ಆರೋಗ್ಯ ಮತ್ತು ಸಂತೋಷದಲ್ಲಿ ಬೆಂಬಲ ನೀಡುವ ನಿಜವಾದ ಸ್ನೇಹದ ಶಕ್ತಿಯಿಂದ ನಾವು ಯಾವಾಗಲೂ ಸ್ಫೂರ್ತಿಗೊಂಡಿದ್ದೇವೆ. ಇದು ನಿರ್ದಿಷ್ಟವಾಗಿ ನಮ್ಮ ಸಮುದಾಯಕ್ಕೆ ನಿಜವಾಗಿದೆ. ಮಾನಸಿಕ ಆರೋಗ್ಯ ಕುರಿತ Snapchatter ಗಳ ಅನುಭವದ ಮೇಲಿನ ಹೊಸ ಸಂಶೋಧನೆಯು ಅನೇಕ ಸಂಶೋಧನೆಗಳು ಸಾಬೀತುಮಾಡಿರುವುದನ್ನು ದೃಢಪಡಿಸಿವೆ -- ಅದು ಏನೆಂದರೆ ಒತ್ತಡ, ಉದ್ವೇಗ, ಖಿನ್ನತೆ ಮತ್ತು ಇನ್ನೂ ಅನೇಕ ಭಾವನಾತ್ಮಕ ಸವಾಲುಗಳನ್ನು ನಿಭಾಯಿಸುವಾಗ ಜನರು ಮೊದಲು ಸ್ನೇಹಿತರನ್ನು ಸಂಪರ್ಕಿಸುತ್ತಾರೆ.
ಈ ಕಷ್ಟಕರ ಕ್ಷಣಗಳಲ್ಲಿ ಸ್ನೇಹಿತರು ಪರಸ್ಪರ ಸಹಾಯ ಮಾಡುವುದಕ್ಕೆ ನೆರವಾಗಲು Snapchat ವಿಶಿಷ್ಟ ಪಾತ್ರ ವಹಿಸಬಲ್ಲದು ಎಂದು ನಾವು ನಂಬಿದ್ದೇವೆ. ಮಾರ್ಚ್‌ನಲ್ಲಿ ನಿಮಗಾಗಿ ನಾವು ಅನ್ನುವ ಹೊಸ ವೈಶಿಷ್ಟ್ಯ ಬಿಡುಗಡೆ ಮಾಡಿದ್ದು, ಇದು Snapchatters ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತ ವಿಷಯಗಳ ಕುರಿತು ಹುಡುಕುವಾಗ ತಜ್ಞ ಸಂಪನ್ಮೂಲಗಳನ್ನು ಒದಗಿಸುತ್ತದೆ.
ಪ್ರೀಮಿಯಂ ಕಂಟೆಂಟ್, ಮತ್ತು ಪಾಲುದಾರಿಕೆಗಳ ಮೂಲಕ Snapchatters ಮತ್ತು ಅವರ ಸ್ನೇಹಿತರನ್ನು ಇನ್ನಷ್ಟು ಬೆಂಬಲಿಸಲು ವಿನ್ಯಾಸಗೊಳಿಸಿರುವ ಹೆಚ್ಚುವರಿ ವೈಶಿಷ್ಟ್ಯಗಳನ್ನು ಇಂದು ನಾವು ಪರಿಚಯಿಸುತ್ತಿದ್ದೇವೆ:
ಧ್ಯಾನ ಮತ್ತು ನೆಮ್ಮದಿಯ ಜಾಗತಿಕ ಮುಂಚೂಣಿ ಸಂಸ್ಥೆಯಾಗಿರುವ, Headspace ಅವರ ಅತ್ಯುತ್ತಮ ಕಂಟೆಂಟ್ ಮತ್ತು ಸಂಪನ್ಮೂಲಗಳನ್ನು Snapchat ನಲ್ಲಿ ನೇರವಾಗಿ ಹಂಚಿಕೊಳ್ಳಲು ಅವರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ. ಮುಂಬರುವ ವಾರಗಳಲ್ಲಿ, ಮಾರ್ಗದರ್ಶನ ಸಹಿತ ಮಿನಿ-ಧ್ಯಾನಗಳು ಮತ್ತು ತಮ್ಮ ಸ್ನೇಹಿತರನ್ನು ಗಮನಿಸುವುದಕ್ಕಾಗಿ ನಮ್ಮ ಸಮುದಾಯಕ್ಕೆ ನೆರವಾಗುವ ಟೂಲ್‌ಗಳನ್ನು Headspace ಒದಗಿಸಲಿದೆ.
