ಅಕ್ಟೋಬರ್ 17, 2024
ಅಕ್ಟೋಬರ್ 17, 2024

ಡೆವಲಪರ್ಗಳು ಸ್ಪೆಕ್ಟಕಲ್ಸ್ ಅನ್ನು ಈಗಾಗಲೇ ನಿರ್ಮಿಸುತ್ತಿದ್ದಾರೆ – ನಮ್ಮೊಂದಿದೆ ಜೊತೆಯಾಗಿ!

ನಾವು Spectacles ನ ಐದನೇ ಪೀಳಿಗೆಯನ್ನು ಮತ್ತು ನಮ್ಮ ಹೊಚ್ಚ ಹೊಸ ಆಪರೇಟಿಂಗ್ ಸಿಸ್ಟಂ Snap OS ಅನ್ನು ಕಳೆದ ತಿಂಗಳು ನಮ್ಮ ವಾರ್ಷಿಕ Snap ಪಾಲುದಾರರ ಶೃಂಗಸಭೆಯಲ್ಲಿ ಪರಿಚಯಿಸಿದೆವು. ಮಾರನೆಯ ದಿನ ಲೆನ್ಸ್ ಫೆಸ್ಟ್‌ನಲ್ಲಿ, ಡೆವಲಪರ್‌ಗಳು, ಕ್ರಿಯೇಟರ್‌ಗಳು ಮತ್ತು ಉತ್ಸಾಹಿಗಳ ತಂಡವು ವೇದಿಕೆಯ ಅನ್ವೇಷಣೆಯನ್ನು ಆರಂಭಿಸಲು Spectacles ಮತ್ತು ಡೆವಲಪರ್ ಪ್ರೊಗ್ರಾಂ ಸಬ್‌ಸ್ಕ್ರಿಪ್ಶನ್ ಅನ್ನು ಸ್ವೀಕರಿಸಿದರು. 

ಕೆಲವೇ ವಾರಗಳಲ್ಲಿ ಡೆವಲಪರ್‌ಗಳು ನಿರ್ಮಿಸಿದ ಲೆನ್ಸ್‌ಗಳನ್ನು ನೋಡಿ ನಾವು ಆಶ್ಚರ್ಯಚಕಿತರಾಗಿದ್ದೇವೆ. ಕ್ಯಾಲಿಗ್ರಫಿಯ ಕಲೆಯನ್ನು ಕರಗತ ಮಾಡಿಕೊಳ್ಳಲು, ಪೂಲ್‌ನಲ್ಲಿ ಉತ್ತಮ ಹೊಡೆತಗಳ ಮೂಲಕ ಆಡಲು ಮತ್ತು ಹೊರಾಂಗಣ ನಡಿಗೆಯನ್ನು ಪ್ರತಿಕ್ರಿಯಾಶೀಲ ಸಾಹಸವನ್ನಾಗಿಸಲು ನಮ್ಮ ಸಮುದಾಯಕ್ಕೆ ಸಹಾಯ ಮಾಡಲು ಡೆವಲಪರ್‌ಗಳು ಈಗಾಗಲೇ ಲೆನ್ಸ್‌ಗಳನ್ನು ನಿರ್ಮಿಸಿದ್ದಾರೆ. ನಮ್ಮ ಸಮುದಾಯವು ಕಲಿಯಲು, ಆಟವಾಡಲು ಮತ್ತು ಕೆಲಸ ಮಾಡಲು ಸಹಾಯ ಮಾಡುವುದಕ್ಕಾಗಿ ಜಗತ್ತನ್ನೇ ಕ್ಯಾನ್ವಾಸ್ ಮಾಡಿಕೊಂಡಿರುವ ಡೆವಲಪರ್‌ಗಳ ಮುಂದೆ ಮಿತಿರಹಿತ ಸಾಧ್ಯತೆಗಳಿವೆ. 

ಡೆವಲಪರ್‌ಗಳ ಮೊದಲ ಆದ್ಯತೆಯ ಆಯ್ಕೆಗಳೊಂದಿಗೆ ನಮ್ಮ ಮೆಚ್ಚಿನ ಕೆಲವು ಇಲ್ಲಿವೆ! https://www.spectacles.com/lens-studio ನಲ್ಲಿ ಇಂದೇ Spectacles ಡೆವಲಪರ್ ಪ್ರೊಗ್ರಾಂ ಅನ್ನು ಸೇರಿ.




