ಕಾರ್ಯನಿರ್ವಾಹಕ ತಂಡ

ಬೆಟ್ಸಿ ಕೆನ್ನಿ ಲ್ಯಾಕ್
ಉಪಾಧ್ಯಕ್ಷ, Global Brand Experience
ಮಿಸ್. ಲ್ಯಾಕ್ ಅಕ್ಟೋಬರ್ 2021 ರಿಂದ Global Brand Experience ನಲ್ಲಿ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಜುಲೈ 2016 ರಿಂದ ಅಕ್ಟೋಬರ್ 2021 ರವರೆಗೆ ಗ್ಲೋಬಲ್ ಬ್ರಾಂಡ್ ಕಾರ್ಯತಂತ್ರದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು ಮಿಸ್. ಲ್ಯಾಕ್, Vanity Fair ನಲ್ಲಿ ಕಾಂಟ್ರಿಬ್ಯೂಟಿಂಗ್ ಎಡಿಟರ್ ಆಗಿ ಕಾರ್ಯನಿರ್ವಹಿಸಿದ್ದರು, ನಿಯತಕಾಲಿಕೆಯ ಸಿಲಿಕಾನ್ ವ್ಯಾಲಿ ಮತ್ತು ತಂತ್ರಜ್ಞಾನ ವಿಷಯದ ಮೇಲ್ವಿಚಾರಣೆ ಮಾಡುತ್ತಿದ್ದರು ಮತ್ತು ನ್ಯೂ ಎಸ್ಟಾಬ್ಲಿಷ್‌ಮೆಂಟ್ ಸಭೆಯ ಸರಣಿಯನ್ನು ಸೃಷ್ಟಿಸಿ ಮುನ್ನಡೆಸುತ್ತಿದ್ದರು. ಅದಕ್ಕೂ ಮೊದಲು, ಮಿಸ್. ಲ್ಯಾಕ್ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಲೋಕೋಪಕಾರಿ ಮತ್ತು ಸಾರ್ವಜನಿಕ ನೀತಿ ಸಲಹೆಗಾರ್ತಿಯಾಗಿದ್ದರು. ಮಿಸ್. ಲ್ಯಾಕ್ Snap ಫೌಂಡೇಷನ್, ಲಿಂಕನ್ ಸೆಂಟರ್ ಥಿಯೇಟರ್ ಮತ್ತು ವಾಲ್ಡನ್ ವುಡ್ಸ್ ಪ್ರಾಜೆಕ್ಟ್‌ನ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಿಸ್. ಲ್ಯಾಕ್ ನ್ಯೂಯಾರ್ಕ್ ಮಹಾನಗರ ಪ್ರದೇಶದ ಸಾರ್ವಜನಿಕ ದೂರದರ್ಶನ ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡುವ WNET ನ ಆಜೀವ ಪೋಷಕಿ ಕೂಡ ಆಗಿದ್ದಾರೆ. ಮಿಸ್. ಲ್ಯಾಕ್ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ B.A. ಪದವಿ ಪಡೆದಿದ್ದಾರೆ.