ಜನವರಿ 23, 2025
ಜನವರಿ 23, 2025

AR ಕ್ರಿಯೇಟರ್‌ಗಳು ಮತ್ತು ಡೆವಲಪರ್‌ಗಳು ರಿವಾರ್ಡ್ ಪಡೆಯಲು ಮತ್ತು ಯಶಸ್ಸು ಕಂಡುಕೊಳ್ಳಲು ಹೊಸ ವಿಧಾನಗಳನ್ನು ಪರಿಚಯಿಸುತ್ತಿದ್ದೇವೆ

ನಾವು ಜಗತ್ತಿನ ಅತ್ಯಂತ ಡೆವಲಪರ್ ಸ್ನೇಹಿ ಪ್ಲಾಟ್‌ಫಾರ್ಮ್ ಆಗಲು ಮತ್ತು ಅದ್ಭುತ ಲೆನ್ಸ್‌ಗಳನ್ನು ನಿರ್ಮಿಸುವುದರಲ್ಲಿ ಹೂಡಿಕೆ ಮಾಡಲು ಡೆವಲಪರ್‌ಗಳನ್ನು ಸಬಲಗೊಳಿಸಲು ಬಯಸುತ್ತೇವೆ

Snap ನಲ್ಲಿ, ನಗದೀಕರಣ ಅವಕಾಶಗಳಿಂದ Spectacles ಮತ್ತು Snap ನ ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಆವಿಷ್ಕರಿಸುವವರೆಗೆ ವಿಶ್ವದ ಬಹುತೇಕ ಎಲ್ಲ ದೇಶಗಳಿಂದ ನಮ್ಮ 3,75,000 ಕ್ಕೂ ಅಧಿಕ AR ಕ್ರಿಯೇಟರ್‌ಗಳು, ಡೆವಲಪರ್‌ಗಳು ಮತ್ತು ತಂಡಗಳನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಇಂದು, ಚಾಲೆಂಜ್ ಟ್ಯಾಗ್‌ಗಳು ಹಾಗೂ ಶೈಕ್ಷಣಿಕ ದರನಿಗದಿ ಮತ್ತು Spectacles ಗಾಗಿ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿಯನ್ನು ಪ್ರಕಟಿಸಲು ನಾವು ಹರ್ಷಿತರಾಗಿದ್ದು, ಲೆನ್ಸ್‌ಗಳನ್ನು ನಿರ್ಮಿಸುವುದನ್ನು ಇನ್ನೂ ಆ್ಯಕ್ಸೆಸಿಬಲ್ ಆಗಿಸಿದ್ದೇವೆ. 

ಪರಿಚಯಿಸುತ್ತಿದ್ದೇವೆ ಚಾಲೆಂಜ್ ಟ್ಯಾಗ್‌ಗಳು 

Snap AR ಡೆವಲಪರ್‌ಗಳು ತಮ್ಮ ಸೃಜನಶೀಲತೆಗಾಗಿ ರಿವಾರ್ಡ್ ಪಡೆಯಬಹುದಾದ ಹೊಸ ವಿಧಾನವನ್ನು ಪ್ರಕಟಿಸಲು ನಾವು ಹರ್ಷಿತರಾಗಿದ್ದೇವೆ: ಚಾಲೆಂಜ್ ಟ್ಯಾಗ್‌ಗಳು. ಈಗ, ಸಕ್ರಿಯ ಚಾಲೆಂಜ್ ಟ್ಯಾಗ್‌ಗಳನ್ನು ಬಳಸಿಕೊಂಡು ಲೆನ್ಸ್‌ಗಳನ್ನು ಸಲ್ಲಿಸುವುದಕ್ಕಾಗಿ ಡೆವಲಪರ್‌ಗಳು ನಗದು ಬಹುಮಾನಗಳನ್ನು ಗೆಲ್ಲಬಹುದಾಗಿದ್ದು, ಅವುಗಳನ್ನು ಒರಿಜಿನ್ಯಾಲಿಟಿ, ತಾಂತ್ರಿಕ ಶ್ರೇಷ್ಠತೆ ಮತ್ತು ಥೀಮ್ ಫೋಕಸ್ ಆಧರಿಸಿ ನಿರ್ಣಯಿಸಲಾಗುತ್ತದೆ. 