ಮಾನಸಿಕ ಕಾಯಿಲೆಯ ಕುರಿತು ವಿವರಿಸಲು ಮತ್ತು ಅದರ ಕುರಿತ ಜನರ ದೃಷ್ಟಿಕೋನ ಬದಲಿಸಲು ಪ್ರಬಲವಾದ ಕಂಟೆಂಟ್ ನೆರವಾಗಬಲ್ಲದು ಎಂದು ನಾವು ನಂಬುತ್ತೇವೆ, ಮತ್ತು ಈ ವರ್ಷದ ಆರಂಭದಲ್ಲಿ ನಾವು 10 ಯುವಜನರ ಮಾನಸಿಕ ಆರೋಗ್ಯದ ಪಯಣವನ್ನು ಚಿತ್ರಿಸಿರುವ ಬಾರ್‌ಕ್ರಾಫ್ಟ್‌ನ "ಮೈಂಡ್ ಯುವರ್‌ಸೆಲ್ಫ್" ಎನ್ನುವ ಡಾಕ್ಯುಮೆಂಟರಿ ಸರಣಿಯನ್ನು ಬಿಡುಗಡೆ ಮಾಡಿದೆವು. ಈ ವರ್ಷದ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ Snap ಒರಿಜಿನಲ್ಸ್ ಕುರಿತು ಇಂದು ನಾವು ಘೋಷಣೆ ಮಾಡುತ್ತಿದ್ದೇವೆ. ಲಾಫ್ ಔಟ್ ಲೌಟ್‌ನಿಂದ "ಕೋಚ್ ಕೀ"ಯಲ್ಲಿ ಕೆವಿನ್ ಹಾರ್ಟ್ ಅವರು, ತಮ್ಮ ವೈಯಕ್ತಿಕ ಅನುಭವಗಳಿಂದ ಪ್ರೇರಿತರಾಗಿ, ಸಕಾರಾತ್ಮಕತೆ ಮತ್ತು ಜ್ಞಾನವನ್ನು ಹಂಚಿಕೊಳ್ಳುತ್ತ, ತಮ್ಮ ಅತ್ಯುತ್ತಮ ಬದುಕನ್ನು ಜೀವಿಸಬಯಸುವವರಗೆ ಕೋಚ್ ಮತ್ತು ಮಾರ್ಗದರ್ಶಕರಾಗುತ್ತಾರೆ.
ಸಂಕಷ್ಟದಲ್ಲಿರುವ Snapchatters ಗೆ ನಮ್ಮ ಆ್ಯಪ್‌ನಲ್ಲಿ ಸಂಪನ್ಮೂಲಗಳನ್ನು ಪ್ರವೇಶಿಸುವುದನ್ನು ಸುಲಭವಾಗಿಸಲು ಕೂಡ ನಾವು ಪ್ರಯತ್ನಿಸುತ್ತಿದ್ದೇವೆ. ತಮ್ಮ ಸ್ನೇಹಿತರು ಅಪಾಯದಲ್ಲಿದ್ದಾರೆ ಎಂದು ಚಿಂತಿತರಾದಾಗ ಎಚ್ಚರಿಕೆ ನೀಡಲು ನಮ್ಮ ಆ್ಯಪ್ ಒಳಗಿನ ವರದಿ ಮಾಡುವಿಕೆ ಟೂಲ್‌ಗಳು Snapchatters ಗೆ ಅವಕಾಶ ಕಲ್ಪಿಸುತ್ತವೆ, ಮತ್ತು ಆ ಸ್ನೇಹಿತರಿಗೆ ಲಭ್ಯ ಇರುವ ನೆರವನ್ನು ತುರ್ತು ಸೇವೆಗಳನ್ನು ಹೇಗೆ ಸಂಪರ್ಕಿಸುವುದು, ಕ್ರಿಸಿಸ್ ಟೆಕ್ಸ್ಟ್ ಲೈನ್ ಮೂಲಕ ತರಬೇತಾದ ಸಮಾಲೋಚಕರಿಗೆ ಹೇಗೆ ಸಂದೇಶ ಕಳುಹಿಸುವುದು, ಅಥವಾ ನ್ಯಾಷನಲ್ ಸೂಯಿಸೈಟ್ ಪ್ರಿವೆನ್ಶನ್ ಹಾಟ್‌ಲೈನ್‌ನಲ್ಲಿ ಲೈವ್ ಆಗಿ ಒಬ್ಬರೊಂದಿಗೆ ಹೇಗೆ ಮಾತಾಡುವುದು ಎನ್ನುವುದನ್ನು Snapchatters ಗೆ ತಕ್ಷಣವೇ ತೋರಿಸುವ ಮೂಲಕ, ಆ ಅನುಭವವನ್ನು ನಾವು ಈಗ ಗಮನಾರ್ಹವಾಗಿ ಸುಧಾರಣೆ ಮಾಡುತ್ತಿದ್ದೇವೆ.
ಈ ಪ್ರಯತ್ನಗಳನ್ನು ಮುಂದುವರಿಸಲು ಮತ್ತು ಸ್ನೇಹಿತರು ಸ್ನೇಹಿತರಿಗೆ ನೆರವಾಗಲು ಇನ್ನಷ್ಟು ವಿಧಾನಗಳನ್ನು ಅಭಿವೃದ್ಧಿಪಡಿಸಲು ನಾವು ಎದುರು ನೋಡುತ್ತೇವೆ.