ಇನ್ನಾ ಸ್ಪ್ಯಾರೋ ಅವರಿಂದ ಒರಿಗಾಮಿ

Snapchat | inna-sparrow
X |
inna_sparrow

"ಒರಿಗಾಮಿ ಎಂಬುದು ನಿಗೂಢವಾದ ಕಾಗದದಲ್ಲಿ ರಚಿಸುವ ಕಲೆಯಾಗಿದೆ ಮತ್ತು ವಾಸ್ತುಶಿಲ್ಪಿಯಾಗಿ ನನ್ನ ವೃತ್ತಿಯನ್ನು ಪ್ರತಿಧ್ವನಿಸುವುದರಿಂದ ಕಾಗದದ ಚೂರುಗಳಿಂದ ಬೃಹತ್ ಆಕೃತಿಗಳನ್ನು ರಚಿಸುವ ವಿಚಾರವನ್ನು ನಾನು ಇಷ್ಟಪಡುತ್ತೇನೆ. ಹೆಚ್ಚು ಬಳಕೆದಾರ-ಸ್ನೇಹಿ, ಸಹಜ ಮತ್ತು ಆರಾಮದಾಯಕವಾಗಿಸುವ ಮೂಲಕ ಯಾವುದೇ ಅನುಭವವನ್ನು ಸರಳಗೊಳಿಸುವ AR ನಲ್ಲಿ ಅಪೇಕ್ಷಿತ ಮಾಹಿತಿಯನ್ನು Spectacles ಸೂಕ್ಷ್ಮವಾಗಿ ತಲುಪಿಸಬಲ್ಲದು. ಒರಿಗಾಮಿ ರಚಿಸಲು ನಿಮಗೆ ಎರಡೂ ಕೈಗಳ ಅಗತ್ಯವಿರುವುದರಿಂದ, ಕೈಗಳನ್ನು ಆಧರಿಸಿದ Spectacles ನ ಆಪರೇಟಿಂಗ್ ಸಿಸ್ಟಂ ಅದನ್ನು ಪರಿಪೂರ್ಣ ಹೊಂದಿಕೆಯಾಗುವಂತೆ ಮಾಡಿದೆ.” 


ವೊವಾ ಕುರ್ಬಟೋವ್ ಅವರಿಂದ ಕ್ಯಾಲಿಗ್ರಫಿ

Snapchat | stpixel
X |
V_Kurbatov

“Lens Studio ಎಷ್ಟು ಸಲೀಸು ಮತ್ತು ಹಗುರವಾಗಿದೆ ಎಂದರೆ ಹೊಸ Spectacles ಗೆ ಬಹುತೇಕ ಯಾವುದೇ AR ಅನುಭವವನ್ನು ನಿರ್ಮಿಸಲು ಅದನ್ನು ಬಳಸಬಹುದು ಮತ್ತು ಯಾವುದೇ ಅಡೆತಡೆಗಳಿಲ್ಲದೆ ನಿರ್ಮಿಸಲು ನನಗೆ ಅವಕಾಶ ಕಲ್ಪಿಸುವುದಕ್ಕಾಗಿ ಸ್ವತಃ Spectacles ಸರಳವಾದ ಆದರೆ ಸಂಯೋಜಿತ ಸ್ವರೂಪವನ್ನು ಹೊಂದಿವೆ. ಇತರ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ಈ ಬಳಕೆಯ ಉದ್ದೇಶಕ್ಕಾಗಿ ನಿರ್ಮಿಸಲು ನಾವು ಪ್ರಯತ್ನಿಸುತ್ತಿರುವಾಗ ನಾವು ಕ್ಯಾಲಿಗ್ರಫಿಯೊಂದಿಗೆ ಆರಂಭಿಸಿದೆವು, ಆದರೆ ಅದು ಎಂದಿಗೂ ಅದು ಸಾಧ್ಯವಾಗಲಿಲ್ಲ. ಮರುಬಳಕೆಗೆ ಸಿದ್ಧವಿರುವ ಸ್ವತ್ತುಗಳು ಸಂಪೂರ್ಣವಾಗಿ ನಿರ್ಮಿಸಲು ಮತ್ತು ವಿಳಂಬವಿಲ್ಲದೆ ಬರೆಯುವುದಕ್ಕೆ ಆರಂಭಿಸಲು ನನಗೆ ಸಹಾಯ ಮಾಡಿದವು.”