ಅದು ಹೇಗೆ ಕೆಲಸ ಮಾಡುತ್ತದೆ ಎಂಬುದು ಇಲ್ಲಿದೆ: ನಾವು AR ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್ Lenslist ಜೊತೆಗೆ ಕೈಜೋಡಿಸಿದ್ದೇವೆ ಇದರಿಂದಾಗಿ ವಿಶ್ವಾದ್ಯಂತದ 100 ಕ್ಕೂ ಅಧಿಕ ದೇಶಗಳ AR ಡೆವಲಪರ್‌ಗಳು – ಅವರು ಮೊದಲ ಬಾರಿಗೆ Snap AR ಅನ್ನು ಅನ್ವೇಷಿಸುತ್ತಿರಲಿ ಅಥವಾ ಈಗಾಗಲೇ ನಮ್ಮ ಸಮುದಾಯದ ಭಾಗವಾಗಿರಲಿ, ಇದರಲ್ಲಿ ಭಾಗವಹಹಿಸಬಹುದಾಗಿದೆ. 

AR ಡೆವಲಪರ್‌ಗಳು ಪ್ರತಿ ಚಾಲೆಂಜ್‌ಗೆ ನೋಂದಾಯಿಸಿಕೊಳ್ಳಬಹುದು, ನಮ್ಮ AR ನಿರ್ಮಾಣದ ಟೂಲ್ Lens Studio ಬಳಸಿಕೊಂಡು ಲೆನ್ಸ್ ನಿರ್ಮಿಸಬಹುದು ಮತ್ತು ಪರಿಗಣಿಸಲ್ಪಡಲು ಲೆನ್ಸ್ ಪ್ರಕಟಣೆಯ ಪ್ರಕ್ರಿಯೆಯಲ್ಲಿ ಚಾಲೆಂಜ್ ಟ್ಯಾಗ್ ಅನ್ನು ಅನ್ವಯಿಸಬಹುದು. ಒಟ್ಟು ಬಹುಮಾನ ಮೊತ್ತದ ಒಂದು ಭಾಗವನ್ನು ಗೆಲ್ಲುವ ಅವಕಾಶದೊಂದಿಗೆ ಹೊಸ ಚಾಲೆಂಜ್‌ಗಳನ್ನು ಪ್ರತಿ ತಿಂಗಳು ಪ್ರಕಟಿಸಲಾಗುತ್ತದೆ.

ಮೊದಲ ಚಾಲೆಂಜ್ ಟ್ಯಾಗ್‌ನ ಥೀಮ್ ಹಾಸ್ಯವಾಗಿದೆ ಮತ್ತು ಅದು ಜನವರಿ 31 ರವರೆಗೆ ತೆರೆದಿರುತ್ತದೆ. ಅದು ಮೊದಲ, ಎರಡನೆಯ ಮತ್ತು ಮೂರನೆಯ ವಿಜೇತರಿಗೆ ತಲಾ $2,500, $1,500, and $1,000 ಬಹುಮಾನದಿಂದಿಗೆ ಮತ್ತು ತಲಾ $250 ಮೊತ್ತದ ಇಪ್ಪತ್ತು ಗೌರವ ಪ್ರಶಸ್ತಿಗಳೊಂದಿಗೆ ಒಟ್ಟು $10,000 ಮೊತ್ತವನ್ನು ಹೊಂದಿರಲಿದೆ. ಪ್ರಶಸ್ತಿ ವಿಜೇತ ಲೆನ್ಸ್‌ಗಳನ್ನು ಫೆಬ್ರವರಿ 14 ರಂದು ಪ್ರಕಟಿಸಲಾಗುತ್ತದೆ. 

