ಇಂದು, IAB NewFronts ಗೆ Snap ಮರಳಿತು ಮತ್ತು ಜಾಹೀರಾತುದಾರರಿಗೆ ಹೊಸ ಪರಿಹಾರಗಳನ್ನು, ಹೊಸ ಕಂಟೆಂಟ್ ಪಾಲುದಾರಿಕೆಗಳನ್ನು ಹಾಗೂ Snapchat ನಲ್ಲಿ ಕ್ರಿಯೇಟರ್ಗಳೊಂದಿಗೆ ಕೆಲಸ ಮಾಡಲು ಹೊಸ ವಿಧಾನಗಳನ್ನು ಪರಿಚಯಿಸಿತು.
Snapchat ಸಂಪೂರ್ಣವಾಗಿ ನೈಜ ಸಂಬಂಧಗಳ ಕುರಿತಾಗಿದೆ. ಇಲ್ಲಿ ಜನಪ್ರಿಯರಾಗಿ ಅಥವಾ ಪರಿಪೂರ್ಣರಾಗಿ ಕಾಣಿಸಿಕೊಳ್ಳುವ ಒತ್ತಡವಿಲ್ಲದೆ — 750 ಮಿಲಿಯನ್ ಸಕ್ರಿಯ ಬಳಕೆದಾರರ ನಮ್ಮ ಸಮುದಾಯ ತಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಮೆಚ್ಚಿನ ಕ್ರಿಯೇಟರ್ಗಳೊಂದಿಗೆ ಸಂಪರ್ಕ ಹೊಂದುತ್ತದೆ ಮತ್ತು ವಿನೋದಿಸುತ್ತದೆ. ಆ್ಯಪ್ ಬಳಸುವಾಗ 90% ಗೂ ಅಧಿಕ Snapchatter ಗಳು ಏಕೆ ಖುಷಿಯಾಗಿರುತ್ತಾರೆ ಎನ್ನುವ ಕಾರಣಗಳಲ್ಲಿ ಇದು ಒಂದಾಗಿದೆ. 1
ಇಂದು, Snapchat ನ ವಿಶಿಷ್ಟ ಪ್ರೇಕ್ಷಕರೆದುರು ಕಾಣಿಸಿಕೊಳ್ಳಲು, ಕ್ರಿಯೇಟರ್ಗಳೊಂದಿಗೆ ಕೆಲಸ ಮಾಡಲು ಮತ್ತು ಕಂಟೆಂಟ್ ಪಾಲುದಾರರೊಂದಿಗೆ ಸಕ್ರಿಯಗೊಳ್ಳಲು ಜಾಹೀರಾತುದಾರರಿಗೆ ಸುಲಭವಾಗಿಸುವ ಹೊಸ ಕೊಡುಗೆಗಳನ್ನು ಪ್ರಕಟಿಸಿದೆವು.
ಮೊದಲ ಕಥೆ
ಮೊದಲ ಕಥೆ ನಮ್ಮ ಟೇಕ್ಓವರ್ ಲೈನ್ಅಪ್ನಲ್ಲಿ ಮೊದಲ ಜಾಹೀರಾತು ಮತ್ತು ಮೊದಲ ಲೆನ್ಸ್ ಬಳಿಕ ಇತ್ತೀಚಿನ ಕೊಡುಗೆಯಾಗಿದೆ. ಮೊದಲ ಕಥೆ Snapchatter ಗಳು ನೋಡುವ ಸ್ನೇಹಿತರ ಕಥೆಗಳ ನಡುವೆ ಮೊದಲ ವೀಡಿಯೊ ಜಾಹೀರಾತನ್ನು ಕಾಯ್ದಿರಿಸಲು ಜಾಹೀರಾತುದಾರರಿಗೆ ಅನುಕೂಲ ಕಲ್ಪಿಸುತ್ತದೆ ಮತ್ತು US ನಲ್ಲಿ, ಇದು ಸುಮಾರು 50M ದೈನಂದಿನ ಸಂಭಾವ್ಯ ತಲುಪುವಿಕೆಯನ್ನು ಒದಗಿಸುತ್ತದೆ. ಮೊದಲ ಕಥೆ ಜಾಹೀರಾತುಗಳನ್ನು ನೀಡಲಿರುವ ಆರಂಭಿಕ ಪಾಲುದಾರರಲ್ಲಿ Louis Vuitton, Warner Brothers ಮತ್ತು ಇನ್ನೂ ಹಲವರು ಸೇರಿದ್ದಾರೆ.
