ಸೆಪ್ಟೆಂಬರ್ 17, 2024
ಸೆಪ್ಟೆಂಬರ್ 17, 2024

SPS 2024 | ಕ್ರಿಯೇಟರ್‌ಗಳಿಗೆ ಸಮುದಾಯ ನಿರ್ಮಿಸಲು ಮತ್ತು ಯಶಸ್ಸು ಕಂಡುಕೊಳ್ಳಲು ಹೊಸ ಮಾರ್ಗಗಳು

Snapchat ನಲ್ಲಿ ಸಂಬಂಧಗಳೇ ಪ್ರತಿ ಅನುಭವದ ಮೂಲತತ್ವ. ಆದ್ದರಿಂದ ಸ್ವಾಭಾವಿಕವಾಗಿ, ಸಂಬಂಧಗಳು ನಮ್ಮ ಕಂಟೆಂಟ್ ಅನುಭವದ ಕೇಂದ್ರಬಿಂದು– ನೀವು Snaps ಮಾಡುವವರಾಗಿರಲಿ, ಅಥವಾ ಸಮುದಾಯದವರು ಸೃಷ್ಟಿಸಿದ ವೀಡಿಯೊಗಳನ್ನು ನೋಡುವವರಾಗಿರಲಿ.

ಕಳೆದ ವರ್ಷಗಳಲ್ಲಿ, ಸಾರ್ವಜನಿಕವಾಗಿ ಪೋಸ್ಟ್‌ ಮಾಡುವ ಕ್ರಿಯೇಟರ್‌ಗಳ ಸಂಖ್ಯೆ ಮೂರು ಪಟ್ಟಿಗಿಂತ ಹೆಚ್ಚಾಗಿದೆ, ಕ್ರಿಯೇಟರ್‌ಗಳು ತಮ್ಮ ಸ್ಟೋರಿಗಳಲ್ಲಿ ಸರಿಸುಮಾರು 10 ಶತಕೋಟಿ Snaps ಗಳನ್ನು ಹಂಚಿಕೊಳ್ಳುತ್ತಿದ್ದು, 6 ಟ್ರಿಲಿಯನ್‌ಗಿಂತ ಹೆಚ್ಚು ವ್ಯೂ ಪಡೆಯುತ್ತಿದ್ದಾರೆ.1ಕ್ರಿಯೇಟರ್‌ಗಳಿಗೆ ಸ್ನೇಹಿತರೊಂದಿಗೆ, ಅಭಿಮಾನಿಗಳೊಂದಿಗೆ ಸಂಬಂಧ ಸುಗಮಗೊಳಿಸಲು, ಸ್ನಾಪ್ಸ್ ಸೃಷ್ಟಿ ಮಾಡಲು ಮತ್ತು ತಾವಾಗಿಯೇ ರಿವಾರ್ಡ್‌ ಪಡೆಯಲು ಸಹಾಯಕವಾಗುವಂತೆ ಇದನ್ನು ಹಿಂದಿನದಕ್ಕಿಂತ ಸುಲಭಗೊಳಿಸುವುದನ್ನು ನಾವು ಮುಂದುವರೆಸುತ್ತಿದ್ದೇವೆ.