Spectacles ಗಾಗಿ ಹೊಸ ಶೈಕ್ಷಣಿಕ ದರನಿಗದಿ ಮತ್ತು ವಿಶೇಷ ವಿದ್ಯಾರ್ಥಿ ರಿಯಾಯಿತಿ

Spectacles ಅನ್ನು ಪರಿಚಯಿಸಿದಾಗಿನಿಂದ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಜಗತ್ತಿನಾದ್ಯಂತದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಸಿಬ್ಬಂದಿಗಳು ಇದರಲ್ಲಿ ಅಸಾಧಾರಣ ಮಟ್ಟದ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಸಮುದಾಯಕ್ಕೆ Spectacles ಆ್ಯಕ್ಸೆಸಿಬಲ್ ಆಗಿದೆ ಎಂದು ಖಚಿತಪಡಿಸಿಕೊಳ್ಳಲು, ನಾವು ಶೈಕ್ಷಣಿಕ ದರನಿಗದಿಯನ್ನು ಮತ್ತು ತಿಂಗಳಿಗೆ $49.50 ಅಥವಾ €55 ಸಬ್‌ಸ್ಕ್ರಿಪ್ಶನ್ ಶುಲ್ಕದ ವಿಶೇಷ ವಿದ್ಯಾರ್ಥಿ ರಿಯಾಯಿತಿಯನ್ನು ಪರಿಚಯಿಸುತ್ತಿದ್ದೇವೆ. 

Spectacles ಲಭ್ಯವಿರುವ ಎಲ್ಲ ದೇಶಗಳಲ್ಲಿ ನೀವು ನಮ್ಮ ಶೈಕ್ಷಣಿಕ ದರನಿಗದಿ ಮತ್ತು ವಿದ್ಯಾರ್ಥಿ ರಿಯಾಯಿತಿಯ ಪ್ರಯೋಜನ ಪಡೆಯಬಹುದಾಗಿದ್ದು, ಈ ದೇಶಗಳಲ್ಲಿ US, ಫ್ರಾನ್ಸ್, ಜರ್ಮನಿ, ಸ್ಪೇನ್, ಇಟಲಿ, ಆಸ್ಟ್ರಿಯಾ ಮತ್ತು ನೆದರ್‌ಲ್ಯಾಂಡ್ಸ್ ಸೇರಿವೆ. ಈ ಮಾರುಕಟ್ಟೆಗಳಲ್ಲಿನ ಮಾನ್ಯತೆ ಪಡೆದಿರುವ ಶೈಕ್ಷಣಿಕ ಸಂಸ್ಥೆಯಲ್ಲಿ ನೋಂದಾಯಿತರಾಗಿರುವ ಅಥವಾ ಕೆಲಸ ಮಾಡುತ್ತಿರುವ ಯಾವುದೇ ವಿದ್ಯಾರ್ಥಿ ಅಥವಾ ಶಿಕ್ಷಕರು ಅರ್ಹರಾಗಿರುತ್ತಾರೆ.

ನಿಮ್ಮ .edu ಅಥವಾ ಶೈಕ್ಷಣಿಕ ಸಂಸ್ಥೆಯ ಇಮೇಲ್ ವಿಳಾಸ ಬಳಸಿಕೊಂಡು Spectacles ಡೆವಲಪರ್ ಪ್ರೋಗ್ರಾಂಗೆ ಅರ್ಜಿ ಸಲ್ಲಿಸಿ ಮತ್ತು ನಿರ್ಮಿಸಲು ಆರಂಭಿಸಿ 1!

US ದರ: $49.50 ತಿಂಗಳಿಗೆ ಅಥವಾ $594 ಮೊದಲ ವರ್ಷಕ್ಕೆ ಮತ್ತು ಆನಂತರ $49.50 ತಿಂಗಳಿಗೆ
EU ದರ: €55 ತಿಂಗಳಿಗೆ ಅಥವಾ €660 ಮೊದಲ ವರ್ಷಕ್ಕೆ ಮತ್ತು ಆನಂತರ €55 ತಿಂಗಳಿಗೆ
*ಕನಿಷ್ಠ ಅವಧಿ 12 ತಿಂಗಳುಗಳು

ಸುದ್ದಿಗೆ ಮರಳಿ

1

ಲಭ್ಯತೆಗೆ ಒಳಪಟ್ಟಿದೆ. ನಿಯಮಗಳು ಅನ್ವಯಿಸುತ್ತವೆ.

1

ಲಭ್ಯತೆಗೆ ಒಳಪಟ್ಟಿದೆ. ನಿಯಮಗಳು ಅನ್ವಯಿಸುತ್ತವೆ.