
Snap ನ ಹೊಸ Spectacles ಮೊದಲ ಯುರೋಪಿಯನ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿದೆ
ಆಸ್ಟ್ರಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್‌ನಲ್ಲಿರುವ ಡೆವಲಪರ್‌ಗಳು ಈಗ Spectacles ಡೆವಲಪರ್ ಪ್ರೊಗ್ರಾಂಗೆ ಸೇರಲು ಅರ್ಜಿ ಸಲ್ಲಿಸಬಹುದು
ಇಂದು ನಾವು ಆಸ್ಟ್ರಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್‌ಗೆ ನಮ್ಮ ಹೊಸ Spectacles ನ ವಿಸ್ತರಣೆಯನ್ನು ಪ್ರಕಟಿಸುತ್ತಿದ್ದು -- ಇವು US ಹೊರಗೆ ಲಭ್ಯವಾಗಲಿರುವ ಮೊದಲ ಆರು ಮಾರುಕಟ್ಟೆಗಳಾಗಲಿವೆ.
ನಾವು ನಮ್ಮ ಐದನೆಯ ಪೀಳಿಗೆಯ Spectacles ಮತ್ತು ನಮ್ಮ ಹೊಚ್ಚ ಹೊಸ ಆಪರೇಟಿಂಗ್ ಸಿಸ್ಟಂ Snap OS ಅನ್ನು ಕಳೆದ ತಿಂಗಳು ನಮ್ಮ Snap ಪಾಲುದಾರರ ಶೃಂಗಸಭೆಯಲ್ಲಿ ಪರಿಚಯಿಸಿದೆವು. ಮಾರನೆಯ ದಿನ ಲೆನ್ಸ್ ಹಬ್ಬದಲ್ಲಿ, ವೇದಿಕೆಯನ್ನು ಅನ್ವೇಷಿಸುವುದನ್ನು ಆರಂಭಿಸುವುದಕ್ಕಾಗಿ ಲೆನ್ಸ್ ಡೆವಲಪರ್‌ಗಳು, ಕ್ರಿಯೇಟರ್‌ಗಳು ಮತ್ತು ಉತ್ಸಾಹಿಗಳ ತಂಡವು Spectacles ಮತ್ತು ಡೆವಲಪರ್ ಪ್ರೊಗ್ರಾಂ ಸಬ್‌ಸ್ಕ್ರಿಪ್ಶನ್ ಅನ್ನು ಸ್ವೀಕರಿಸಿದರು.
Spectacles ಅನ್ನು ಆರಂಭಿಸಿದಾಗಿನಿಂದ, ಡೆವಲಪರ್‌ಗಳು ಈಗಾಗಲೇ ಅದ್ಭುತ ಲೆನ್ಸ್‌ಗಳನ್ನು ನಿರ್ಮಿಸಿದ್ದಾರೆ ಮತ್ತು ಜಾಗತಿಕ AR ಡೆವಲಪರ್ ಸಮುದಾಯವು ನಮಗೆ ವಿಸ್ತೃತವಾದ ಆಸಕ್ತಿಗಳನ್ನು ವ್ಯಕ್ತಪಡಿಸಿದೆ.
ಈಗ, Spectacles ಗಾಗಿ ಲೆನ್ಸ್‌ಗಳನ್ನು ನಿರ್ಮಿಸಲು ಮತ್ತು ಹಂಚಿಕೊಳ್ಳಲು ಇನ್ನೂ ಹೆಚ್ಚು ಡೆವಲಪರ್‌ಗಳು ಅರ್ಜಿ ಸಲ್ಲಿಸಬಹುದು. 12 ತಿಂಗಳುಗಳ ಬದ್ಧತೆಯ ಅಗತ್ಯದೊಂದಿಗೆ ತಿಂಗಳಿಗೆ €110 ಲೆಕ್ಕದಲ್ಲಿ, ಸಬ್‌ಸ್ಕ್ರಿಪ್ಶನ್ Spectacles ಗೆ ಆ್ಯಕ್ಸೆಸ್ ಒದಗಿಸಲಿದೆ ಮತ್ತು ಡೆವಲಪರ್‌ಗಳು ಮತ್ತು ಪ್ರಾಜೆಕ್ಟ್‌ಗಳನ್ನು ಸಾಕಾರಗೊಳಿಸಲು Spectacles ತಂಡವು ಸಹಾಯ ಮಾಡಲಿದೆ. *
ಮುಂಬರುವ ವಾರಗಳಲ್ಲಿ ಆಯ್ದ ದೇಶಗಳಲ್ಲಿ ಡೆವಲಪರ್‌ಗಳಿಗೆ Spectacles ರವಾನೆಯನ್ನು ಆರಂಭಿಸಲಾಗುತ್ತದೆ ಮತ್ತು 2025 ರಲ್ಲಿ ಹೆಚ್ಚಿನ ಮಾರುಕಟ್ಟೆಗಳಲ್ಲಿ ನಾವು ಬಿಡುಗಡೆ ಮಾಡುತ್ತೇವೆ.