ಕ್ರಿಯೇಟರ್‌ಗಳಿಗೆ ತಮ್ಮ ಸಮುದಾಯವನ್ನು ವೃದ್ಧಿಸಿಕೊಳ್ಳಲು ಹೊಸ ಟೂಲ್‌ಗಳು

ಹೊಸ ಸರಳೀಕೃತ ಪ್ರೊಫೈಲ್‌ ವಿನ್ಯಾಸವು Snapchatter 16 ಮತ್ತು ಹಳೆಯದಾದ ವರ್ಷನ್‌ಗಳಲ್ಲಿ ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಖಾತೆಗಳ ನಡುವೆ ಸುಲಭವಾಗಿ ವರ್ಗಾವಣೆಗೊಳ್ಳುವ ಅವಕಾಶ ಕಲ್ಪಿಸುತ್ತದೆ. ಅವರು ತಮ್ಮ ನೈಜ ಸ್ನೇಹಿತರ ಜೊತೆ ಸಂಪರ್ಕ ಹೊಂದಲು ಬಯಸಿದರೆ, - ವೈಯಕ್ತಿಕ. ಮತ್ತು ಅವರು ಹೆಚ್ಚು ವಿಸ್ತಾರವಾದ ಪ್ರೇಕ್ಷಕರನ್ನು ತಲುಪಲು ಆಯ್ಕೆಮಾಡಿಕೊಂಡರೆ – ಸಾರ್ವಜನಿಕ. 16 ಮತ್ತು 17 ವರ್ಷ ವಯಸ್ಸಿನ Snapchatter ಗಳಿಗೆ, ಅತಿ ಹೆಚ್ಚಿನ ಗೌಪ್ಯತೆ ಸೆಟ್ಟಿಂಗ್‌ಗಳು ಡೀಫಾಲ್ಟ್‌ ಆಗಿರುತ್ತವೆ. 

ಕ್ರಿಯೇಟರ್‌ಗಳು ಹೊಸ ವೀಕ್ಷಕರಿಗೆ ತಾವು ಕ್ರಿಯೇಟ್‌ ಮಾಡಿದ Snaps ಗಳ ಪರಿಕಲ್ಪನೆ ನೀಡಲು ತಮ್ಮ ನೆಚ್ಚಿನ Snaps ಗಳನ್ನು ತಮ್ಮ ಸಾರ್ವಜನಿಕ ಪ್ರೊಫೈಲ್‌ನ ಮೇಲ್ಭಾಗದಲ್ಲಿ ಪಿನ್‌ ಮಾಡುವ ಮೂಲಕ ಸಾರ್ವಜನಿಕ ಪ್ರೊಫೈಲ್‌ಗಳನ್ನು ಈಗ ಇನ್ನಷ್ಟು ಕಸ್ಟ್‌ಮೈಸ್‌ ಮಾಡಿಕೊಳ್ಳಲು ಸಮರ್ಥರಾಗಿದ್ದಾರೆ.

ಟೆಂಪ್ಲೆಟ್‌ಗಳು ಮೆಮೋರಿ ಮತ್ತು ಕ್ಯಾಮೆರಾ ರೋಲ್‌ಗಳಿಂದ ಚಿತ್ರ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಅತ್ಯುತ್ತಮ Snaps ಅನ್ನು ಸೃಷ್ಟಿಸಿ ಹಂಚಿಕೊಳ್ಳುವುದನ್ನು ಸುಲಭವಾಗಿಸುತ್ತವೆ. ನೀವು ಸಿದ್ಧವಾಗಿದ್ದಾಗ ಜೀವನದಲ್ಲೊಮ್ಮೆ ಅನುಭವಿಸಿದ ರಜಾ ಕ್ಷಣಗಳ ಮೆಲುಕನ್ನು ಪೋಸ್ಟ್‌ ಮಾಡಿ ಮತ್ತು ಆ ಕ್ಷಣವನ್ನು ಸವಿಯಿರಿ. ಅತ್ಯುತ್ತಮ ಮತ್ತು ಉದಯೋನ್ಮುಖ ಕಲಾವಿದರ ಸಂಗೀತ ಮತ್ತು ಸೌಂಡ್‌ಟ್ರ್ಯಾಕ್‌ನೊಂದಿಗೆ ಟೆಂಪ್ಲೆಟ್‌ಗಳು ಲಭ್ಯವಿವೆ.

ಪ್ರತಿದಿನ, Snapchat ನಲ್ಲಿ ಕ್ರಿಯೇಟರ್‌ಗಳು ಮತ್ತು ಅವರ ಅಭಿಮಾನಿಗಳ ನಡುವೆ ಸುಮಾರು 15 ಶತಕೋಟಿ ಸಂವಹನಗಳು ನಡೆಯುತ್ತವೆ. 2

