ಸೆಪ್ಟೆಂಬರ್ 21, 2023
ಸೆಪ್ಟೆಂಬರ್ 21, 2023

Microsoft Advertising ನಿಂದ ಸಂಚಾಲಿತವಾದ ಪ್ರಾಯೋಜಿತ ಲಿಂಕ್‌ಗಳೊಂದಿಗೆ My AI ಅನ್ನು ವಿಕಸನಪಡಿಸುವುದು

My AI ಒಳಗಡೆ ಪ್ರಾಯೋಜಿತ ಲಿಂಕ್‌ಗಳನ್ನು ಸಂಚಾಲಿತಗೊಳಿಸಲು Microsoft Advertising ಜೊತೆಗೆ Snap ಪಾಲುದಾರಿಕೆ ಮಾಡಿಕೊಂಡಿದೆ ಎಂದು ಪ್ರಕಟಿಸಲು ಇವತ್ತು ನಾವು ರೋಮಾಂಚಿತರಾಗಿದ್ದೇವೆ.

ಈ ಏಪ್ರಿಲ್‌ನಲ್ಲಿ ನಾವು ನಮ್ಮ AI-ಸಂಚಾಲಿತ ಚಾಟ್‌ಬಾಟ್‌ My AI ಅನ್ನು 750 ಮಿಲಿಯನ್‌ಗೂ ಅಧಿಕ ಮಾಸಿಕ Snapchatter ಗಳ ನಮ್ಮ ಜಾಗತಿಕ ಸಮುದಾಯಕ್ಕೆ ಬಿಡುಗಡೆ ಮಾಡಲು ಆರಂಭಿಸಿದೆವು. 150 ಮಿಲಿಯನ್‌ಗೂ ಅಧಿಕ ಜನರು 10 ಬಿಲಿಯನ್‌ಗೂ ಅಧಿಕ ಸಂದೇಶಗಳನ್ನು My AI ಗೆ ಕಳುಹಿಸಿದ್ದು, ಲಭ್ಯವಿರುವ ಅತ್ಯಧಿಕ ಬಳಕೆಯ ಕಂಸ್ಯೂಮರ್ ಚಾಟ್‌ಬಾಟ್‌ಗಳಲ್ಲಿ My AI ಗೆ ಸ್ಥಾನ ಕಲ್ಪಿಸಿದ್ದಾರೆ.

ಆಹಾರ ಮತ್ತು ಭೋಜನ, ಸೌಂದರ್ಯ ಮತ್ತು ಫಿಟ್‌ನೆಸ್, ಶಾಪಿಂಗ್ ಮತ್ತು ಗ್ಯಾಜೆಟ್‌ಗಳು ಹಾಗೂ ಇನ್ನೂ ಹಲವು ವಿಷಯಗಳಾದ್ಯಂತ ಹರಡಿರುವ ನೈಜ-ಜಗತ್ತಿನ ಶಿಫಾರಸುಗಳನ್ನು ಸ್ವೀಕರಿಸಲು ಮತ್ತು ಅವರ ಆಸಕ್ತಿಗಳ ಕುರಿತು ತಿಳಿದುಕೊಳ್ಳಲು ಲಕ್ಷಾಂತರ ಜನರು My AI ಬಳಸುವುದರೊಂದಿಗೆ, ಸಂಭಾಷಣೆಯ AI ಅನ್ನು ನಮ್ಮ ಸಮುದಾಯವು ಅಳವಡಿಸಿಕೊಂಡ ವಿಧಾನಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಆಯ್ದ ಪಾಲುದಾರರಿಂದ Snapchatter ಗಳಿಗೆ ಸಂಬಂಧಿತ ಕಂಟೆಂಟ್ ಮತ್ತು ಅನುಭವಗಳನ್ನು ಹುಡುಕುವ ಸಲುವಾಗಿ My AI ನಲ್ಲಿ ಪ್ರಾಯೋಜಿತ ಲಿಂಕ್‌ಗಳ ಪರೀಕ್ಷೆಯನ್ನು ಕೂಡ ನಾವು ಇತ್ತೀಚೆಗೆ ಆರಂಭಿಸಿದ್ದೇವೆ.

My AI ಜೊತೆಗೆ ಪ್ರಾಯೋಜಿತ ಲಿಂಕ್‌ಗಳನ್ನು ಸಂಚಾಲಿತಗೊಳಿಸಲು Microsoft Advertising ಜೊತೆಗೆ Snap ಪಾಲುದಾರಿಕೆ ಮಾಡಿಕೊಂಡಿದೆ ಎಂದು ಪ್ರಕಟಿಸಲು ನಾವು ರೋಮಾಂಚಿತರಾಗಿದ್ದೇವೆ. ಚಾಟ್ API ಗೆ Microsoft's Advertising ನ ಜಾಹೀರಾತುಗಳಿಂದ ಸಂಚಾಲಿತವಾಗಿರುವ, ಪ್ರಾಯೋಜಿತ ಲಿಂಕ್‌ಗಳು ತಮ್ಮ ಸಂಭಾಷಣೆಗಳಿಗೆ ಪ್ರಸ್ತುತವಾದ ಪಾಲುದಾರರೊಂದಿಗೆ ನಮ್ಮ ಸಮುದಾಯವನ್ನು ಸಂಪರ್ಕಪಡಿಸುತ್ತವೆ, ಇದೇ ವೇಳೆ ತಮ್ಮ ಆಫರಿಂಗ್‌ನಲ್ಲಿ ಸಂಭಾವ್ಯ ಆಸಕ್ತಿಯನ್ನು ಸೂಚಿಸಿದ ತಕ್ಷಣ Snapchatter ಗಳನ್ನು ತಲುಪಲು ಪಾಲುದಾರರಿಗೆ ಸಹಾಯ ಮಾಡುತ್ತವೆ.

U.S. ಮತ್ತು ಆಯ್ದ ಮಾರುಕಟ್ಟೆಗಳಲ್ಲಿನ Microsoft Advertising ನ ಕ್ಲಯಂಟ್‌ಗಳು ಈಗ ಸಂಭಾಷಣೆಗೆ ಪ್ರಸ್ತುತವಾಗಿರುವ ಲಿಂಕ್‌ಗಳನ್ನು ಸುಲಲಿತವಾಗಿ ತಲುಪಿಸಲು My AI ಮೂಲಕ Snapchatter ಗಳ ಜೊತೆ ತೊಡಗಿಕೊಳ್ಳಬಹುದು. ನಮ್ಮ ಸಮುದಾಯಕ್ಕಾಗಿ ನಾವು ವಿಚಾರಪೂರ್ಣ, ಉಪಯುಕ್ತ ಅನುಭವಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ ಎಂದು ಖಚಿತಪಡಿಸಲು ನಾವಿನ್ನೂ ಪ್ರಾಯೋಗಿಕ ಹಂತದಲ್ಲಿದ್ದೇವೆ ಮತ್ತು ಮುಂಬರುವ ತಿಂಗಳುಗಳಲ್ಲಿ – ನಮ್ಮ ಸಮುದಾಯ ಮತ್ತು ನಮ್ಮ ವ್ಯವಹಾರ ಎರಡಕ್ಕೂ – My AI ಅನ್ನು ವರ್ಧಿಸಲು ವಿವಿಧ ಪಾಲುದಾರರೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ.

ಮರಳಿ ಸುದ್ಧಿಗೆ