Spectacles ಡೆವಲಪರ್ ಪ್ರೊಗ್ರಾಂಗೆ ಈಗ ಇಲ್ಲಿ ಅರ್ಜಿ ಸಲ್ಲಿಸಿ: https://www.spectacles.com/lens-studio.
*ಸಬ್‌ಸ್ಕ್ರಿಪ್ಶನ್ ಆಯ್ದ ದೇಶಗಳಲ್ಲಿ ಮಾತ್ರ ಲಭ್ಯವಿದೆ. ಕಾನೂನು ಅನುಮತಿಸಿರುವಲ್ಲಿ 12-ತಿಂಗಳುಗಳ ಬದ್ಧತೆಯ ಅಗತ್ಯವಿದೆ. ಲಭ್ಯತೆಯು ಸೀಮಿತವಾಗಿದೆ.
AR ಡೆವಲಪರ್‌ಗಳು Spectacles ಕುರಿತ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ
"ಮೊದಲ ಕ್ಷಣದಿಂದಲೇ Spectacles ಕುರಿತು ನಾನು ರೋಮಾಂಚಿತನಾಗಿದ್ದೆ! ಫೋನ್ ಸ್ಕ್ರೀನ್ ಬದಲಾಗಿ – ನೇರವಾಗಿ ನಿಮ್ಮ ಕೈಗಳೊಂದಿಗೆ ಡಿಜಿಟಲ್ ಜಗತ್ತನ್ನು ನ್ಯಾವಿಗೇಟ್ ಮಾಡುವುದು – ಸಂಪೂರ್ಣವಾಗಿ ಹೊಸ ಮಟ್ಟದ ತಲ್ಲೀನಗೊಳಿಸುವ ಕಥೆ ಹೇಳುವಿಕೆಯ ಮತ್ತು ಗೇಮ್‌ಪ್ಲೇ ಬಾಗಿಲನ್ನು ತೆರೆಯುತ್ತದೆ. ಸಂಪರ್ಕಿತ ಲೆನ್ಸ್‌ಗಳು ಹಾಗೂ AI ಮತ್ತು ಧ್ವನಿ ನಿಯಂತ್ರಣದ ಅಡಚಣೆರಹಿತ ಏಕೀಕರಣದ ಮೂಲಕ ಸ್ನೇಹಿತರೊಂದಿಗೆ AR ಅನುಭವ ಪಡೆಯುವುದು ವಿಶೇಷವಾಗಿ ರೋಮಾಂಚನಕಾರಿಯಾಗಿದೆ. ಸಣ್ಣ ಕನ್ನಡಕದಲ್ಲಿ ಅಷ್ಟೊಂದು ವೈಶಿಷ್ಟ್ಯಗಳನ್ನು ಸಂಯೋಜಿಸುವುದು ನಿಜಕ್ಕೂ ಮಾಂತ್ರಿಕವಾಗಿದೆ!
ಡೆವಲಪ್‌ಮೆಂಟ್‌ಗಾಗಿ, Snap ಹಲವು ಉಪಯುಕ್ತ ಟೂಲ್‌ಗಳನ್ನು ಒದಗಿಸುತ್ತದೆ, ಅವು Spectacles ಗಾಗಿ ಪ್ರತಿಕ್ರಿಯಾಶೀಲ AR ಜಗತ್ತುಗಳೊಂದಿಗೆ ರಚಿಸುವುದು ಮತ್ತು ಪ್ರಯೋಗ ಮಾಡುವುದನ್ನು ಸುಲಭವಾಗಿಸುತ್ತವೆ. ಟ್ರ್ಯಾಕಿಂಗ್ ಅತ್ಯಂತ ನಿಖರವಾಗಿದೆ, ಚಿತ್ರವು ಅತ್ಯಂತ ಸ್ಪಷ್ಟ ಹಾಗೂ ಅಧಿಕ ಕಾಂಟ್ರಾಸ್ಟ್ ಹೊಂದಿದೆ ಮತ್ತು ಕೆಲವೇ ಸೆಕೆಂಡ್‌ಗಳಲ್ಲಿ ನಿಮ್ಮ ಕನ್ನಡಕದಲ್ಲಿ ನೀವು AR ಲೆನ್ಸ್‌ಗಳನ್ನು ನೋಡಬಹುದು.