ಸ್ಟುಡಿಯೊ ANRK ಅವರಿಂದ ಪೂಲ್ ಅಸಿಸ್ಟ್

Snapchat | anrick 
X |
studioanrk

"Spectacles ಗಾಗಿ ನಿರ್ಮಿಸುವುದು, ವಿಶೇಷವಾಗಿ ಕ್ಷಿಪ್ರ ಮೂಲಮಾದರಿಯ ಸೃಷ್ಟಿಕರ್ತನಾಗಿ ಆನಂದದಾಯಕವಾಗಿತ್ತು. ನಮ್ಮ ಸೃಜನಶೀಲ ವಿಚಾರಗಳನ್ನು ತ್ವರಿತವಾಗಿ ಸಾಕಾರಗೊಳಿಸಲು, ಪುನರಾವರ್ತಿಸಲು ಮತ್ತು ನಂತರ ಹೆಚ್ಚು ವಿಸ್ತೃತವಾಗಿ ನಿರ್ಮಿಸಲು ನಮಗೆ ಅವಕಾಶ ಕಲ್ಪಿಸುವ ಮೂಲಕ, ಆರಂಭಿಸುವುದನ್ನು ಮತ್ತು ಮುಂದುವರಿಸುವುದನ್ನು ಪ್ಲ್ಯಾಟ್‌ಫಾರ್ಮ್ ಅತ್ಯಂತ ಸುಲಭವಾಗಿಸುತ್ತದೆ. ನೈಜ ಪ್ರಪಂಚದ ವಸ್ತುಗಳಿಗೆ ಮೂರ್ತ ಎಫೆಕ್ಟ್‌ಗಳನ್ನು ಸೇರಿಸುವ ಮೂಲಕ ಸಾರ್ವಜನಿಕ ಸ್ಥಳಗಳೊಂದಿಗೆ ನಾವು ಸಂವಾದ ನಡೆಸುವ ವಿಧಾನವನ್ನು ಮರುಚಿಂತನೆ ಮಾಡಲು Spectacles ನಮಗೆ ಅವಕಾಶ ಕಲ್ಪಿಸುವ ವಿಧಾನವನ್ನು ನಾವು ಇಷ್ಟಪಡುತ್ತೇವೆ. ಪೂಲ್ ಅಸಿಸ್ಟ್ ಹಿಂದಿರುವ ವಿಚಾರವು ಸಾಮಾಜಿಕ ಮಾಧ್ಯಮದಲ್ಲಿ ಪೂಲ್ ಆಡುವುದು ಹೇಗೆ ಎಂಬುದರ ಕುರಿತ ಕಿರು ಮಾರ್ಗದರ್ಶಿಗಳಿಂದ ರೂಪಿತವಾಗಿದೆ ಮತ್ತು AR ನಲ್ಲಿ ಜನರಿಗಾಗಿ ನೈಜ ಬದುಕಿನಲ್ಲಿ ಆ ವಿವರವನ್ನು ಯಾಕೆ ಸಾಕಾರಗೊಳಿಸಬಾರದು? ಎಂದು ನಾವು ಯೋಚಿಸಿದೆವು."


ಟೀಮ್ ZapChat ನಿಂದ (ನಮ್ಮ 2024 ಲೆನ್ಸಥಾನ್ ವಿಜೇತರು!) ಎಮರ್ಜೆನ್ಸೀ

Snapchat | samjones.ar | three.swords | paigepiskin | emma.sofjia | gokatcreate 
X |
@refract_studio | @paigepiskin | @eemmasofjia | @gokatcreate

