ಕ್ಷಣಿಕತೆಯ ಸುತ್ತ ನಿರ್ಮಿಸಿದ ಆ್ಯಪ್ ಆಗಿ, ಜನರು ಬೆಳೆಯುತ್ತಾರೆ ಮತ್ತು ಬದಲಾಗುತ್ತಾರೆ ಎನ್ನುವುದು ನಮಗೆ ತಿಳಿದಿದೆ-ನಾವೂ ಕೂಡ ಖಂಡಿತವಾಗಿ ಕಳೆದ ಹತ್ತು ವರ್ಷಗಳಲ್ಲಿ ಬದಲಾಗಿದ್ದೇವೆ. ಆದ್ದರಿಂದ ಇಂದಿನಿಂದ ಆರಂಭಿಸಿ, ಎಲ್ಲ Snapchatter ಗಳು ತಮ್ಮ ಬಳಕೆದಾರರ ಹೆಸರನ್ನು ಬದಲಾಯಿಸಬಹುದು.
ತಮ್ಮ Snap ಕೋಡ್‌ಗಳು, ಸ್ಟ್ರೀಕ್‌ಗಳು, ಸ್ಕೋರ್‌ಗಳು ಅಥವಾ ನೆನಪುಗಳಿಗೆ ಯಾವುದೇ ಪರಿಣಾಮವಾಗದಂತೆ, ವರ್ಷಕ್ಕೆ ಒಂದು ಬಾರಿ ಯಾವುದೇ ಕ್ಲೇಮ್ ಮಾಡದಿರುವ ಹ್ಯಾಂಡಲ್‌ಗೆ ತಮ್ಮ ಬಳಕೆದಾರರ ಹೆಸರನ್ನು ಅಪ್‌ಡೇಟ್ ಮಾಡಲು Snapchatter ಗಳಿಗೆ ಸಾಧ್ಯವಾಗುತ್ತದೆ. ಅವರಿಗೆ ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ಯಾವುದೇ ಬಳಕೆದಾರರ ಹೆಸರಿನೊಂದಿಗೆ ಅವರು ತಮ್ಮ ಎಲ್ಲ ಸ್ನೇಹಿತರನ್ನು ಇರಿಸಿಕೊಳ್ಳಬಹುದು ಮತ್ತು ಸಂಭಾಷಣೆಗಳನ್ನು ಮುಂದುವರಿಸಬಹುದು.
ಈ ಅತಿ ಹೆಚ್ಚು ಬೇಡಿಕೆಯ ವೈಶಿಷ್ಟ್ಯವು ಮಹತ್ವದ್ದಾಗಿದೆ ಮತ್ತು ನಮ್ಮ ಸಮುದಾಯದಿಂದ ದೀರ್ಘ ಸಮಯದಿಂದ ವಿನಂತಿಸಲ್ಪಟ್ಟಿದ್ದಾಗಿದೆ. ಈ ಅಪ್‌ಡೇಟ್ ಕುರಿತು ನಮ್ಮ ಸಮುದಾಯದ ಅಭಿಪ್ರಾಯವೇನು ಎನ್ನುವುದನ್ನು ನೇರವಾಗಿ ಅವರ ಮಾತುಗಳಲ್ಲೇ ಕೇಳಿಸಿಕೊಳ್ಳಲು, ಕೆಳಗಿನ ವೀಡಿಯೊವನ್ನು ನೋಡಿ.
ಅಪ್‌ಡೇಟ್ ಸಮಯವೇ? ಅದನ್ನು ಮಾಡುವುದು ಹೇಗೆ ಎನ್ನುವ ವಿವರ ಇಲ್ಲಿದೆ:
ಪ್ರೊಫೈಲ್ ಸ್ಕ್ರೀನ್‌ಗೆ ಹೋಗಲು ಕ್ಯಾಮೆರಾದ ಮೇಲ್ಭಾಗದ ಎಡ ಮೂಲೆಯಲ್ಲಿರುವ Bitmoji ಐಕಾನ್ ಟ್ಯಾಪ್ ಮಾಡಿ
ಪ್ರೊಫೈಲ್‌ನ ಮೇಲ್ಭಾಗದ ಬಲ ಮೂಲೆಯಲ್ಲಿ ಇರುವ ಗಿಯರ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡಿ
ಹೆಸರಿನ ಕೆಳಗಡೆಯೇ ಇರುವ "ಬಳಕೆದಾರರ ಹೆಸರು" ಅನ್ನು ಟ್ಯಾಪ್ ಮಾಡಿ ಮತ್ತು ನೀಲಿಯಲ್ಲಿ ಗುರುತು ಮಾಡಿರುವ "ಬಳಕೆದಾರರ ಹೆಸರು ಬದಲಾಯಿಸಿ" ಅನ್ನು ಆಯ್ಕೆ ಮಾಡಿ
ಅಲ್ಲಿಂದ, ಬಳಕೆದಾರರ ಹೆಸರನ್ನು ವರ್ಷಕ್ಕೆ ಒಮ್ಮೆ ಮಾತ್ರ ಬದಲಾಯಿಸಬಹುದು ಎನ್ನುವುದನ್ನು ಜ್ಞಾಪಿಸುವ ಪಾಪ್ ಅಪ್ ಮೇಲೆ ಮುಂದುವರೆಸಿ ಅನ್ನು ಕ್ಲಿಕ್ ಮಾಡಿ
ಹೊಸ ಬಳಕೆದಾರರ ಹೆಸರನ್ನು ಟೈಪ್ ಮಾಡಿ, ಮುಂದೆ ಟ್ಯಾಪ್ ಮಾಡಿ ಮತ್ತು ಅಂತಿಮಗೊಳಿಸಲು Snapchat ಗೆ ಮರಳಿ ಲಾಗಿನ್ ಮಾಡಿ!