ಪ್ರತಿಯೊಬ್ಬರಿಗೂ ಅತ್ಯುತ್ತಮ AR ಕನ್ನಡಕಗಳನ್ನು ಒದಗಿಸುವುದಕ್ಕೆ ನಾವು ತುಂಬಾ ಸಮೀಪದಲ್ಲಿದ್ದೇವೆ ಎಂದು ನನಗೆ ಮನವರಿಕೆಯಾಗಿದೆ ಮತ್ತು ದಣಿವರಿಯರ ನಾವೀನ್ಯತೆಯ ಮೂಲಕ Snap, ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ."
“Spectacles ನಮ್ಮ ತಂಡಕ್ಕೆ ನೈಜ ಆಟದ ಮೈದಾನವಾಗಿದೆ! ಹ್ಯಾಂಡ್ಸ್ ಫ್ರೀ ಆಗಿ ಲೈವ್, ತಲ್ಲೀನಗೊಳಿಸುವ ಅನುಭವವನ್ನು ರಚಿಸುವುದು ನಮ್ಮಂತಹ ಏಜೆನ್ಸಿಗೆ ಪಥ ಪರಿವರ್ತಕವಾಗಿದ್ದು, ದೈನಂದಿನ ಸಂವಹನಗಳಿಗೆ ಮಾಂತ್ರಿಕತೆಯ ಸ್ಪರ್ಶ ನೀಡಲು ಮತ್ತು AR ಕಥೆ ಹೇಳುವಿಕೆಯ ಹೊಸ ಆಯಾಮಗಳನ್ನು ಆನ್ವೇಷಿಸಲು ನಮಗೆ ಅವಕಾಶ ಕಲ್ಪಿಸುತ್ತಿದೆ.
ಮಾರುಕಟ್ಟೆಯಲ್ಲಿರುವ ಭಾರವಾದ AR/XR ಸಾಧನಗಳಿಗಿಂತ ಹಗುರ, ಕಾಂಪ್ಯಾಕ್ಟ್ ಆಗಿರುವ Spectacles ವಿನ್ಯಾಸವು ಅವುಗಳನ್ನು ದೀರ್ಘಾವಧಿಗೆ ಧರಿಸಲು ಆರಾಮದಾಯಕವಾಗಿಸುತ್ತದೆ. ಜೊತೆಗೆ, ಅದೇ AR ಕಂಟೆಂಟ್ ಅನ್ನು ಒಮ್ಮೆಗೆ ಹಲವು ಜನರೊಂದಿಗೆ ಹಂಚಿಕೊಳ್ಳುವ ಸಾಮರ್ಥ್ಯವು ರೋಮಾಂಚಜ, ಸಮುದಾಯ ಅನುಭವಕ್ಕೆ ಅವಕಾಶ ಕಲ್ಪಿಸುತ್ತದೆ.
Lens Studio ಜೊತೆಗೆ, ನಿಖರ ಕೈ ಟ್ರ್ಯಾಕಿಂಗ್, AI-ಸಂಚಾಲಿತ ಸಂವಹನಗಳು ಮತ್ತು ಅಡಚಣೆರಹಿತ ಮತ್ತು ಅಸಾಧಾರಣವಾಗಿ ತಲ್ಲೀನಗೊಳಿಸುವ ವಿಧಾನಗಳಲ್ಲಿ ಕಥೆಗಳನ್ನು ಹೆಣೆಯಲು ನಮಗೆ ಅವಕಾಶ ಕಲ್ಪಿಸುವ ಬೆರಗುಗೊಳಿಸುವ ವಿಷುವಲ್ ಎಫೆಕ್ಟ್‌ಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ನಾವು ಪೂರ್ಣವಾಗಿ ಪರೀಕ್ಷಿಸಬಹುದು. ಈ ಸಾಹಸದ ಭಾಗವಾಗಲು ನಾವು ರೋಮಾಂಚಿತರಾಗಿದ್ದೇವೆ!”
- ಆಂಟೊನೆ ವು, ಆ್ಯಟಮಿಕ್ ಡಿಜಿಟಲ್ ಡಿಸೈನ್‌ನ CEO ಮತ್ತು ಸಹ-ಸಂಸ್ಥಾಪಕ