ಅಕ್ಟೋಬರ್ 01, 2024
ಅಕ್ಟೋಬರ್ 01, 2024

ಇತ್ತೀಚಿನ ಮಾಹಿತಿ: ನ್ಯೂ ಮೆಕ್ಸಿಕೋದ ಮಹಾನ್ಯಾಯವಾದಿಯವರ ದೂರಿನ ಕುರಿತು ಹೇಳಿಕೆ

ಸಂಪಾದಕರ ಟಿಪ್ಪಣಿ: Snap Inc. ಈ ಕೆಳಗಿನ ಹೇಳಿಕೆಯನ್ನು 1 ಅಕ್ಟೋಬರ್ 2024 ರಂದು ಬಿಡುಗಡೆ ಮಾಡಿತು.

ನಾವು Snapchat ಅನ್ನು ಸ್ನೇಹಿತರ ನಿಕಟ ವಲಯದವರೊಂದಿಗೆ ಸಂವಹನ ಮಾಡುವ ಅಂತರ್ನಿರ್ಮಿತ ಸುರಕ್ಷತಾ ನಿರ್ಬಂಧಗಳನ್ನುಳ್ಳ ಸ್ಥಳವನ್ನಾಗಿ ವಿನ್ಯಾಸಗೊಳಿಸಿದ್ದೇವೆ, ಹಾಗೂ ಅದರೊಂದಿಗೆ ಅಪರಿಚಿತರಿಗೆ ನಮ್ಮ ಸೇವೆಯಲ್ಲಿ ಅಪ್ರಾಪ್ತ ವಯಸ್ಕರನ್ನು ಕಂಡುಕೊಳ್ಳಲು ಕಷ್ಟವಾಗುವಂತೆ ನಾವು ಉದ್ದೇಶಪೂರ್ವಕ ವಿನ್ಯಾಸದ ಆಯ್ಕೆಗಳನ್ನು ಮಾಡಿದ್ದೇವೆ. ನಾವು ನಮ್ಮ ಸುರಕ್ಷತಾ ಕಾರ್ಯವಿಧಾನಗಳು ಮತ್ತು ನೀತಿಗಳನ್ನು ವಿಕಸನಗೊಳಿಸುವುದನ್ನು ಮುಂದುವರಿಸುತ್ತೇವೆ, ಹಾಗೂ ಆ ನಿಟ್ಟಿನಲ್ಲಿ ನಾವು ಕೈಗೊಂಡಿರುವ ಹಲವು ಕ್ರಮಗಳಲ್ಲಿ ನಿರ್ದಿಷ್ಟ ಚಟುವಟಿಕೆಗಳನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಹಿಡಿದು ಅನುಮಾನಾಸ್ಪದ ಖಾತೆಗಳಿಂದ ಸ್ನೇಹ ಬೆಳೆಸುವುದನ್ನು ನಿಷೇಧಿಸುವುದರವರೆಗೂ ಹಾಗೂ ಕಾನೂನು ಜಾರಿ ಮತ್ತು ಸರ್ಕಾರಿ ಏಜೆನ್ಸಿಗಳೊಂದಿಗೆ ಕಾರ್ಯನಿರ್ವಹಿಸುವುದು ಕೂಡ ಸೇರಿರುವವು.

ನಾವು ಇಲ್ಲಿ ಕೈಗೊಳ್ಳುವ ನಮ್ಮ ಕ್ರಮಗಳ ಕುರಿತು ತೀವ್ರ ಕಾಳಜಿ ವಹಿಸುತ್ತೇವೆ ಹಾಗೂ ಕೆಟ್ಟ ಪಾತ್ರಧಾರಿಗಳು ನಮ್ಮ ಸೇವೆಯ ದುರುಪಯೋಗ ಮಾಡಿಕೊಂಡಾಗ ನಮಗೆ ನೋವುಂಟಾಗುತ್ತದೆ. ಯಾವುದೇ ವ್ಯಕ್ತಿ, ಏಜೆನ್ಸಿ ಅಥವಾ ಸಂಸ್ಥೆಯು ಈ ಕೆಲಸವನ್ನು ಒಬ್ಬಂಟಿಯಾಗಿ ಮುನ್ನಡೆಸಲು ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ, ಹಾಗೂ ಆ ಕಾರಣದಿಂದಲೇ ನಾವು ಮಾಹಿತಿಯ ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಹಾಗೂ ಇನ್ನೂ ಹೆಚ್ಚು ಪ್ರಬಲ ಸಂರಕ್ಷಣಾತ್ಮಕ ಕ್ರಮಗಳ ಪರಿಕಲ್ಪನೆಗಳನ್ನು ಕೈಗೊಳ್ಳುವುದಕ್ಕಾಗಿ ಈ ಉದ್ಯಮ, ಸರ್ಕಾರ, ಮತ್ತು ಕಾನೂನು ಜಾರಿ ವ್ಯವಸ್ಥೆಗಳೊಂದಿಗೆ ಸಹಕರಿಸುತ್ತಿದ್ದೇವೆ.

ಸುದ್ದಿಗೆ ಮರಳಿ