ಲಭ್ಯವಿದೆ.

ಹೊಸ Spectacles ಅನ್ನು ನೀವೂ ನಮ್ಮಷ್ಟೇ ಇಷ್ಟಪಡುತ್ತೀರಿ ಎಂದು ನಾವು ಭಾವಿಸುತ್ತೇವೆ!

Back To News