“2024 ರ ಹ್ಯಾಕಥಾನ್‌ನಲ್ಲಿ ಟೀಮ್ ZapChat ಆಗಿ, ತುರ್ತು ಪರಿಸ್ಥಿತಿಗಳಲ್ಲಿ ಒಂದು ಎಫಿನೆಫ್ರೈನ್ ಇಂಜೆಕ್ಟರ್ (EpiPen) ಅನ್ನು ಬಳಸುವುದು ಹೇಗೆ ಎಂದು ಸಾಮಾನ್ಯ ಜನರಿಗೆ ಕಲಿಸಿಕೊಡುವ ವರ್ಧಿತ ವಾಸ್ತವ ಅನುಭವವನ್ನು ನಾವು Spectacles ಬಳಸಿಕೊಂಡು ಅಭಿವೃದ್ಧಿಪಡಿಸಿದೆವು. ಕೇವಲ 16% EpiPen ಬಳಕೆದಾರರು ಮಾತ್ರ ಸರಿಯಾದ ಬಳಕೆಯನ್ನು ಪ್ರದರ್ಶಿಸಲು ಸಾಧ್ಯವಾಗಿದ್ದರಿಂದ, ನಾವು ವೈದ್ಯಕೀಯ ವೃತ್ತಿಪರರ ಬದಲಾಗಿ ಉದ್ದೇಶಪೂರ್ವಕವಾಗಿ ಗ್ರಾಹಕರ ಮೇಲೆ ಗಮನ ಕೇಂದ್ರೀಕರಿಸಿದೆವು. ಈ ಟೂಲ್‌ಗಳನ್ನು ಯಾರಾದರೂ ಆತ್ಮವಿಶ್ವಾಸದಿಂದ ನಿಭಾಯಿಸಲು ಅವರನ್ನು ಸಬಲೀಕರಿಸುವುದಕ್ಕಾಗಿ ನಾವು ವರ್ಧಿತ ವಾಸ್ತವ ಮತ್ತು Spectacles ಬಳಸಿಕೊಳ್ಳಲು ಬಯಸುತ್ತೇವೆ ಮತ್ತು ಅತ್ಯಂತ ಮುಖ್ಯವಾಗಿದ್ದಾಗ ಅವುಗಳನ್ನು ಬಳಸಲು ಎಲ್ಲರೂ ಸಜ್ಜಾಗಿರುವ ಜಗತ್ತಿನ ಕುರಿತು ಉತ್ಸಾಹಿಗಳಾಗಿದ್ದೇವೆ.”


ಏಡನ್ ವೂಲ್ಫ್ ಅವರಿಂದ RPG

Snapchat | aidan_wolf 
X |
aidan _wolf

“ನನ್ನ ಸೋದರರು ಮತ್ತು ಸೋದರಿಯರ ಜೊತೆಗಿನ ಬಾಲ್ಯದ ಸಾಹಸಗಳಿಂದ RPG ಪ್ರೇರಿತವಾಗಿದ್ದು, ಇದರಲ್ಲಿ ಕೈಯಲ್ಲಿನ ಕೋಲು ಮತ್ತು ಒಂದಿಷ್ಟು ಕಲ್ಪನೆಯು ಅರಣ್ಯವನ್ನು ಮಾಂತ್ರಿಕತೆ ಮತ್ತು ರಕ್ಕಸರ ಜಗತ್ತಾಗಿ ಪರಿವರ್ತಿಸಬಲ್ಲದು. ಇವತ್ತಿನವರೆಗೂ ನಾನು ಎಲ್ಲೆಡೆ ನಡೆದುಕೊಂಡು ಹೋಗುತ್ತೇನೆ ಮತ್ತು ದಾರಿಯುದ್ದಕ್ಕೂ, ಸೂರ್ಯನ ಬಿಸಿಲಿನಡಿ ನಾನು ಆಡಬಹುದಾದ ಆಟವನ್ನು ಹೊಂದಿರುವುದು ನನ್ನೊಳಗಿನ ಮಗುತನದೊಂದಿಗೆ ಮರುಸಂಪರ್ಕಗೊಳ್ಳಲು ಪರಿಪೂರ್ಣ ವಿಧಾನ ಎಂಬಂತೆ ಕಂಡಿತು. ಈ ಬಾಲ್ಯದ ನೆನಪನ್ನು ಫಿಟ್‌ನೆಸ್ ಅಭಿಮುಖವಾದ ಸ್ಟೆಪ್ ಕೌಂಟರ್ ಜೊತೆಗೆ ನಾನು ಸಂಯೋಜಿಸಿದಾಗ, ಕೇವಲ ಆಕರ್ಷಕವಾಗಿರುವುದಷ್ಟೇ ಅಲ್ಲ, Spectacles ಅನ್ನು ಪ್ರತಿದಿನವೂ ನಾನು ಬಳಸುವುದನ್ನು ನಿಜವಾಗಿ ಕಲ್ಪಿಸಿಕೊಳ್ಳಬಹುದಾದ ಉತ್ಪನ್ನವು ತಕ್ಷಣವೇ ನನಗೆ ಗೋಚರಿಸಿತು."

ಸುದ್ದಿಗೆ ಮರಳಿ