ಸ್ಪಾಟ್ಲೈಟ್ನಲ್ಲಿ ಜಾಹೀರಾತುಗಳು
ಇಂದು, ನಾವು ಜಾಗತಿಕವಾಗಿ ಎಲ್ಲ ಜಾಹೀರಾತುದಾರರಿಗಾಗಿ ಸ್ಪಾಟ್ಲೈಟ್ನಲ್ಲಿ ಜಾಹೀರಾತುಗಳು ಅನ್ನು ಆರಂಭಿಸುತ್ತಿದ್ದೇವೆ. ಪ್ರತಿ ತಿಂಗಳು 350 ಮಿಲಿಯನ್ಗೂ ಅಧಿಕ Snapchatter ಗಳು ಸ್ಪಾಟ್ಲೈಟ್ ಕಂಟೆಂಟ್ ವೀಕ್ಷಿಸುತ್ತಿದ್ದು, ಈ ಹೊಸ ವೇದಿಕೆಯಲ್ಲಿ Snapchat ಪ್ರೇಕ್ಷಕರಿಗೆ ಬ್ರ್ಯಾಂಡ್ಗಳನ್ನು ಇನ್ನಷ್ಟು ಸಮೀಪ ತರಲು ಹರ್ಷಿತರಾಗಿದ್ದೇವೆ.
Snap ಸ್ಟಾರ್ ಕೊಲ್ಯಾಬ್ ಸ್ಟುಡಿಯೋ
ವ್ಯವಹಾರ ನಿರ್ಮಿಸಿಕೊಳ್ಳಲು, ತಮ್ಮ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳಲು ಮತ್ತು ಸುಲಭವಾಗಿ ಅದ್ಭುತ ಕಂಟೆಂಟ್ ಸೃಷ್ಟಿಸಲು ಎಲ್ಲ ರೀತಿಯ ಕ್ರಿಯೇಟರ್ಗಳಿಗೆ Snapchat ಅತ್ಯುತ್ತಮ ವೇದಿಕೆಗಳಲ್ಲಿ ಒಂದಾಗಿದೆ. ಈಗ Snap ಸ್ಟಾರ್ಗಳನ್ನು ಕಂಡುಕೊಳ್ಳಲು, ಪಾಲುದಾರಿಕೆ ಮಾಡಲು ಮತ್ತು ಫಲಿತಾಂಶಗಳನ್ನು ಮುನ್ನಡೆಸಲು ಬ್ರ್ಯಾಂಡ್ಗಳಿಗೆ ಪ್ರಮುಖ ಎಂಡ್-ಟು-ಎಂಡ್ ಸೇವೆಯಾಗಿರುವ Snap ಸ್ಟಾರ್ ಕೊಲ್ಯಾಬ್ ಸ್ಟುಡಿಯೋವನ್ನು US ನಲ್ಲಿ ಬಿಡುಗಡೆ ಮಾಡುವುದರೊಂದಿಗೆ, ಬ್ರ್ಯಾಂಡ್ಗಳು ಹಾಗೂ ಕ್ರಿಯೇಟರ್ಗಳು ಜೊತೆಯಾಗಿ ಕೆಲಸ ಮಾಡುವುದನ್ನು ನಾವು ಇನ್ನಷ್ಟು ಸುಲಭವಾಗಿಸುತ್ತಿದ್ದೇವೆ.
