ಡಿಸೆಂಬರ್ 11, 2024
ಡಿಸೆಂಬರ್ 11, 2024

Snapchat+ ಮತ್ತು ಅದರಾಚೆಗಿನ ಹೊಸ ವೈಶಿಷ್ಟ್ಯಗಳನ್ನು ಅನಾವರಣಗೊಳಿಸುವ ಸಮಯ ಬಂದಿದೆ

ನಮಗೆ ಅತ್ಯಂತ ಮುಖ್ಯವಾಗಿರುವವರ ಜೊತೆಗೆ ಸಂಪರ್ಕಿತರಾಗಿ ಉಳಿಯುವುದು ರಜಾದಿನಗಳ ಋತುವಿನ ಮುಖ್ಯ ಉದ್ದೇಶವಾಗಿದೆ. ನೀವು ನಿಮ್ಮ ಮೆಚ್ಚಿನ ಹಬ್ಬದ ನೆನಪುಗಳನ್ನು ಹಂಚಿಕೊಳ್ಳುತ್ತಿರಬಹುದು, ಲೆನ್ಸ್‌ನೊಂದಿಗೆ ಸ್ನೇಹಿತರಿಗೆ ರಜಾದಿನದ ಸ್ಫೂರ್ತಿಯನ್ನು ನೀಡುತ್ತಿರಬಹುದು ಅಥವಾ ನಿಮ್ಮ ಗುಂಪು ಚಾಟ್ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಪರಿಪೂರ್ಣ ರಜಾದಿನದ ಅಚ್ಚರಿ ನೀಡುವ ಕುರಿತು ಪ್ಲ್ಯಾನ್ ಮಾಡುತ್ತಿರಬಹುದು, ಇವೆಲ್ಲವೂ ಕೇವಲ ಒಂದು Snap ಅಂತರದಲ್ಲಿವೆ.  

ಈ ತಿಂಗಳು, ಇನ್ನಷ್ಟು ಸಂತಸವನ್ನು ಹರಡಲು ಮತ್ತು ನಿಮ್ಮ ಅನುಭವವನ್ನು ಹಿಂದೆಂದಿಗಿಂತ ಹೆಚ್ಚು ಆನಂದದಾಯಕ, ಪ್ರಕಾಶಮಾನ ಮತ್ತು ಹೆಚ್ಚು ಸಂಪರ್ಕಿತವಾಗಿಸಲು ನಿಮಗೆ ನೆರವಾಗುವ ಹೊಸ ವೈಶಿಷ್ಟ್ಯಗಳನ್ನು ನಾವು ನಿಮ್ಮ Snapchat ನಲ್ಲಿ ಅಳವಡಿಸಲಿದ್ದೇವೆ:

Snapchat+ ಸಬ್‌ಸ್ಕ್ರೈಬರ್‌ಗಳು ಶೀಘ್ರದಲ್ಲಿ ತಮ್ಮ ಆ್ಯಪ್‌ನ ಹಾಲ್‌ಗಳು, ವಾಲ್‌ಗಳು, ಹಿನ್ನೆಲೆಗಳು ಮತ್ತು ಬಟನ್‌ಗಳನ್ನು ತಲ್ಲೀನಗೊಳಿಸುವ ಆ್ಯಪ್ ಥೀಮ್‌ಗಳೊಂದಿಗೆ ಅಲಂಕರಿಸಬಹುದು. ಮುಂಚಿತವಾಗಿ ಹೊಂದಿಸಿರುವ ನಮ್ಮ ಒಂದು ಕಲರ್‌ ಸ್ಕೀಮ್‌ನಿಂದ ಒಂದನ್ನು ಆರಿಸಿಕೊಳ್ಳಿ ಮತ್ತು ಪ್ರತಿ ಟ್ಯಾಬ್‌ನಾದ್ಯಂತ ನಿಮ್ಮ Snapchat ನ ನೋಟ ಮತ್ತು ಭಾವವನ್ನು ಪರಿವರ್ತಿಸಿ.

ಸಬ್‌ಸ್ಕೈಬರ್‌ಗಳು ಚಾಟ್‌ನಲ್ಲಿ ನಮ್ಮ ಹೊಸ Bitmoji ಪ್ರತಿಸ್ಪಂದನೆಗಳ ಗುಚ್ಛಕ್ಕೆ ಕೂಡ ಮೊದಲ ಆ್ಯಕ್ಸೆಸ್ ಹೊಂದಿರುತ್ತಾರೆ. ನಿಮ್ಮ ಮನಸ್ಸಿನಲ್ಲಿರುವುದನ್ನು ತಿಳಿಸಲು ಗಾಳಿಯಲ್ಲಿ ಮುತ್ತು ನೀಡಿ, ಒಂದಿಷ್ಟು ಹವಾ ಸೃಷ್ಟಿಸಿ ಅಥವಾ ಸೆಲ್ಯೂಟ್ ಹಂಚಿಕೊಳ್ಳಿ. 

ನಿಮ್ಮ ಮುಂದಿನ ಸೀಕ್ರೆಟ್ ಸಂತಾಗೆ ಉಡುಗೊರೆ ಐಡಿಯಾದ ಅಗತ್ಯವಿದೆಯೇ? ಆ್ಯಪ್‌ನಲ್ಲಿನ Snapchat+ ಉಡುಗೊರೆಯನ್ನು ಅಥವಾ Target, Amazon, Best Buy ಮತ್ತು Walmart ನಲ್ಲಿ ಖರೀದಿಗೆ ಲಭ್ಯವಿರುವ ಉಡುಗೊರೆ ಕಾರ್ಡ್ ಅನ್ನು ಉಡುಗೊರೆಯಾಗಿ ನೀಡಿ!

ರಜಾದಿನದ ಸ್ಫೂರ್ತಿಯಲ್ಲಿ ತೊಡಗಿಕೊಳ್ಳಲು ನೀವು ಸಬ್‌ಸ್ಕ್ರೈಬ್ ಮಾಡಬೇಕಾಗಿಲ್ಲ. ಅಗ್ಲಿ ಸ್ವೆಟರ್ ಮೂಡ್‌ನಂತಹ ಹೊಸ ಲೆನ್ಸ್‌ಗಳು ಬದುಕಿನ ರಜಾದಿನದ ಸ್ಫೂರ್ತಿಯನ್ನು ತುಂಬುತ್ತಿವೆ. 

ಜೊತೆಗೆ, ರಜಾದಿನದ ವಿಚಾರ ಮನಸ್ಸಿಗೆ ಬಂದಾಗ, ನಿಮ್ಮ ಲಿಸ್ಟ್‌ಗಳನ್ನು ಸಿದ್ಧಪಡಿಸಿ ಮತ್ತು ಸಂಭಾಷಣೆಯಲ್ಲಿನ ಸಂದೇಶಗಳನ್ನು ಏಳು ದಿನಗಳ ಕಾಲ ಉಳಿಸಿಕೊಳ್ಳುವ ಚಾಟ್‌ ಸೆಟ್ಟಿಂಗ್‌ಗಳಲ್ಲಿನ ಹೊಸ ಆಯ್ಕೆಯೊಂದಿಗೆ ಅವುಗಳನ್ನು ಮರುಪರಿಶೀಲಿಸಿ. 

ಹ್ಯಾಪಿ ಸ್ನ್ಯಾಪಿಂಗ್‌!


ಸುದ್ದಿಗೆ ಮರಳಿ