ನಾಯಕತ್ವ
ಕಾರ್ಯನಿರ್ವಾಹಕ ತಂಡ

ಅಜಿತ್ ಮೋಹನ್
ಮುಖ್ಯ ವಹಿವಾಟು ಅಧಿಕಾರಿ
ಅಜಿತ್ ಮೋಹನ್ ಫೆಬ್ರವರಿ 2025 ರಿಂದ ಮುಖ್ಯ ವಹಿವಾಟು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅವರು ಜನವರಿ 2023 ರಿಂದ ನಮ್ಮ APAC ಅಧ್ಯಕ್ಷರಾಗಿದ್ದರು. Snap ಗೆ ಸೇರುವ ಮೊದಲು, ಅವರು ನಾಲ್ಕು ವರ್ಷಗಳ ಕಾಲ Meta ದ ಭಾರತದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು Hotstar ನ ಸ್ಥಾಪಕ ಸಿಇಒ ಕೂಡ ಆಗಿದ್ದರು, Hotstar ಅನ್ನು ಪ್ರಾರಂಭಿಸಿ ಭಾರತದ #1 ಪ್ರೀಮಿಯಂ ವೀಡಿಯೊ ಸ್ಟ್ರೀಮಿಂಗ್ ವೇದಿಕೆಯಾಗಿ ನಿರ್ಮಿಸಿದ ಹೆಗ್ಗಳಿಕೆ ಅವರದ್ದು. ಅಜಿತ್ ಅವರು McKinsey & Company ಹಾಗೂ Arthur D. Little ನಲ್ಲಿ ಮಾಧ್ಯಮ ಮತ್ತು ದೂರಸಂಪರ್ಕ ವಿಭಾಗದಲ್ಲಿ ಏಷ್ಯಾ, ಉತ್ತರ ಅಮೆರಿಕ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕಾದಾದ್ಯಂತದ ಗ್ರಾಹಕರೊಂದಿಗೆ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು.