Snap's Music Library Expands With Universal Music Group

Today, we’re excited to announce a new deal with Universal Music Group to include their artists’ music into Snap’s library and be featured in Sounds, Lenses and more to make sharing a moment even more fun.  
ಈ ಹಿಂದಿನ ಅಕ್ಟೋಬರ್‌ನಲ್ಲಿ ನಾವು ನಿಮ್ಮ Snap ಗಳಿಗೆ ಸಂಗೀತ ಸೇರಿಸುವ ಹೊಸ ವೈಶಿಷ್ಟ್ಯ, ಧ್ವನಿಗಳು ಅನ್ನು ಪರಿಚಯಿಸಿದೆವು - ಅದು ಹಿಟ್ ಆಗಿದೆ! ಧ್ವನಿಗಳು ಈಗ ಜಾಗತಿಕವಾಗಿ Android ಮತ್ತು iOS ನಲ್ಲಿ ಲಭ್ಯ ಇವೆ ಹಾಗೂ ಬಿಡುಗಡೆ ಆದಾಗಿನಿಂದ, Snapchat ನಲ್ಲಿ ಧ್ವನಿಗಳಿಂದ ಸಂಗೀತದೊಂದಿಗೆ ಸೃಷ್ಟಿಸಿದ ವೀಡಿಯೊಗಳು ಒಟ್ಟಾರೆಯಾಗಿ 521 ಮಿಲಿಯನ್ ವೀಡಿಯೊಗಳಾಗಿವೆ ಮತ್ತು 31 ಬಿಲಿಯನ್ ವೀಕ್ಷಣೆಗಳನ್ನು ಪಡೆದಿವೆ.
ನಿಮ್ಮ Snap ಗಳಿಗೆ ಪರಿಪೂರ್ಣ ಧ್ವನಿಗಳನ್ನು ಹುಡುಕುವುದನ್ನು ಇನ್ನೂ ಸುಲಭವಾಗಿಸಲು ನಾವು ಪ್ರಯತ್ನ ಮುಂದುವರಿಸಿದ್ದೇವೆ. ಇತ್ತೀಚೆಗೆ ನಾವು ಹುಡುಕು ಮತ್ತು ಶಾರ್ಟ್‌ಕಟ್‌ಗಳಂಥ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆವು, ಮತ್ತು ಸರಿಯಾದ ಧ್ವನಿಯನ್ನು ತ್ವರಿತವಾಗಿ ಕಂಡುಕೊಳ್ಳಲು Snaphatter ಗಳಿಗೆ ಸಹಾಯ ಮಾಡುವ ಪ್ಲೇಲಿಸ್ಟ್‌ಗಳನ್ನು ಸೇರಿಸುವುದನ್ನು ನಾವು ಮುಂದುವರಿಸುತ್ತೇವೆ. ನಮ್ಮ ಸಮುದಾಯಕ್ಕೆ ಪ್ರಸ್ತುತವಾಗಿರುವ ಸಂಗೀತ ಶೈಲಿಗಳು, ಮೂಡ್‌ಗಳು ಮತ್ತು ಕ್ಷಣಗಳ ಮೇಲೆ ಹಾಗೂ Snapchat ನಲ್ಲಿ ಟ್ರೆಂಡ್ ಆಗುತ್ತಿರುವ ಹಾಡುಗಳ ಮೇಲೆ ಪ್ಲೇಲಿಸ್ಟ್‌ಗಳು ಗಮನ ಕೇಂದ್ರೀಕರಿಸಲಿವೆ.
ಇಂದು, ಯುನಿವರ್ಸಲ್ ಮ್ಯೂಸಿಕ್ ಗ್ರೂಪ್‌ನ ಕಲಾವಿದರ ಸಂಗೀತವನ್ನು Snap ನ ಲೈಬ್ರರಿಯಲ್ಲಿ ಸೇರಿಸುವುದಕ್ಕಾಗಿ ಮತ್ತು ಒಂದು ಕ್ಷಣವನ್ನು ಹಂಚಿಕೊಳ್ಳುವುದನ್ನು ಇನ್ನಷ್ಟು ವಿನೋದವನ್ನಾಗಿಸಲು ಧ್ವನಿಗಳು, ಲೆನ್ಸ್‌ಗಳು ಮತ್ತು ಇನ್ನಷ್ಟರಲ್ಲಿ ಪ್ರದರ್ಶಿಸುವುದಕ್ಕಾಗಿ ಆ ಸಂಸ್ಥೆ ಜೊತೆಗಿನ ಹೊಸ ಒಪ್ಪಂದವನ್ನು ಘೋಷಿಸಲು ನಾವು ರೋಮಾಂಚಿತರಾಗಿದ್ದೇವೆ.
ಸರಾಸರಿ, ನಮ್ಮ ಸಮುದಾಯ ಪ್ರತಿದಿನ 5 ಬಿಲಿಯನ್‌ಗಿಂತ ಹೆಚ್ಚು Snap ಗಳನ್ನು ಸೃಷ್ಟಿಸುತ್ತದೆ, ಹಾಗೂ ವೀಡಿಯೊ ರಚನೆಯನ್ನು ಮತ್ತು ಸಂವಹನಗಳನ್ನು ಧ್ವನಿಗಳು ಇನ್ನಷ್ಟು ಅಭಿವ್ಯಕ್ತಗೊಳಿಸುತ್ತವೆ, ಮತ್ತು ಸ್ನೇಹಿತರಿಗೆ ಸಂಗೀತ ಶಿಫಾರಸುಗಳನ್ನು ಇನ್ನಷ್ಟು ಆಪ್ತವಾಗಿಸುತ್ತವೆ.
ನೀವು ಏನನ್ನು ಸೃಷ್ಟಿಸಲಿದ್ದೀರಿ ಎನ್ನುವುದನ್ನು ನೋಡಲು ನಾವು ಕಾತರರಾಗಿದ್ದೇವೆ!
Back To News