ಕೊಲ್ಯಾಬ್ ಸ್ಟುಡಿಯೋ, ನಿರ್ವಹಿಸಿದ ಸರ್ವೀಸ್ ಪ್ರೊಡಕ್ಷನ್ ಮೂಲಕ ಬ್ರ್ಯಾಂಡ್ಗಳು ಮತ್ತು Snap ಸ್ಟಾರ್ಗಳ ನಡುವೆ ಪಾಲುದಾರಿಕೆಯನ್ನು ವೇಗವರ್ಧಿಸಲಿದೆ — ಇದಕ್ಕೆ ನಾಲ್ಕು ಆರಂಭಿಕ ಪಾಲುದಾರರು ಬೆಂಬಲ ನೀಡಿದ್ದಾರೆ: Studio71, Beeline by Brat TV, Influential ಮತ್ತು Whalar — ಇಲ್ಲಿ ಅನುಭವಿ ತಂಡಗಳು, Snap ಸ್ಟಾರ್ಗಳೊಂದಿಗೆ ಪ್ರಾಯೋಜಿತ ಕಥೆಗಳನ್ನು ಹಾಗೂ ವೈಯಕ್ತಿಕಗೊಳಿಸಿದ ಜಾಹೀರಾತು ಕ್ರಿಯೇಟಿವ್ಗಳನ್ನು ರಚಿಸಲು ಮತ್ತು ಪ್ರಸಾರ ಮಾಡಲು ಬ್ರ್ಯಾಂಡ್ಗಳಿಗೆ ಸಹಾಯ ಮಾಡಲಿವೆ.
ಕ್ರೀಡಾ ಪಾಲುದಾರಿಕೆಗಳು
ಪ್ರಮುಖ ಕ್ರೀಡಾ ಪ್ರಾಯೋಜಕತ್ವ ಪ್ಯಾಕೇಜ್ಗಳು ವಿಶ್ವದ ಕೆಲವು ಅತಿದೊಡ್ಡ ಕ್ರೀಡಾಕೂಟಗಳ ಸಂದರ್ಭ Snapchat ನಾದ್ಯಂತ ಜಾಹೀರಾತುಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡಲಿವೆ. NBCUniversal ನ ಪ್ಯಾರಿಸ್ 2024 ಒಲಿಂಪಿಕ್ ಗೇಮ್ಸ್ ಕವರೇಜ್ ಮತ್ತು ಮುಂಬರುವ ಮಹಿಳಾ ವಿಶ್ವ ಕಪ್ನ ನಮ್ಮ ಕವರೇಜ್ಗಾಗಿ, ನಾವು Snapchat ನ ಕಥೆಗಳು, ಸ್ಪಾಟ್ಲೈಟ್ ಮತ್ತು ಕ್ಯಾಮೆರಾದಾದ್ಯಂತ Snapchatter ಗಳ ಅನನ್ಯ ಕಂಟೆಂಟ್ ಅನ್ನು ತರಲಿದ್ದೇವೆ. WNBA, NBA ಮತ್ತು NFL ಜೊತೆಗಿನ ನಮ್ಮ ದೀರ್ಘ ಸಮಯದ ಪಾಲುದಾರಿಕೆಗಳು ಕೂಡ ಕಥೆಗಳು ಹಾಗೂ ಸ್ಪಾಟ್ಲೈಟ್ನಾದ್ಯಂತ ಕಂಟೆಂಟ್ ಒದಗಿಸುವುದನ್ನು ಹಾಗೂ ನಮ್ಮ ಕಮ್ಯುನಿಟಿಗಾಗಿ ಇನ್ನಷ್ಟು ಕ್ರಿಯೇಟಿವ್ ಟೂಲ್ಸ್ ಒದಗಿಸುವುದನ್ನು ಮುಂದುವರಿಸಲಿದೆ.
ವಿಕಸನವಾಗುತ್ತಿರುವ My AI
ಸಂದೇಶ ಕಳುಹಿಸುವಿಕೆ Snapchat ನ ಕೇಂದ್ರಭಾಗವಾಗಿದೆ, ಮತ್ತು ಸಂಭಾಷಣಾತ್ಮಕ AI ಈ ಮೂಲ ಉತ್ಪನ್ನ ಮೌಲ್ಯಕ್ಕೆ ಸುಲಲಿತವಾಗಿ ಹೊಂದಿಕೆಯಾಗುತ್ತದೆ. ಕಳೆದ ತಿಂಗಳು, ನಾವು ನಮ್ಮ AI-ಸಂಚಾಲಿತ ಚಾಟ್ಬಾಟ್, My AI, ಅನ್ನು ನಮ್ಮ ಜಾಗತಿಕ ಸಮುದಾಯಕ್ಕೆ ಬಿಡುಗಡೆ ಮಾಡುವ ಕುರಿತು ಪ್ರಕಟಿಸಿದೆವು. ನಮ್ಮ NewFronts ಪ್ರಸ್ತುತಿಯಲ್ಲಿ, ನಮ್ಮ ಸೇವೆಯಾದ್ಯಂತ ನಮ್ಮ ಕಮ್ಯುನಿಟಿಯ ಅನುಭವವನ್ನು My AI ಸುಧಾರಿಸಬಹುದಾದ ಇನ್ನಷ್ಟು ವಿಧಾನಗಳನ್ನು ನಾವು ಹೇಗೆ ಅನ್ವೇಷಿಸುತ್ತಿದ್ದೇವೆ ಎನ್ನುವ ಕುರಿತ ಆರಂಭಿಕ ನೋಟವನ್ನು ಹಂಚಿಕೊಂಡಿದ್ದೇವೆ.