ರೆಪ್ಲಿಕ್ಸ್‌ ಮತ್ತು ಕೋಟಿಂಗ್‌ ಫೀಚರ್‌ಗಳೊಂದಿಗೆ, Snapchatter ಗಳು ನೇರವಾಗಿ ಪ್ರತಿಕ್ರಿಯಿಸಬಹುದು, ಅಥವಾ ಕ್ರಿಯೇಟರ್‌ Snapನಲ್ಲಿ ಸಾರ್ವಜನಿಕವಾಗಿ ಕಾಮೆಂಟ್‌ ಮಾಡಬಹುದು. ಈಗ, ಕ್ರಿಯೇಟರ್‌ಗಳು ಆ ಸಂದೇಶವನ್ನು ಫೋಟೋ ಮತ್ತು ವಿಡಿಯೋ ಪ್ರತಿಕ್ರಿಯೆಗೆ ಬದಲಾಯಿಸಬಹುದು, ಇದು ತಮ್ಮ ಪ್ರೇಕ್ಷಕರೊಂದಿಗೆ ಆಳವಾಗಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಬಹುದು.

ಯಶಸ್ಸು ಕಂಡುಕೊಳ್ಳಲು ಕ್ರಿಯೇಟರ್‌ಗಳಿಗೆ ಇನ್ನಷ್ಟು ಮಾರ್ಗಗಳು

ಕ್ರಿಯೇಟರ್‌ಗಳು ಮತ್ತು ಬ್ರಾಂಡ್‌ಗಳ ನಡುವೆ ಪಾಲುದಾರಿಕೆಯನ್ನು ತ್ವರಿತಗೊಳಿಸಲು ನಮ್ಮ Snap Star Collab Studio ಸಹಾಯ ಮಾಡುತ್ತದೆ. ನಮ್ಮಭವಿಷ್ಯದ ಪಾಲುದಾರರು ಮತ್ತು ಹೊಸ ಸೇವೆಯ ಟೂಲ್‌ಗಳ ಮೂಲಕ, ಕ್ರಿಯೇಟರ್‌ಗಳು ಈಗ ತಮ್ಮ ಕಾರ್ಯಕ್ರಮಗಳು ಮತ್ತು ಜನಸಂಖ್ಯಾ ಡೇಟಾವನ್ನು ಬ್ರಾಂಡ್‌ಗಳಿಗೆ ತೋರಿಸಲು ಆಯ್ಕೆಮಾಡಬಹುದು. ಮತ್ತು ಶೀಘ್ರದಲ್ಲಿ Snapchat ನಲ್ಲಿ ಜಾಹೀರಾತುದಾರರೊಂದಿಗೆ ಈ ಮಾಹಿತಿಯನ್ನು ನೇರವಾಗಿ ಹಂಚಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ.

ತಮ್ಮ ಅಧಿಕೃತ ಸ್ಟೋರಿಗಳು ಮತ್ತು ಸ್ಪಾಟ್‌ಲೈಟ್‌ಗಾಗಿ ಕ್ರಿಯೇಟರ್‌ಗಳು ಆಗಾಗ ಪ್ರತಿಫಲ ಪಡೆಯಬಹುದು. ಅಲ್ಲದೆ, ಲೆನ್ಸ್‌ ಮತ್ತು ಧ್ವನಿಗಳು ಮುಂತಾದ ಸೃಜನಶೀಲ ಟೂಲ್‌ಗಳ ನಮ್ಮ ಫುಲ್‌ ಸೂಟ್‌, ಸ್ವಯಂ ಅಭಿವ್ಯಕ್ತಿಯ ಮೂಲಕ ಪ್ರೇಕ್ಷಕರನ್ನು ಗಳಿಸಲು ಸಾಕಷ್ಟು ಅವಕಾಶಗಳನ್ನು ಒದಗಿಸುವ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಸಹಾಯಮಾಡುತ್ತದೆ. 

ನೀವು ಏನನ್ನು ಸೃಷ್ಟಿಸಲಿದ್ದೀರಿ ಎನ್ನುವುದನ್ನು ನೋಡಲು ನಾವು ಕಾತರರಾಗಿದ್ದೇವೆ!

ಮರಳಿ ಸುದ್ಧಿಗೆ
1 Snap Inc. ಆಂತರಿಕ ಡೇಟಾ – ಜೂನ್ 30, 2024 ರಂತೆ

2 ಸ್ನಾಪ್‌ ಇಂಕ್‌. ಆಂತರಿಕ ಡಾಟ–ದ್ವಿತೀಯ ತ್ರೈಮಾಸಿಕ 2024 ಗಳಿಕೆ