ಒಬ್ಬ Snapchatter ಕಥೆಗಳನ್ನು ಅಥವಾ ಸ್ಪಾಟ್ಲೈಟ್ ನೋಡುತ್ತಿರಬಹುದು ಅಥವಾ ವಿನೋದಮಯ ಮತ್ತು ಉಪಯುಕ್ತ AR ಲೆನ್ಸ್ಗಳಿಗಾಗಿ ನಮ್ಮ ಶಿಫಾರಸುಗಳನ್ನು ಹುಡುಕುತ್ತಿರಬಹುದು, ಈ ಎಲ್ಲ ಸಂದರ್ಭಗಳಲ್ಲೂ My AI ಜೊತೆಗಿನ ಸಂಭಾಷಣೆಗಳು ನಮ್ಮ ಆ್ಯಪ್ನಾದ್ಯಂತ ಇನ್ನಷ್ಟು ಪ್ರಸ್ತುತವಾದ ಕಂಟೆಂಟ್ ಮತ್ತು ಅನುಭವಗಳನ್ನು ತಲುಪಿಸಲು ನಮಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಸಂಭಾಷಣೆಗಳ ಸಂದರ್ಭ ಸರಿಯಾದ ಕ್ಷಣದಲ್ಲಿ My AI ಉಪಯುಕ್ತ ಮಾಹಿತಿಯನ್ನು ಒದಗಿಸಬಹುದಾದ ಹೊಸ ವಿಧಾನಗಳನ್ನು ಕೂಡ ನಾವು ಪ್ರಯೋಗ ಮಾಡುತ್ತಿದ್ದೇವೆ. ಇದು ಪಾಲುದಾರರ ಪ್ರಸ್ತಾವನೆಗಳಲ್ಲಿ ಸಂಭಾವ್ಯ ಆಸಕ್ತಿ ತೋರಿಸಿರುವ Snapchatter ಗಳನ್ನು ಸಂಪರ್ಕಿಸಲು ಪಾಲುದಾರರಿಗೆ ಸಹಾಯ ಮಾಡುತ್ತಲೇ, ಆ ಕ್ಷಣದಲ್ಲಿ ಸಂಭಾಷಣೆಗೆ ಪ್ರಸ್ತುತವಾದ ಪಾಲುದಾರರೊಂದಿಗೆ ನಮ್ಮ ಕಮ್ಯುನಿಟಿಯನ್ನು ಸಂಪರ್ಕಿಸಲು ಪ್ರಾಯೋಜಿತ ಲಿಂಕ್ಗಳ ಆರಂಭಿಕ ಪರೀಕ್ಷೆಯನ್ನು ಒಳಗೊಂಡಿದೆ. ನಾವು ನಮ್ಮ ಕಮ್ಯುನಿಟಿಗಾಗಿ ವಿಚಾರಪೂರ್ಣ, ಉಪಯುಕ್ತ ಅನುಭವಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಆರಂಭಿಕ, ಪ್ರಾಯೋಗಿಕ ಹಂತದಲ್ಲಿದ್ದೇವೆ.
ಇಂದಿನಿಂದ ಆರಂಭಿಸಿ ಈ ಹೊಸ ಪರಿಹಾರಗಳಾದ್ಯಂತ ಅವಕಾಶ ಕಲ್ಪಿಸಲು ನಮ್ಮ ಜಾಹೀರಾತು, ಕಂಟೆಂಟ್ ಮತ್ತು ಕ್ರಿಯೇಟರ್ ಪಾಲುದಾರರ ಜೊತೆ ಕೆಲಸ ಮಾಡುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ.
Happy Snapping!